ಪ್ರಧಾನಿ ದಿಢೀರ್ ರಾಜೀನಾಮೆ ಕೊಟ್ಟು ದೇಶಬಿಟ್ಟು ಎಸ್ಕೇಪ್, ಸೇನಾ ಆಡಳಿತ ಘೋಷಣೆ? Nepal Prime Minister
ಎಲ್ಲಿ ನೋಡಿದರೂ ಬೆಂಕಿ... ಸುಟ್ಟು ಹೋದ ಟೈರ್, ಧಗಧಗಿಸುತ್ತಿರುವ ಕಟ್ಟಡಗಳು... ಹಿಂಸಾಚಾರ ನಿಲ್ಲಿಸಲು ಪೊಲೀಸರ ಪರದಾಟ.. ಇಂತಹ ದೃಶ್ಯಗಳು ಕಂಡು ಬಂದಿದ್ದು ಭಾರತದ ನೆರೆಯ ದೇಶದಲ್ಲಿ. ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಾರೆ ಅಂತಾ ಬೀದಿಗೆ ಇಳಿದು ಹೋರಾಟ ಶುರು ಮಾಡಿದ್ದ ಜೆನ್-ಜೀ ಅಂದ್ರೆ ಹೊಸ ತಲೆಮಾರಿನ ಯುವತಿ & ಯುವಕರು, ನೇಪಾಳದ ಸರ್ಕಾರವನ್ನೇ ಕೆಡವಿ ಹಾಕಿದ್ದಾರೆ. ಇದು ಸಾಲದು ಅಂತಾ ನೇಪಾಳ ಪ್ರಧಾನಿ ಮನೆಗೂ ಬೆಂಕಿ ಹಚ್ಚಿದ್ದು, ಧಗಧಗ ಹೊತ್ತಿ ಉರಿದ ಕಟ್ಟಡಗಳ ಜೊತೆಗೆ ನೇಪಾಳದ ನೆಮ್ಮದಿಯು ಕೂಡ ಈಗ ಹಾಳಾಗಿ ಹೋಗಿದೆ...
ಹೌದು, ನೇಪಾಳದಲ್ಲಿ ಶುರುವಾಗಿರುವ ಹೋರಾಟದ ಬೆಂಕಿ ಇದೀಗ ಇಡೀ ದೇಶವನ್ನೇ ಸುಟ್ಟುಹಾಕಿದೆ. ದಿಢೀರ್ ಅಂತಾ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿದಂತೆ ಒಟ್ಟು 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಆಪ್‌ಗಳನ್ನ ಬ್ಯಾನ್ ಮಾಡಿತ್ತು. ಈ ಸುದ್ದಿಯನ್ನ ತಿಳಿದ ಲಕ್ಷಾಂತರ ನೇಪಾಳ ಯುವತಿಯರು & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಈ ರೀತಿ ಶುರುವಾಗಿದ್ದ ನೇಪಾಳ ಸೋಷಿಯಲ್ ಮೀಡಿಯಾ ಗಲಾಟೆಯಲ್ಲಿ 19 ಜನರ ಜೀವ ಹೋಗಿದ್ದರೆ, 400 ಜನರಿಗೆ ಗಂಭೀರವಾಗಿ ಗಾಯಗಳಾಗಿದೆ. ಇಂತಹ ಪರಿಸ್ಥಿತಿಯಲ್ಲೇ ಮತ್ತೊಂದು ಸುದ್ದಿ ಇದೀಗ ನೇಪಾಳ ನೆಲದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ದೇಶದಿಂದ ಓಡಿ ಹೋದ ಪ್ರಧಾನಿ?
ಹೌದು, ಸರ್ಕಾರ ಒಂದು ಸೋಷಿಯಲ್ ಮೀಡಿಯಾಗಳನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ? ಅನ್ನೋದಕ್ಕೆ ಇದೀಗ ಭಾರತದ ಪಕ್ಕದ ದೇಶ ನೇಪಾಳವೇ ಸಾಕ್ಷಿಯಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳನ್ನ ಬ್ಯಾನ್ ಮಾಡಿದ್ದ ಕಾರಣಕ್ಕೇ ನೇಪಾಳ ನಲುಗಿ ಹೋಗಿದ್ದು, ಇದೀಗ ಆ ದೇಶದಿಂದ ಪ್ರಧಾನಿಯೇ ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲೇ ಸಂಚಲನ ಸೃಷ್ಟಿಸುವ ಸುದ್ದಿಯೊಂದು ದಿಢೀರ್ ಸಿಕ್ಕಿದ್ದು, ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ಕೊಟ್ಟು ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ನೇಪಾಳ ದೇಶದ ಆಡಳಿತವು ಅಲ್ಲಿನ ಸೇನೆಯ ಹಿಡಿತಕ್ಕೆ ಸಿಕ್ಕಿದೆ....
ನೇಪಾಳ ಸೇನೆಯಿಂದ ದೇಶ ಕಂಟ್ರೋಲ್!
ಇನ್ನು ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ಕೊಟ್ಟು ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂಬ ಸುದ್ದಿ ಆವರಿಸಿದ ನಂತರ ದಿಢೀರ್ ಸೇನೆಯ ಎಂಟ್ರಿ ಆಗಿದೆ. ನೇಪಾಳ ಸೇನೆ ಇದೀಗ ಆ ದೇಶದ ಅಧಿಕಾರ ಕೈಗೆತ್ತಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದೆ. ಮತ್ತೊಂದು ಕಡೆ ಕೆಪಿ ಶರ್ಮಾ ಓಲಿ ಸರ್ಕಾರ ನಿಷೇಧ ಹೇರಿದ್ದ ಸೋಷಿಯಲ್ ಮೀಡಿಯಾಗಳನ್ನ ಮತ್ತೆ ಬಳಸಲು ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications