Get Updates
Get notified of breaking news, exclusive insights, and must-see stories!

ಪಾಕ್- ಹಿಂದೂ ವ್ಯಕ್ತಿಯ ಗುಂಪು ಹತ್ಯೆಗೆ ಯತ್ನ: ಭಯಹುಟ್ಟಿಸುವಂಥ ವಿಡಿಯೋ ವೈರಲ್

ಇಸ್ಲಾಮಾಬಾದ್ ಆಗಸ್ಟ್ 22: ಮೂಲಭೂತವಾದಿಗಳು ಮತ್ತು ಜಿಹಾದಿಗಳ ದೇಶವಾದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಬದುಕುವುದು ಕಷ್ಟವಾಗಿದೆ. ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಪ್ರತಿದಿನ ಜನರನ್ನು ಕೊಲ್ಲಲಾಗುತ್ತಿದೆ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಪಾಕಿಸ್ತಾನದಲ್ಲಿ ಹಿಂದೂ ಕಾರ್ಯಕರ್ತನೊಬ್ಬನನ್ನು ಖುರಾನ್‌ಗೆ ಅಗೌರವ ತೋರಿದ್ದಾನೆಂಬ ಆರೋಪದ ಮೇಲೆ ಗುಂಪು ಹತ್ಯೆಗಾಗಿ ಪ್ರಯತ್ನಿಸಲಾಗಿದೆ.

ಮಾತ್ರವಲ್ಲದೆ ಅವನನ್ನು ಸೆರೆಹಿಡಿಯಲು ಮತ್ತು ಕೊಲ್ಲಲು ನೂರಾರು ಕಠಿಣವಾದಿಗಳು ಆತನ ಮನೆಯ ಮುಂದೆ ಜಮಾಯಿಸಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ಜೊತೆಗೆ ಆ ವ್ಯಕ್ತಿಯನ್ನು ಹಿಡಿಯಲು ಆತನ ಅಪಾರ್ಟ್‌ಮೆಂಟ್‌ ಮೇಲೆ ಹತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ವಿವಾದದ ನಂತರ ಪಾಕಿಸ್ತಾನದ ಹೈದರಾಬಾದ್‌ನಲ್ಲಿರುವ ಹಿಂದೂ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತನ ವಿರುದ್ಧ ಖುರಾನ್‌ಗೆ ಅವಮಾನ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ, ಖುರಾನ್‌ಗೆ ಅವಮಾನ ಮಾಡಿದ್ದಾನೆಂದು ಹೇಳುವ ವ್ಯಕ್ತಿಯ ಹೆಸರು ಅಶೋಕ್ ಕುಮಾರ್.

ಅಶೋಕ್ ಕುಮಾರ್ ಅವರನ್ನು ಹಿಡಿದು ಕೊಲ್ಲಲು ನೂರಾರು ಜನರು ಅವರ ಮನೆಯ ಕೆಳಗೆ ಜಮಾಯಿಸಿರುವ ವಿಡಿಯೋ ವೈರಲ್ ಆಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸುವ ಮೂಲಕ ಅಶೋಕ್‌ಕುಮಾರ್‌ನ ಪ್ರಾಣ ಉಳಿಸಿದರಾದರೂ, ಸ್ಥಳದಿಂದ ಹೊರಬರುತ್ತಿರುವ ವಿಡಿಯೊಗಳು ಸಾಕಷ್ಟು ಅಪಾಯಕಾರಿ ಮತ್ತು ಭಯಾನಕವಾಗಿವೆ. ವಿಡಿಯೋದಲ್ಲಿ ಸಂತ್ರಸ್ತ ಅಶೋಕ್ ಕುಮಾರ್ ಅವರ ಮನೆಯ ಬಾಲ್ಕನಿಯಲ್ಲಿ ಉದ್ರಿಕ್ತರು ನಿಂತಿರುವುದು ಕಂಡುಬಂದಿದ್ದು, ಕೆಳಗಿದ್ದ ಜನಸಮೂಹ ಅಶೋಕನನ್ನು ಹಿಡಿಯಲು ಗಲಾಟೆ ಮಾಡುತ್ತಿರುವುದು ಕಂಡು ಬಂದಿದೆ.

