ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
ಪಾಕಿಸ್ತಾನ ತನ್ನದೇ ಸಾವಿರ ಸಮಸ್ಯೆ ಇಟ್ಟುಕೊಂಡು ಅಕ್ಕಪಕ್ಕದ ದೇಶಗಳ ನೆಮ್ಮದಿಗೆ ಬೆಂಕಿ ಹಚ್ಚುವ ಕೆಲಸವನ್ನು ಪದೇ ಪದೇ ಮಾಡುತ್ತಲೇ ಇರುತ್ತದೆ. ಅದರಲ್ಲೂ ಅತಿ ಭ್ರಷ್ಟ ರಾಜಕೀಯ ನಾಯಕರು ಪಾಕಿಸ್ತಾನದಲ್ಲಿ ಇರುವ ಪರಿಣಾಮ, ಪಾಕ್ ಉದ್ಧಾರ ಆಗಲು ಅವರೆಲ್ಲಾ ಬಿಡುವುದೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಸ್ವತಃ ಪಾಕಿಸ್ತಾನ ಪ್ರಜೆಗಳೇ ಅಲ್ಲಿನ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಾ, ಆಗಾಗ ಪ್ರತಿಭಟನೆ ನಡೆಸುತ್ತಾ ಇರುತ್ತಾರೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ರಾಜಕಾರಣಿಗಳು ಮತ್ತೆ ಮತ್ತೆ ಉಗ್ರರ ಬೆನ್ನಿಗೆ ನಿಂತು ತಮ್ಮ ಬುದ್ಧಿ ತೋರಿಸುತ್ತಾರೆ. ಆದರೆ ಇಂತಹ ಪಾಕ್ ನಾಯಕರಿಗೆ ಈಗ ಬಲೂಚಿಸ್ತಾನ ಬಂಡುಕೋರರು ಕಬ್ಬಿಣದ ಕಡಲೆಯಾಗಿದ್ದಾರೆ.
ಪಾಕಿಸ್ತಾನದ ಮೂಲೆ ಮೂಲೆಯಲ್ಲೂ ಉಗ್ರವಾದ ಬೆರೆತು ಹೋಗಿದ್ದು, ಉಗ್ರವಾದಕ್ಕೆ ಪಾಕಿಸ್ತಾನದಲ್ಲಿ ರಾಜಕೀಯ ನಾಯಕರೇ ಬೆಂಬಲ ನೀಡುತ್ತಾ ಬಂದಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆ ಕೂಡ ಈ ರೀತಿಯಾಗಿ ಉಗ್ರರನ್ನು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ಅದೇ ಉಗ್ರರು ಮುಳುವಾಗಿ ಪರಿಣಮಿಸುತ್ತಿದ್ದು, ಪದೇ ಪದೇ ಪಾಕ್ ನೆಲದಲ್ಲಿ ರಕ್ತ ಹರಿಸುತ್ತಿದ್ದಾರೆ ಟೆರರ್‌ಗಳು. ಇಂತಹ ಸಮಯದಲ್ಲಿ, ಪಾಕಿಸ್ತಾನ ದೇಶದ ಬಲೂಚಿಸ್ತಾನ ಭಾಗದಲ್ಲಿ ಬಂಡುಕೋರರು ಪಾಕ್ ಸರ್ಕಾರ & ಸೇನೆ ವಿರುದ್ಧ ಸಮರ ಶುರು ಮಾಡಿದ್ದಾರೆ. ಈ ಸಮರ ಇದೀಗ ಹಿಂಸಾತ್ಮಕ ರೂಪ ಪಡೆಯುವ ಜೊತೆಗೆ ಪಾಕಿಸ್ತಾನದ ಮಾನ ಹಾಗೂ ಮರ್ಯಾದಿ ಜಾಗತಿಕ ಮಟ್ಟದಲ್ಲಿ ಹರಾಜು ಆಗುವಂತೆ ಮಾಡಿದೆ.

ಪಾಕ್ ರಾಜಕಾರಣಿಗಳ ಕರಾಳ ಮುಖ
ಬಲೂಚಿಸ್ತಾನ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದರೂ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ, ಇಲ್ಲಿನ ಪ್ರಜೆಗಳನ್ನು ಪಾಕಿಸ್ತಾನ ಸರ್ಕಾರ ಸರಿಯಾಗಿ ನೋಡಿಕೊಳ್ಳುತ್ತಲೇ ಇಲ್ಲ ಎಂಬುದು ಸ್ಥಳೀಯರ ಆರೋಪ. ಪಾಕಿಸ್ತಾನ ಕೆಲವೇ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿಯನ್ನ ಮಾಡುತ್ತಾ ಬಲೂಚಿಸ್ತಾನ ಸೇರಿದಂತೆ ಗಡಿ ಭಾಗದ ಪ್ರದೇಶಗಳನ್ನು ಕಡೆಗಣನೆ ಮಾಡುತ್ತಿದೆ ಎನ್ನುವ ಆರೋಪಗಳ ನಡುವೆ ದೊಡ್ಡ ಸಮರ ಶುರುವಾಗಿದೆ.
ಅದರಲ್ಲೂ ಬಲೂಚಿಸ್ತಾನ ಪ್ರದೇಶದಲ್ಲಿ ಪಾಕ್ ಸರ್ಕಾರದ ವಿರುದ್ಧ ಈಗ ಬಂಡುಕೋರರ ಪಡೆಯೇ ಹುಟ್ಟಿಕೊಂಡಿದ್ದು, ಅವರು ಇದೀಗ ದೊಡ್ಡ ಮಟ್ಟದ ಹಿಂಸಾತ್ಮಕ ಹೋರಾಟ ಶುರು ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನ ಮಾನ ಜಾಗತಿಕ ಮಟ್ಟದಲ್ಲಿ ಮತ್ತೆ ಮತ್ತೆ ಹರಾಜು ಆಗುತ್ತಾ ಇದೆ. ಹಾಗೇ ತನ್ನ ಕೈಯಲ್ಲಿ ಆಂತರಿಕ ಶಾಂತಿ ಕಾಪಾಡಲು ಆಗುತ್ತಿಲ್ಲ ಎಂಬುದನ್ನ ಕೂಡ ಇದೇ ಪಾಕ್ ಮತ್ತೆ ಮತ್ತೆ ಒಪ್ಪಿಕೊಂಡಂತೆ ಈ ಘಟನೆಯಿಂದ ಭಾಸವಾಗುತ್ತಿದೆ.












Click it and Unblock the Notifications