ಪ್ರಮಾಣವಚನದಂದೇ ಪುಟೀನ್‌ಗೆ ಉಡೂಗೊರೆ ನೀಡಲು ಪ್ಲ್ಯಾನ್ : ಝೆಲೆಂಸ್ಕಿ ಹತ್ಯೆಯ ಸಂಚನ್ನು ಉಕ್ರೇನ್ ಬೇಧಿಸಿದ್ದು ಹೇಗೆ?
ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ದಿನೇ ದಿನೇ ಹದಗೆಡುತ್ತಲೇ ಇವೆ. ಈ ಯುದ್ಧ ತಣ್ಣಗಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸತತ ಐದನೇ ಬಾರಿಗೆ ಗದ್ದುಗೆ ಏರುವ ಸಮಾರಂಭಕ್ಕೆ ಒಂದು ಕಡೆ ವೇದಿಕೆ ಸಜ್ಜಾಗಿದ್ದರೆ, ಇನ್ನೊಂದು ಬದಿಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.
ಈಗ ಪ್ರಪಂಚದಲ್ಲಿ ಭಾರೀ ಸುದ್ದಿಯನ್ನು ಮಾಡುತ್ತಿರುವ ವಿಷಯ ಅಂದ್ರೆ ಪುಟಿನ ರಣ ತಂತ್ರವನ್ನು ಉಕ್ರೇನ್ ಅಧ್ಯಕ್ಷ ಹೇಗೆ ಅರಿತರು. ಅವರು ಹೇಗೆ ತಮ್ಮ ಜೀವ ಉಳಿಸಿಕೊಂಡರು ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ಆರಂಭವಾಗಿವೆ. ರಷ್ಯಾ ಮಾಸ್ಟರ್ ಪ್ಲ್ಯಾನ್ ವಿಫಲಗೊಳಿಸಿದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಸತತ ಕೊಲ್ಲುವ ಪ್ರಯತ್ನ
ಝೆಲೆನ್ಸ್ಕಿಯನ್ನು ಹತ್ಯೆ ಮಾಡಲು ರಷ್ಯಾ ಸಂಚು ರೂಪಿಸುತ್ತಿದೆ ಎಂಬ ಉಕ್ರೇನ್ ಆರೋಪ ಹೊಸದೇನಲ್ಲ. 2022 ರಲ್ಲಿ ಅವರನ್ನು ಹತ್ಯೆ ಮಾಡಲು ಕನಿಷ್ಠ 10 ಪ್ರಯತ್ನಗಳು ನಡೆದಿವೆ ಎಂದು ಝೆಲೆನ್ಸ್ಕಿ ಹೇಳಿದ್ದರು. ಈಗ ಮತ್ತೊಮ್ಮೆ ರಷ್ಯಾದ ಯೋಜನೆ ವಿಫಲವಾಗಿದೆ.
ಪ್ರಮಾಣವಚನ, ಕೊಲೆ
ಯಾರಿಗೂ ಯಾವ ತರಹದ್ದೂ ಸಂದೇಹ ಬಾರದ ರೀತಿಯಲ್ಲಿ ರಷ್ಯಾ ಅಧ್ಯಕ್ಷ ಪುಟೀನ್ ಯೋಜನೆಯನ್ನು ರೂಪಿಸಿದ್ದರು. ಅಲ್ಲದೆ ಒಂದು ಕಡೆಯಲ್ಲಿ ಬೃಹತ್ ವೇದಿಕೆಯಲ್ಲಿ ರಷ್ಯಾದ ಅಧ್ಯಕ್ಷ ಗಾದಿಯನ್ನು ಐದನೇ ಬಾರಿಗೆ ಏರಲು ಪುಟಿನ ಸಿದ್ಧರಾಗಿರುವ ಕ್ಷಣವನ್ನು ಜಗತ್ತು ನೋಡಲು ಕಾತುರವಾಗಿತ್ತು. ಇದನ್ನೇ ಕ್ಯಾಪ್ಚರ್ ಮಾಡಿಕೊಳ್ಳಲು ಪುಟಿನ್ ಸಹ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದರು. ಅಂದಹಾಗೆ ಇತ್ತ ಪ್ರಮಾಣ ವಚನ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಅತ್ತ ಶತ್ರು ದೇಶದಲ್ಲಿ ಅವರಿಗೆ ತಿಳಿಯದೇ ಉಕ್ರೇನ್ ಅಧ್ಯಕ್ಷರನ್ನು ಕೊಲ್ಲುವ ಸಂಚನ್ನು ರೂಪಿಸಲಾಗಿತ್ತು. ಎಲ್ಲವೂ ಅಂದುಕೊಂಡತೆ ಆಗಿತ್ತು. ಆದರೆ ಕೊನೆಯಲ್ಲಿ ಆಗಿದ್ದೇ ಬೇರೆ.

