ಯೋಗಗುರು ಬಾಬಾ ರಾಮದೇವ್ ಭಾರತದ ಭವಿಷ್ಯದ ಪ್ರಧಾನಿ!
ನ್ಯೂಯಾರ್ಕ್, ಜುಲೈ 28: "ಭಾರತದ ಭವಿಷ್ಯದ ಪ್ರಧಾನಿ ಯೋಗ ಗುರು ರಾಮದೇವ್" ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ ನುಡಿಚಿತ್ರವೊಂದರಲ್ಲಿ ಬರೆಯಲಾಗಿದೆ.
ರಾಮದೇವ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಲಾಗಿದ್ದು, ಭಾರತದ ಪ್ರಧಾನಿಯಾಗುವ ಎಲ್ಲಾ ಅರ್ಹತೆಯೂ ಬಾಬಾ ರಾಮದೇವ್ ಅವರಿಗಿದೆ ಎಂದು ವ್ಯಂಗ್ಯದ ದಾಟಿಯಲ್ಲಿ ಬರೆಯಲಾಗಿದೆ.
ಡೊನಾಲ್ಡ್ ಟ್ರಂಪ್ ಹೇಗೆ ಅಮೆರಿಕದಾದ್ಯಂತ ತಮ್ಮ ಟ್ರಂಪ್ ಕಂಪನಿಯ ವ್ಯವಹಾರವನ್ನು ಪಸರಿಸಿದ್ದಾರೋ ಹಾಗೆಯೇ ಭಾರತದಲ್ಲಿ ಪತಂಜಲಿ ಕಂಪನಿಯ ಮೂಲಕ ಬಾಬಾ ರಾಮದೇವ್ ಅವರು ಸಹ ವ್ಯವಹಾರ ಪಸರಿಸಿದ್ದಾರೆ.

ಮೋದಿ ಬೆಳವಣಿಗೆ ಹಿಂದೆ ಬಾಬಾ ರಾಮದೇವ್!
ಪ್ರಧಾನಿ ನರೇಂದ್ರ ಮೋದಿ ಅವರ ಬೆಳವಣಿಗೆಯ ಹಿಂದೆ ಬಾಬಾ ರಾಮದೇವ್ ಇದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ. ಬಿಜೆಪಿಯೊಂದಿಗೆ ರಾಮದೇವ್ ಅವರಿಗೆ ಆಪ್ತ ಸಂಬಂಧ ಇದೆ. ಜೊತೆಗೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಮದೇವ್ ಅವೆ ವ್ಯವಹಾರ ಸಾಮ್ರಾಜ್ಯವೂ ವಿಸ್ತರಿಸಿದೆ ಎಂದು ಇದರಲ್ಲಿ ಬರೆಯಲಾಗಿದೆ.

ಇದು ವ್ಯಂಗ್ಯವೇ?
ಅಷ್ಟಕ್ಕೂ ಈ ನ್ಯೂಯಾರ್ಕ್ ಟೈಮ್ಸ್ ಗೆ ಬಾಬಾ ರಾಮದೇವ ಅವರ ಮೇಲೆ ಮುನಿಸಿದೆಯೇ? ಈ ಹೇಳಿಕೆಯನ್ನು ವ್ಯಂಗ್ಯದ ದಾಟಿಯಲ್ಲಿ ಬರೆಯಲಾಗಿದೆಯೇ? ಅಮೆರಿಕದಲ್ಲಿ ಇರುವ ಯೋಗ ಪ್ರೇಮಿಗಳಲ್ಲಿ ಬಹುತೇಕ ಜನ ಬಾಬಾ ರಾಮದೇವ್ ಅವರ ಅಭಿಮಾನಿಗಳು. ಯೋಗದ ಮೂಲಕ ಭಾರತೀಯ ಸಂಸ್ಕೃತಿಯನ್ನು ಅಮೆರಿಕದಲ್ಲೂ ಪಸರಿಸುವ ಪ್ರಯತ್ನವನ್ನು ಬಾಬಾ ರಾಮದೇವ್ ಮಾಡುತ್ತಿದ್ದಾರೆ ಎಂಬ ಭಯವೂ ಅದಕ್ಕಿದ್ದಿರಬಹುದು. ಆದ್ದರಿಂದ ಈ ರೀತಿ ಬರೆದಿರಬಹುದು ಎಂದು ಅಂದಾಜಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಗೆ ಭಾರತದ ಉತ್ತರ ರಾಮದೇವ್!