ಧರ್ಮನಿಂದೆಯ ಆರೋಪ

ಧರ್ಮನಿಂದೆಯ ಆರೋಪ

ನೂರಾರು ಮುಸ್ಲಿಮರು ಅಶೋಕ್ ಕುಮಾರ್‌ನನ್ನು ಕೊಲ್ಲಲು ಗಲಾಟೆ ಮಾಡಿದ್ದಾರೆ. ಆದರೆ ವಿವಾದ ಬಳಿಕ ತಾವು ಆರೋಪದಂತೆ ಮಾಡಲಿಲ್ಲ ಎಂದು ಅಶೋಕ್ ಹೇಳಿದ್ದಾರೆನ್ನಲಾಗುತ್ತಿದೆ. ಮುಸ್ಲಿಂ ಮಹಿಳೆ ಖುರಾನ್‌ನ ಪುಟಗಳನ್ನು ಸುಟ್ಟಿದ್ದಾಳೆ. ಈ ಆರೋಪ ಅಶೋಕ್ ಕುಮಾರ್‌ ಮೇಲೆ ಬಂದಿದೆ ಎನ್ನಲಾಗುತ್ತಿದೆ. ಪಾಕಿಸ್ತಾನದಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಇಲ್ಲಿನ ಮುಸ್ಲೀಂ ಜನರು ಹಿಂದೂಗಳ ಮೇಲೆ ಪರಸ್ಪರ ದ್ವೇಷ ಸಾಧಿಸಲು ಖುರಾನ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಹಿಂದೆ ಇಲ್ಲಿ ಖುರಾನ್‌ಗೆ ಅವಮಾನ ಮಾಡಿದ ಆರೋಪದಲ್ಲಿ ಹಲವಾರು ಜನರು ಕೊಲ್ಲಲ್ಪಟ್ಟಿದ್ದಾರೆ. ನ್ಯಾಯಾಲಯದಲ್ಲಿಯೂ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಮುಸ್ಲಿಂ ಸಮುದಾಯದ ಸದಸ್ಯರೂ ಧರ್ಮನಿಂದೆಯ ಕತ್ತಿಯಿಂದ ಅನೇಕ ಬಾರಿ ದಾಳಿಗೊಳಗಾಗುತ್ತಿದ್ದಾರೆ. ಈ ಅಸ್ತ್ರವನ್ನು ಹೆಚ್ಚಾಗಿ ಸಾಮಾನ್ಯವಾಗಿ ಅಲ್ಪಸಂಖ್ಯಾತರ ವಿರುದ್ಧ ಬಳಸಲಾಗುತ್ತಿದೆ.

