'ಇಮ್ರಾನ್ ಖಾನ್ ನಿಂದ ನನಗೆ ಆಗಿದ್ದು, ಪಾಕಿಸ್ತಾನಕ್ಕೆ ಆಗದಿರಲಿ'

Posted By:
Subscribe to Oneindia Kannada

ಇಸ್ಲಾಮಾಬಾದ್, ನವೆಂಬರ್ 1: ಮದುವೆ ವಾರ್ಷಿಕೋತ್ಸವಕ್ಕೆ ಏನು ಉಡುಗೊರೆ ಕೊಡ್ತೀರಿ ಎಂದು 2015ರಲ್ಲಿ ಕೇಳಿದ್ದೆ. ಅದರ ಬದಲಿಗೆ ಆತ ಡೈವೋರ್ಸ್ ನೀಡಿದ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ನ ವಿಚ್ಛೇದಿತ ಪತ್ನಿ ರೆಹಾಮ್ ಹೇಳಿದ್ದಾರೆ.

ಪಾಕಿಸ್ತಾನದ ಜಿಯೋ ನ್ಯೂಸ್ ಜತೆಗಿನ ಸಂದರ್ಶನದಲ್ಲಿ ರೆಹಾಮ್ ಮಾತನಾಡುತ್ತಾ, ಕಳೆದ ವರ್ಷ ಅಕ್ಟೋಬರ್ 30ರಂದು ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಏನು ಉಡುಗೊರೆ ನಿಡುತ್ತೀರಿ ಎಂದು ತಮಾಷೆಯಾಗಿ ಕೇಳಿದ್ದೆ. ಆತ ನನಗೆ ವಿಚ್ಛೇದನವನ್ನೇ ನೀಡಿದರು ಎಂದು ಆಕೆ ಹೇಳಿದ್ದಾರೆ.[ಮೋದಿಗೆ ಹೇಗೆ ಉತ್ತರ ಕೊಡಬೇಕು ನಾನು ತೋರಿಸ್ತೀನಿ: ಇಮ್ರಾನ್ ಖಾನ್]

Reham Khan

ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷನೂ ಆಗಿರುವ ಇಮ್ರಾನ್ ಖಾನ್ ಇಂಥದ್ದೇ ಏನನ್ನೋ ಪಾಕಿಸ್ತಾನಕ್ಕೂ ಮಾಡುವುದು ಬೇಡ ಎಂದು ನಾನು ಪ್ರಾರ್ಥನೆ ಮಾಡ್ತೀನಿ ಎಂದಿದ್ದಾರೆ ರೆಹಾಮ್. 'ಪಾಕಿಸ್ತಾನದಲ್ಲಿರುವ ಪಕ್ಷದ ಎಲ್ಲ ಕಾರ್ಯಕರ್ತರು ನನ್ನ ಮನೆಗೆ ಬನ್ನಿ, ಏನಾದರೂ ಸರಿ ನವೆಂಬರ್ 2ನೇ ತಾರೀಕು ಇಸ್ಲಾಮಾಬಾದ್ ಬಂದ್ ಮಾಡಲೇಬೇಕು' ಎಂದಿದ್ದಾನೆ ಇಮ್ರಾನ್ ಖಾನ್.[ಇಮ್ರಾನ್ ಖಾನ್ 10 ತಿಂಗಳ ದಾಂಪತ್ಯಕ್ಕೆ ಬ್ರೇಕ್]

ಟಿವಿ ಪತ್ರಕರ್ತೆ ರೆಹಾಮ್ ಜತೆಗೆ ಹತ್ತು ತಿಂಗಳ ಸಂಸಾರ ನಡೆಸಿದ ನಂತರ 2015ರಲ್ಲಿ ಇಮ್ರಾನ್ ಖಾನ್ ವಿಚ್ಛೇದನ ನೀಡಿದ್ದ. ರೆಹಾಮ್ ಆತನ ಎರಡನೇ ಪತ್ನಿ. ಮೊದಲನೇ ಹೆಂಡತಿ, ಇಂಗ್ಲಿಷ್ ಮೂಲದ ಜೆಮಿಮಾ ಗೋಲ್ಡ್ ಸ್ಮಿತ್. ಆಕೆ ಜತೆಗೆ ಒಂಬತ್ತು ವರ್ಷದ ವೈವಾಹಿಕ ಜೀವನ ನಡೆಸಿದ ನಂತರ 2004ರ ಜೂನ್ ನಲ್ಲಿ ಬೇರ್ಪಟ್ಟಿದ್ದರು. ಈ ದಾಂಪತ್ಯಕ್ಕೆ ಇಬ್ಬರು ಗಂಡುಮಕ್ಕಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Imran Khan's ex-wife Reham has claimed that, she had asked for a wedding anniversary gift in 2015 but he divorced her instead. Reham, while speaking to Geo news, Let's pray he doesn't do something like this with Pakistan she added.
Please Wait while comments are loading...