ಬಾಬಾ ರಾಮದೇವ್ ಭಾರತದಲ್ಲಿ ತಮ್ಮದೇ ಆದ ಉದ್ಯಮ ಪ್ರಪಂಚ ಹೊಂದೊದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಹೊಂದಿಂತೆ! ಟ್ರಂಪ್ ರಂಥೆ ಬಹುಕೋಟಿ ಸಾಮ್ರಾಜ್ಯ ಹೊಂದಿರುವ ರಾಮದೇವ್ ಅವರಿಗೆ ಬಿಜೆಪಿ ಸರ್ಕಾರದ ಬೆಂಬಲವೂ ಇದೆ. ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯ ಆಪ್ತರೂ ಹೌದು. ತಮ್ಮ ಪತಂಜಲಿ ಉತ್ಪನ್ನ ಭಾರತದ ಮೂಲೆ ಮೂಲೆಯಲ್ಲೂ ಪ್ರಚಾರ ಪಡೆವ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳಲಾರರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಎಲ್ಲ ಪ್ರಧಾನಿಗಳಿಗಿಂತ ಬಲಶಾಲಿ ರಾಮದೇವ್!
ಬಾಬಾ ರಾಮದೇವ್ ಎಲ್ಲ ಪ್ರಧಾನಿಗಳಿಗಿಂತ ಬಲಶಾಲಿ. ಅವರ 'ನಮಸ್ತೆ'ಗೆ ವಿಶೇಷ ಶಕ್ತಿಯಿದೆ. ಅವರಿಗೆ ಜನಪ್ರಿಯತೆ, ಹಣ ಮತ್ತು ಆರೋಗ್ಯ, ಜ್ಞಾನ ಎಲ್ಲವೂ ಇರುವುದರಿಂದ ಅವರೊಬ್ಬ ಶಕ್ತಿಯುತ ಪ್ರಧಾನಿಯಾಗಬಲ್ಲರು ಎಂದು ಅದು ಹೇಳಿದೆ. ಇದು ಲೇವಡಿಯೋ, ಅಥವಾ ಮೆಚ್ಚುಗೆಯೋ ದೇವರೇ ಬಲ್ಲ!
|
ಬಹುರಾಷ್ಟ್ರೀಯ ಕಂಪನಿಗಳಿಗೆ ಭಯ!
ನ್ಯೂಯಾರ್ಕ್ ಟೈಮ್ಸ್ ತನ್ನ ಹಿಂದು ವಿರೋಧಿ ಮನಸ್ಥಿತಿಯನ್ನು ಮುಂದುವರಿಸಿದೆ. ಅದಕ್ಕೆಂದೇ ಸ್ವಾಮಿ ರಾಮದೇವ್, ಮೋದಿ ಮತ್ತು ಆರೆಸ್ಸೆಸ್ ಅನ್ನು ಗುರಿಯಾಗಿಸಿ ಮಾತನಾಡುತ್ತಿದೆ. ಬಾಬಾ ರಾಮದೇವ್ ಅವರಿಂದಾಗಿ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂಬ ಭಯ ಅವರಿಗೆ ಆವರಿಸಿದೆ ಎಂದು ಡಾ.ಡೇವಿಡ್ ಫ್ರಾಲಿ ಟ್ವೀಟ್ ಮಾಡಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications