ಒಂದು ದಂಡದ ಕಥೆ: ಯೂಟ್ಯೂಬ್‌ನ ಆ 2 ವಿಡಿಯೋಕ್ಕಾಗಿ ಗೂಗಲ್‌ಗೆ 5.15 ಲಕ್ಷ ಡಾಲರ್ ಫೈನ್!
ಸಿಡ್ನಿ, ಜೂನ್ 6: ಸೋಷಿಯಲ್ ಮೀಡಿಯಾವನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಯಾಮಾರಿದರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದಿರುವ ಇದೊಂದು ಘಟನೆಯೇ ಸಾಕ್ಷಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ಲಕ್ಷಾಂತರ ರೂಪಾಯಿ ದಂಡ ತೆರಬೇಕಾದ ಪರಿಸ್ಥಿತಿಯು ಸ್ವತಃ ಗೂಗಲ್‌ಗೆ ಎದುರಾಗಿದೆ. ಆಸ್ಟ್ರೇಲಿಯಾದ ಶಾಸಕ ಜಾನ್ ಬರಿಲಾರೊಗೆ ವಿರುದ್ಧವಾದ ನಿಂದನೆ ಮಾಡುವಂತಹ ಅಂಶವನ್ನೊಳಗೊಂಡ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅದು ಹೆಚ್ಚು ವೈರಲ್ ಆಗಿರುವುದರ ಬೆನ್ನಲ್ಲೇ ಗೂಗಲ್ ಈಗ ದಂಡವನ್ನು ಪಾವತಿಸುವಂತಾಗಿದೆ.
ಯಾವುದೋ ಒಂದು ವಿಷಯ, ವರ್ಗ, ವ್ಯಕ್ತಿ ಮತ್ತು ಸಮುದಾಯವನ್ನು ಉದ್ದೇಶಿಸಿ ವಿಡಿಯೋಗಳನ್ನು ಮಾಡುವುದಕ್ಕೂ ಮೊದಲು ಹೇಗೆ ಎಚ್ಚರಿಕೆ ವಹಿಸಬೇಕು. ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದನ್ನು ಇದೊಂದು ಪ್ರಕರಣದಿಂದ ನೋಡಿ ಪಾಠ ಕಲಿಯಬೇಕಿದೆ. ರಾಜಕೀಯಕ್ಕೆ ವಿದಾಯ ಹೇಳಿದ ರಾಜಕಾರಣಿಗೆ ಗೂಗಲ್ ದಂಡ ಕಟ್ಟುವಂತೆ ಆಗಿದ್ದು ಹೇಗೆ?, ಇಂಥ ರೋಚಕತೆ ಪ್ರಶ್ನೆಗೆ ಉತ್ತರವೇ 5,15,000 ಡಾಲರ್ ದಂಡದ ಕಥೆ.

ಆಸ್ಟ್ರೇಲಿಯಾದ ನ್ಯಾಯಾಲಯದಿಂದ ಭಾರೀ ದಂಡ
ಜನಾಂಗೀಯ ನಿಂದನೆ, ಮಾನಹಾನಿ ಮಾಡುವಂತಾ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ರಾಜಕೀಯದಿಂದ ಹೊರ ದೂಡಲ್ಪಟ್ಟ ಆಸ್ಟ್ರೇಲಿಯಾದ ರಾಜಕಾರಣಿಗೆ ಗೂಗಲ್ ಭಾರೀ ದಂಡ ಪಾವತಿಸಿದೆ. ನಿರಂತರ ಜನಾಂಗೀಯ ನಿಂದನೆ, ಮಾನಹಾನಿಕರ ಪ್ರಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಾನ್ ಬರಿಲಾರೊ ಮಾನಹಾನಿ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ ಆಸ್ಟ್ರೇಲಿಯಾದ ಕೋರ್ಟ್ 515,000 ಡಾಲರ್ ದಂಡ ಪಾವತಿಸುವಂತೆ ಸೋಮವಾರ ಆದೇಶ ಹೊರಡಿಸಿದೆ.