 ಅಶೋಕ್‌ನ ಪ್ರಾಣ ಉಳಿಸಿದ ಪೊಲೀಸರು

ಅಶೋಕ್‌ನ ಪ್ರಾಣ ಉಳಿಸಿದ ಪೊಲೀಸರು

ಪಾಕಿಸ್ತಾನಿ ಪತ್ರಕರ್ತ ಮುಬಾಶಿರ್ ಝೈದಿ ಟ್ವೀಟ್‌ನಲ್ಲಿ, "ಹೈದರಾಬಾದ್ ಪೊಲೀಸರು ಧರ್ಮನಿಂದೆಯ ಆರೋಪದ ಮೇಲೆ ಹಿಂದೂ ಸ್ವೀಪರ್ ಅನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಹಿಂಸಾತ್ಮಕ ಗುಂಪನ್ನು ಚದುರಿಸಿದ್ದಾರೆ." ಸಂತ್ರಸ್ತ ಅಶೋಕ್ ಕುಮಾರ್ ಅವರನ್ನು ಹೈದರಾಬಾದ್‌ನ ಸದರ್‌ನಲ್ಲಿರುವ ರಾಬಿಯಾ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನಿ ಪತ್ರಕರ್ತೆ ಮತ್ತು ಅಂಕಣಕಾರ ನೈಲಾ ಇನಾಯತ್ ಅವರು ಟ್ವೀಟ್ ಮಾಡಿ, "ಹೈದರಾಬಾದ್‌ನಲ್ಲಿರುವ ಹಿಂದೂ ಅಶೋಕ್ ಕುಮಾರ್ ಅವರ ವಿರುದ್ಧ ಖುರಾನ್ ಅವಮಾನದ ಆರೋಪದ ಮೇಲೆ 295 ಬಿ ಧರ್ಮನಿಂದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂಗಡಿಯ ಮಾಲೀಕ ಬಿಲಾಲ್ ಅಬ್ಬಾಸಿ ಅವರೊಂದಿಗಿನ ವಿವಾದದ ನಂತರ ಈ ಆರೋಪ ಕೇಳಿ ಬಂದಿದೆ. ಅಬ್ಬಾಸಿ ಅವರು ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದರಿಂದ ಅಶೋಕ್ ಕುಮಾರ್ ಅವರನ್ನು ಜನಸಮೂಹದಿಂದ ರಕ್ಷಿಸಿದ ನಂತರ, ಪೊಲೀಸರು ಅವರ ವಿರುದ್ಧ ಧರ್ಮನಿಂದನೆ ಪ್ರಕರಣವನ್ನು ದಾಖಲಿಸಿದ್ದಾರೆ'' ಎಂದು ಬರೆದಿದ್ದಾರೆ.

ಪಾಕಿಸ್ತಾನದ ಸಿಂಧ್ ಪೊಲೀಸರ ಬಗ್ಗೆ ಮೆಚ್ಚುಗೆ

ಪಾಕಿಸ್ತಾನದ ದಾಳಿ ಮಾಡಲು ಮುಂದಾದ ಜನಸಮೂಹದ ವರ್ತನೆ ಮಿತಿಮೀರುತ್ತಿದೆ. ವೈರಲ್ ಫೋಟೋ ಹಾಗೂ ವಿಡಿಯೋಗಳು ಒಂದು ದೇಶ ಹೇಗೆ ಮೃಗವಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ಗುಂಪು ಹಿಂದೂ ವ್ಯಕ್ತಿಯ ಮೇಲೆ ಗುಂಪು ಹತ್ಯೆ ಮಾಡಲು ಬಯಸಿತ್ತು. ಒಂದು ವೇಳೆ ಅಶೋಕ್ ಕುಮಾರ್ ಅವರ ಕೈಗೆ ಸಿಕ್ಕಿಬಿದ್ದಿದ್ದರೆ, ಖಂಡಿತವಾಗಿಯೂ ಈ ಗುಂಪು ಅವನ ಜೀವವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಖುರಾನ್ ಅನ್ನು ಹರಿದು ಸುಡುವ ಕೆಲಸವನ್ನು ಮುಸ್ಲಿಂ ಮಹಿಳೆ ಮಾಡಿದ್ದಾಳೆ ಎನ್ನಲಾಗುತ್ತಿದೆ. ಆ ಮಹಿಳೆಯ ವಿಚಾರಣೆ ಕೂಡ ನಡೆಯುತ್ತಿದೆ. ಹಿಂಸಾತ್ಮಕ ಗುಂಪನ್ನು ಚದುರಿಸಲು ಮತ್ತು ಅಶೋಕ್ ಕುಮಾರ್ ಅವರ ಜೀವವನ್ನು ಉಳಿಸಿದ್ದಕ್ಕಾಗಿ ಕೆಲವರು ಹೈದರಾಬಾದ್ ಪೊಲೀಸರನ್ನು ಶ್ಲಾಘಿಸುತ್ತಿದ್ದಾರೆ.

