ಬಹರೇನ್ ನಲ್ಲಿ ಶ್ರೀಕೃಷ್ಣ ದೇಗುಲದ ಪುನರ್ ಅಭಿವೃದ್ಧಿಗೆ ಮೋದಿ ಚಾಲನೆ

ಮನಾಮ (ಬಹರೇನ್), ಅಗಸ್ಟ್ 25: ಬಹರೇನ್ ನ ರಾಜಧಾನಿಯಲ್ಲಿ ಇರುವ ಶ್ರೀಕೃಷ್ಣನ ಇನ್ನೂರು ವರ್ಷದ ಹಳೆಯ ದೇಗುಲದ $ 4.2 ಮಿಲಿಯನ್ ಪುನರ್ ಅಭಿವೃದ್ಧಿ ಯೋಜನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ಗಲ್ಫ್ ರಾಷ್ಟ್ರ ಬಹರೇನ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ.

ಮನಾಮದಲ್ಲಿ ಇರುವ ಅತ್ಯಂತ ಹಳೆಯ ಶ್ರೀನಾಥ್ ಜೀ ದೇಗುಲದಲ್ಲಿ ಪ್ರಾರ್ಥಿಸಿದರು. ಯುಎಇಯಲ್ಲಿ ಶನಿವಾರ ರುಪೇ ಕಾರ್ಡ್ ಆರಂಭಿಸಿದ ನಂತರ ಪ್ರಸಾದ ಕೂಡ ತಂದರು.

ಈ ಪ್ರೀತಿಗೆ ಬಹರೇನ್ ಗೆ ಧನ್ಯವಾದಗಳು. ಮನಾಮದಲ್ಲಿರುವ ಇನ್ನೂರು ವರ್ಷಗಳ ಹಳೆಯ ಶ್ರೀನಾಥ್ ಜೀ ದೇವಾಲಯಕ್ಕೆ ನರೇಂದ್ರ ಮೋದಿ ಅವರು ಐತಿಹಾಸಿಕ ಭೇಟಿ ಪೂರ್ಣಗೊಳಿಸಿದ್ದಾರೆ. ಬಹರೇನ್ ಸಮಾಜದ ಬಹುತ್ವವನ್ನು ಈ ದೇವಾಲಯವು ಪ್ರತಿನಿಧಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Bahrain Capital City Sri Kishna Temple Re Development Program Launched By Modi

ಶ್ರೀನಾಥ್ ಜೀ (ಶ್ರೀಕೃಷ್ಣ) ದೇಗುಲದ ಪುನರ್ ಅಭಿವೃದ್ಧಿ ಕಾರ್ಯಕ್ರಮ ಸದ್ಯದಲ್ಲೇ ಆರಂಭವಾಗಲಿದೆ. $ 4.2 ಮಿಲಿಯನ್ ವೆಚ್ಚದಲ್ಲಿ ಹದಿನಾರು ಸಾವಿರದ ಐನೂರು ಚದರಡಿ ಅಳತೆಯ ಭೂಮಿಯಲ್ಲಿ, ನಾಲ್ಕು ಅಂತಸ್ತಿನಲ್ಲಿ ನಲವತ್ತೈದು ಸಾವಿರ ಚದರಡಿ ನಿರ್ಮಾಣವನ್ನು ಮೂವತ್ತು ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತದೆ.

ಬಹರೇನ್ ನ ಈ ದೇಗುಲದಲ್ಲಿ ಹಿಂದೂ ಸಾಂಪ್ರದಾಯಿಕ ಮದುವೆಗಳು ನಡೆಸಲು ಅನುಕೂಲ ಆಗುವಂತೆ ಕೂಡ ವ್ಯವಸ್ಥೆ ಮಾಡಲಾಗುತ್ತದೆ. ಆ ಮೂಲಕ ಬಹರೇನ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+