8,00,000 ಜನರಿಂದ ವಿಡಿಯೋ ವೀಕ್ಷಣೆ
ಆಸ್ಟ್ರೇಲಿಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಟೇಟ್ ನ್ಯೂ ಸೌತ್ ವೇಲ್ಸ್‌ನ ಡೆಪ್ಯುಟಿ ಪ್ರೀಮಿಯರ್ ವಿರುದ್ಧ ಮಾಡಲಾಗಿರುವ ಎರಡು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಸಖತ್ ವೈರಲ್ ಆಗಿದ್ದವು. ಕಳೆದ 2020ರ ಅಂತ್ಯದಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋಗಳನ್ನು 8,00,000ಕ್ಕಿಂತ ಹೆಚ್ಚು ಜನರು ನೋಡಿದ್ದರು. ಈ ಅಂಶವನ್ನು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.

ಜಾನ್ ಬರಿಲಾರೊ ಸಮಗ್ರತೆ ಪ್ರಶ್ನಿಸಿದ ರಾಜಕೀಯ ನಿರೂಪಕ
ಶಾಸಕ ಜಾನ್ ಬರಿಲಾರೊ ಸಮಗ್ರತೆಯನ್ನು ರಾಜಕೀಯ ನಿರೂಪಕ ಜೋರ್ಡಾನ್ ಶಾಂಕ್ಸ್ ಅವರ ವಿಡಿಯೋಗಳಲ್ಲಿ ಪ್ರಶ್ನೆ ಮಾಡಲಾಗಿತ್ತು. ಯಾವುದೇ ಪುರಾವೆಗಳಿಲ್ಲದೇ ಅವರಿಗೆ "ಭ್ರಷ್ಟ" ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಜನಾಂಗೀಯ ಹೆಸರುಗಳನ್ನು ಉಲ್ಲೇಖಿಸುವುದು "ದ್ವೇಷ ಭಾಷಣಕ್ಕಿಂತ ಕಡಿಮೆಯಿಲ್ಲ," ಎಂದು ನ್ಯಾಯಾಧೀಶ ಸ್ಟೀವ್ ರೇರೆಸ್ ತಿಳಿಸಿದ್ದಾರೆ.

2021ರಲ್ಲೇ ಬರಿಲಾರೊ ರಾಜಕೀಯ ವಿದಾಯ
ಕಳೆದ 2021ರ ಅಕ್ಟೋಬರ್ ತಿಂಗಳಿನಲ್ಲಿ ಜಾನ್ ಬರಿಲಾರೊ ತಮ್ಮ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು. ಏಕೆಂದರೆ "ಗೂಗಲ್ ಮತ್ತು ಜೋರ್ಡಾನ್ ಶಾಂಕ್ಸ್ ನಡೆಸಿದ ಈ ಅಭಿಯಾನಗಳೇ ಬರಿಲಾರೊಗೆ ಶಾಕ್ ನೀಡಿದರು. ಅಂತಿಮವಾಗಿ ಅವಧಿಗೂ ಪೂರ್ವದಲ್ಲಿಯೇ ರಾಜಕೀಯದಿಂದ ಹೊರ ನಡೆಯುವುದಕ್ಕೆ ಅದು ಕಾರಣವಾಯಿತು. "ಈ ಪ್ರಕ್ರಿಯೆಯಲ್ಲಿ ಗೂಗಲ್‌ನ ನಡವಳಿಕೆಯು ಅಸಮರ್ಪಕ ಮತ್ತು ಅಸಮರ್ಥನೀಯವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇನೆ," ಎಂದು ಕೋರ್ಟ್ ಹೇಳಿತು. ಕಳೆದ ವರ್ಷ ಜೋರ್ಡಾನ್ ಶಾಂಕ್ಸ್ ಮತ್ತು ಬರಿಲಾರೊ ಇತ್ಯರ್ಥಕ್ಕೆ ಬರುವವರೆಗೂ ಅವರು ಗೂಗಲ್‌ನೊಂದಿಗೆ ಸಹ-ಪ್ರತಿವಾದಿಯಾಗಿದ್ದವರು, ಆದರೆ ಪ್ರತಿಕ್ರಿಯೆಗಾಗಿ ಲಭ್ಯವಿರಲಿಲ್ಲ.
Recommended Video
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications