ತಂಟೆಗೆ ಬಂದ್ರೆ ಗಡಿದಾಟಿ ಬಗ್ಗುಬಡಿಯುತ್ತೇವೆ: ಪಾಕ್ ಗೆ ರಾವತ್ ಎಚ್ಚರಿಕೆ
Recommended Video
ಇಸ್ಲಾಮಾಬಾದ್, ಸೆಪ್ಟೆಂಬರ್ 30: "ಸುಮ್ಮನಿದ್ದರೆ ಸರಿ, ಪದೇ ಪದೇ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದರೆ ಗಡಿನಿಯಂತ್ರಣ ರೇಖೆ ದಾಟಿ ಬಂದು ನಿಮಗೆ ಪಾಠ ಕಲಿಸುವುದು ನಮಗೇನೂ ಕಷ್ಟದ ಕೆಲಸವಲ್ಲ" ಎಂದು ಪಾಕಿಸ್ತಾನದಲ್ಲೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ಥಾನದ ನಡುವೆ ಇರುವ ಎಲ್ಒಸಿ ಲಕ್ಷಣ ರೇಖೆ ಎಂಬುದು ನಮಗೆ ಗೊತ್ತು. ಆದರೆ ಪಾಕಿಸ್ತಾನ ನಮ್ಮ ತಂಟೆಗೆ ಬಂದರೆ ಆ ಗೆರೆಯನ್ನು ದಾಟಿಬಂದು ಬಗ್ಗುಬಡಿಯುತ್ತೇವೆ ಎಮದು ರಾವತ್ ಹೇಳಿದರು.
ಭಾರತ ಯಾವತ್ತೂ ಕಣ್ಣಾಮುಚ್ಚಾಲೆ ಆಟ ಆಡಿಲ್ಲ. 2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮತ್ತು 2019 ರಲ್ಲಿ ಬಾಲಕೋಟ್ ಏರ್ ಸ್ಟ್ರೈಕ್ ನಡೆಸಿ ನಾವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಇನ್ನೂ ಅದು ಪಾಠ ಕಲಿತಿಲ್ಲ ಎಂದರೆ ಈಗಲೂ ಗಡಿದಾಟಿ ಬಂದು ಪಾಠ ಕಲಿಸುತ್ತೇವೆ ಎಂದು ರಾವತ್ ಹೇಳಿದರು.

ಕಾಶ್ಮೀರದಲ್ಲಿ ಜಿಹಾದ್ ನಡೆಸುತ್ತೇವೆ ಎಂದು ಇತ್ತೀಚೆಗಷ್ಟೇ ಪಾಕಿಸ್ತಾನ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ರಾವತ್, ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ. ಭಯೋತ್ಪಾದಕರನ್ನು ಮಾತ್ರವಲ್ಲ, ಅವರಿಗೆ ಕುಮ್ಮಕ್ಕು ನೀಡುವವರನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ರಾವತ್ ಹೇಳಿದರು.












Click it and Unblock the Notifications