ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, ಕನಿಷ್ಠ 13 ಮಂದಿ ಸಾವು

ಅಫ್ಘಾನಿಸ್ತಾನದ ಪೂರ್ವ ನಂಗರ್ ಹಾರ್ ಪ್ರಾಂತ್ಯದಲ್ಲಿ ಚುನಾವಣೆ ಪ್ರಚಾರದ ವೇಳೆ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ ಹದಿಮೂರು ಮಂದಿ ಸಾವನ್ನಪ್ಪಿದ್ದು, ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಾಂತ್ಯದ ರಾಜ್ಯಪಾಲರ ವಕ್ತಾರ ಅಥಾವುಲ್ಲಾ ಖೋಗ್ಯಾನಿ ಮಾತನಾಡಿ, ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ತೀರಾ ಚಿಂತಾಜನಕ ಆಗಿದೆ. ಆದ್ದರಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಕಮಾ ಜಿಲ್ಲೆ ಪ್ರಾಂತ್ಯದಲ್ಲಿ ಮಂಗಳವಾರ ಮಧ್ಯಾಹ್ನ ಈ ದಾಳಿ ನಡೆದಿದೆ. ಅಕ್ಟೋಬರ್ ಇಪ್ಪತ್ತನೇ ತಾರೀಕಿಗೆ ನಿಗದಿ ಆಗಿರುವ ಅಫ್ಘಾನಿಸ್ತಾನದ ಸಂಸತ್ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಅಬ್ದುಲ್ ನಸೀರ್ ಮೊಹ್ಮದ್ ಚುನಾವಣೆ ಪ್ರಚಾರಕ್ಕೆ ಬೆಂಬಲ ಸೂಚಿಸಲು ಬೆಂಬಲಿಗರು ಒಟ್ಟಾಗಿ ಸೇರಿದ್ದರು.

At least 13 killed, 30 injured in suicide bombing in Afghanistan election rally

ಈ ವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆಯೂ ಹೊತ್ತಿಕೊಂಡಿಲ್ಲ. ನಂಗರ್ ಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಎರಡೂ ಉಗ್ರ ಸಂಘಟನೆಗಳು ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿವೆ. ಅಫ್ಘಾನಿಸ್ತಾನದಲ್ಲಿ ಚುನಾವಣೆ ಘೋಷಣೆ ಆದ ದಿನದಿಂದಲೂ ನಿರಂತರವಾಗಿ ಉಗ್ರರ ದಾಳಿಗಳು ನಡೆಯುತ್ತಿದ್ದು, ನೂರಾರು ಮಂದಿ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+