ಒಬ್ಬ ಬಳಕೆದಾರರು ಬರೆದಿದ್ದಾರೆ, "ಪಾಕಿಸ್ತಾನದ ಸಿಂಧ್ ಪೊಲೀಸರು ಹೈದರಾಬಾದ್ ನಗರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಸಮಾಜದಲ್ಲಿ ಯಾವುದೇ ರೀತಿಯ ಮತಾಂಧತೆಗೆ ಸ್ಥಳವಿಲ್ಲ. ಈಗ ಒಂದು ವಿಪತ್ತು ತಪ್ಪಿಸಲ್ಪಟ್ಟಿದೆ, ಅಪರಾಧಿಗಳು ಮತ್ತು ಪ್ರಚೋದಕರನ್ನು ನ್ಯಾಯಾಂಗ ಕ್ರಮಕ್ಕೆ ಒಳಪಡಿಸಬೇಕು" ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಟ್ವೀಟ್ ಮಾಡಿ, "ಹಿಂದೂಗಳ ಮೇಲೆ ಮುಸ್ಲಿಂ ಸಮುದಾಯದವರು ದ್ವೇಷದ ಕಿಡಿ ಹಚ್ಚುತ್ತಿದ್ದಾರೆ. ಕಾನೂನುಗಳ ದುರ್ಬಳಕೆ ನಡೆಯುತ್ತಿದೆ" ಎಂದಿದ್ದಾರೆ.

2021 ರಲ್ಲಿ ಶ್ರೀಲಂಕಾ ವ್ಯಕ್ತಿ ಹತ್ಯೆ

2021 ರಲ್ಲಿ ಶ್ರೀಲಂಕಾ ವ್ಯಕ್ತಿ ಹತ್ಯೆ

ಪಾಕಿಸ್ತಾನವು ಕಟ್ಟುನಿಟ್ಟಾದ ಧರ್ಮನಿಂದೆಯ ಕಾನೂನನ್ನು ಹೊಂದಿದೆ. ಹೀಗಾಗಿ ಇಲ್ಲಿ ಅನೇಕ ಜನರನ್ನು ಕೇವಲ ಆರೋಪದ ಮೇಲೆ ಕೊಲ್ಲಲಾಗಿದೆ. ಡಿಸೆಂಬರ್ 2021 ರಲ್ಲಿ, ಶ್ರೀಲಂಕಾದ ವ್ಯಕ್ತಿ ಮತ್ತು ಪಾಕಿಸ್ತಾನಿ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಜೀವಂತವಾಗಿ ಸುಟ್ಟುಹಾಕಲಾಯಿತು. ಇದಕ್ಕಾಗಿ ಪಾಕಿಸ್ತಾನವು ಅಂತರಾಷ್ಟ್ರೀಯವಾಗಿ ತೀವ್ರವಾಗಿ ಟೀಕಿಸಲ್ಪಟ್ಟಿತು. ಆಗಿನ ಪ್ರಧಾನಿ ಇಮ್ರಾನ್ ಖಾನ್ ಇದನ್ನು "ಪಾಕಿಸ್ತಾನಕ್ಕೆ ಅವಮಾನದ ದಿನ" ಎಂದು ಕರೆದರು. ಇಮ್ರಾನ್ ಖಾನ್ ಅವರೇ ಪಾಕಿಸ್ತಾನವನ್ನು ಇನ್ನಷ್ಟು ಹದಗೆಡಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಒಂದು ವರದಿಯ ಪ್ರಕಾರ, 1947 ರಿಂದ, ಪಾಕಿಸ್ತಾನದಲ್ಲಿ ಧರ್ಮನಿಂದೆಯ ಆರೋಪದ ಮೇಲೆ 1415 ಜನರನ್ನು ಕೊಂದಿದ್ದಾರೆ ಮತ್ತು ಅದೇ ವರದಿಯ ಪ್ರಕಾರ, ಇದುವರೆಗೆ 2021 ಮುಸ್ಲಿಮರನ್ನು ಮಾತ್ರ ಧರ್ಮನಿಂದೆಯ ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ, ಇದರಲ್ಲಿ ಭೂ ವಿವಾದ ಅಥವಾ ಪರಸ್ಪರ ವಿವಾದವೂ ಇದೆ.

Recommended Video

      ಆತ್ಮ ನಿರ್ಭರ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+