ಮಾಹಿತಿ ಸಿಕ್ಕಿದ್ದು ಹೇಗೆ?
ರಷ್ಯಾದ ಹಂತಕರು ಝೆಲೆನ್ಸ್ಕಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರು, ಆದರೆ ಉಕ್ರೇನ್‌ನ ಗುಪ್ತಚರ ಸಂಸ್ಥೆಗಳು ಈ ರಷ್ಯಾದ ಪಿತೂರಿಯ ಮೇಲೆ ಒಂದು ಕಣ್ಣು ನೆಟ್ಟಿತ್ತು. ಅಲ್ಲದೆ ರಷ್ಯಾ ಗೆಲುವಿನ ಸಂಭ್ರಮಾಚಾರಣೆಗೆ ಸಜ್ಜಾಗಿದ್ದಾಗಲೇ ಆ ತಂತ್ರವನ್ನು ವಿಫಲಗೊಳಿಸಿತು. ಇದು ಅಧ್ಯಕ್ಷ ಝೆಲೆನ್ಸ್ಕಿಯ ಜೀವವನ್ನು ಉಳಿಸಿತು. ಉಕ್ರೇನ್‌ನ ಈ ನಡೆ ಪ್ರಪಂಚದಾದ್ಯಂತ ಸಂಚಲನವನ್ನು ಸೃಷ್ಟಿಸಿದೆ. ಝೆಲೆನ್ಸ್ಕಿಯ ಹತ್ಯೆಯ ಸಂಚು ಹೇಗೆ ನಡೆಯಿತು ಮತ್ತು ಕೊನೆಯ ಕ್ಷಣದಲ್ಲಿ ಉಕ್ರೇನ್ ಅದನ್ನು ಹೇಗೆ ವಿಫಲಗೊಳಿಸಿತು? ಎಂಬ ಬಗ್ಗೆ ಚರ್ಚೆಗಳು ನಡೆದಿವೆ.
ಉಕ್ರೇನಿಯನ್ ಕೌಂಟರ್ ಇಂಟೆಲಿಜೆನ್ಸ್ ಮಾಹಿತಿಯ ಪ್ರಕಾರ ತಮ್ಮ ದೇಶದ ಅಧ್ಯಕ್ಷರನ್ನು ಹಲವು ಟ್ರೇನ್ಡ್ ಮಿಲಿಟರಿ ಸೈನಿಕರು ಹಾಗೂ ರಾಜಕೀಯ ಹಿತ ಶತ್ರುಗಳ ಸಹಾಯದಿಂದಲೇ ಈ ಪಿತೂರಿ ರೂಪಿಸಲಾಗಿತ್ತು. ಆದರೆ ಉಕ್ರೇನ್ ಈ ಭಯಾನಕ ರಷ್ಯಾದ ಸಂಚನ್ನು ವಿಫಲಗೊಳಿಸಿದೆ.
ಉಕ್ರೇನ್ ಹೇಳಿದ್ದೇನು?
ಉಕ್ರೇನ್‌ನ ರಾಜ್ಯ ಭದ್ರತಾ ಸೇವೆ ಮಂಗಳವಾರ ಈ ಹೇಳಿಕೆಯನ್ನು ನೀಡಿದೆ. ರಷ್ಯಾದ ಗುಪ್ತಚರ ಏಜೆನ್ಸಿಗಳು ಉಕ್ರೇನ್ ಅಧ್ಯಕ್ಷ ಝೆಲೆನ್ಸಿಕಿ ಅವರನ್ನು ಹತ್ಯೆ ಮಾಡಲು ಭದ್ರತೆಯಲ್ಲಿ ತೊಡಗಿರುವ ಸ್ಟೇಟ್ ಗಾರ್ಡ್‌ಗಳ ಕರ್ನಲ್‌ಗಳನ್ನು ನೇಮಿಸಿವೆ ಎಂದು ಹೇಳಿಕೆ ತಿಳಿಸಿದೆ. ಆದರೆ ಉಕ್ರೇನಿಯನ್ ಭದ್ರತಾ ಏಜೆನ್ಸಿಗಳು ರಷ್ಯಾದ ಈ ಪಿತೂರಿಯನ್ನು ಪತ್ತೆ ಹಚ್ಚಿ ಯುದ್ಧ ಗೆದ್ದ ಸಂಭ್ರಮದಲ್ಲಿವೆ.
ರಷ್ಯಾ ಅಧ್ಯಕ್ಷರಿಗೆ ಸಿಹಿ ಸುದ್ದಿ ನೀಡಲೇ ಬೇಕು ಎಂದು ಪಣ ತೊಟ್ಟಂತೆ ಕಂಡಿದ್ದ ಸ್ಟೇಟ್ ಗಾರ್ಡ್‌ನ ಇಬ್ಬರು ಕರ್ನಲ್‌ಗಳು ಝೆಲೆನ್ಸ್‌ಕಿ ಹತ್ಯೆಗೆ ಮುಂದಾಗಿದ್ದ ಇಬ್ಬರನ್ನು ಉಕ್ರೇನ್ ಬಂಧಿಸಿದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಈ ಅನುಮಾನಾಸ್ಪದ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಅಂದಿನಿಂದ, ಝೆಲೆನ್ಸ್ಕಿಯ ಹತ್ಯೆಯ ಸಂಚು ರೂಪಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು. ಅವರು ವರ್ಷಗಳಿಂದ ತನ್ನ ಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಉಕ್ರೇನ್ ತಿಳಿಸಿದೆ.
ಪ್ಲ್ಯಾನ್ ಏನು?
ಉಕ್ರೇನಿಯನ್ ಸೆಕ್ಯುರಿಟಿ ಏಜೆನ್ಸಿಯ ಬಿಡುಗಡೆಯ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಐದನೇ ಅವಧಿಗೆ ಮಂಗಳವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿತ್ತು. ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷರನ್ನು ಕೊಲೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ರಾಜ್ಯ ಭದ್ರತಾ ಸೇವೆಯ ಮುಖ್ಯಸ್ಥ ವಾಸಿಲ್ ಮಲಿಯುಕ್ ಹೇಳಿದ್ದಾರೆ. ಆದರೆ ರಷ್ಯಾ ಪಿತೂರಿ ವಿಫಲವಾಯಿತು. ಪಿತೂರಿಗೆ ಸಂಬಂಧಿಸಿದ ಸತ್ಯಗಳನ್ನು ತನಿಖೆ ಮಾಡಲು ಉನ್ನತ ಮಟ್ಟದ ರಹಸ್ಯ ಕಾರ್ಯಾಚರಣೆಯನ್ನು ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮಲಿಯುಕ್ ಹೇಳಿದರು.












Click it and Unblock the Notifications