ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟರ್‌ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಿದ ಆ್ಯಪಲ್: ಬೇಸರ ವ್ಯಕ್ತಪಡಿಸಿದ ಎಲಾನ್‌ ಮಸ್ಕ್‌

|
Google Oneindia Kannada News

ವಾಷಿಂಗ್ಟನ್, ನವೆಂಬರ್ 11: ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ಅವರು ಎರಡು ವಾರಗಳ ಹಿಂದೆ ಟ್ವಿಟರ್‌ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡರು. ಆ ನಂತರ ಅರ್ಧದಷ್ಟು ಸಿಬ್ಬಂದಿಯನ್ನು ಕಂಪನಿ ವಜಾಗೊಳಿಸಿತ್ತು. ಟ್ವಿಟರ್‌ನಿಂದ ವಜಾಗೊಂಡ ಉದ್ಯೋಗಿಗಳಲ್ಲಿ ಭಾರತದ 200 ಮಂದಿಯೂ ಇದ್ದಾರೆ.

ಈಗ ಜಾಗತಿಕ ಮಟ್ಟದ ಕಂಪನಿಗಳು ಟ್ವಿಟರ್‌ಗೆ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿವೆ. ಈ ಬಗ್ಗೆ ಎಲಾನ್‌ ಮಸ್ಕ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ ಬೃಹತ್ ಹ್ಯಾಕ್: ಬಿಟ್‌ಕಾಯಿನ್ ದಂಧೆಯಿಂದ ದಾಳಿ?ಟ್ವಿಟರ್‌ ಬೃಹತ್ ಹ್ಯಾಕ್: ಬಿಟ್‌ಕಾಯಿನ್ ದಂಧೆಯಿಂದ ದಾಳಿ?

ಐಪೋನ್‌ ತಯಾರಿಕಾ ಕಂಪನಿಯಾದ ಆ್ಯಪಲ್, ಟ್ವಿಟರ್‌ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಿದೆ.

Apple has mostly stopped advertising on Twitter says Elon Musk

ಈ ಕುರಿತು ಟ್ವೀಟ್‌ ಮಾಡಿರುವ ಎಲಾನ್‌ ಮಸ್ಕ್‌, 'ಆ್ಯಪಲ್ ಟ್ವಿಟರ್‌ನಲ್ಲಿ ಜಾಹೀರಾತನ್ನು ನಿಲ್ಲಿಸಿದೆ. ಅಮೆರಿಕದಲ್ಲಿನ ವಾಕ್‌ ಸ್ವಾತಂತ್ರ್ಯವನ್ನು ಆ್ಯಪಲ್ ಕಂಪನಿಯವರು ದ್ವೇಷಿಸುತ್ತಾರೆಯೇ' ಎಂದು ಪ್ರಶ್ನಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಟ್ವಿಟರ್‌ನ ಹೊಸ ನೀತಿಗಳ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟೀಕೆಗಳು ಕೇಳಿಬರುತ್ತಲೇ ಇವೆ. ಆದರೆ, ಈ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಎಲಾನ್‌ ಮಸ್ಕ್‌ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ.

Apple has mostly stopped advertising on Twitter says Elon Musk

ಟ್ವಿಟರ್‌ ವಿರುದ್ಧ ಸಾಮಾಜಿಕ ಹೋರಾಟಗಾರರು ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ ದೊಡ್ಡ ಜಾಹೀರಾತುದಾರರು ನಮಗೆ ಜಾಹೀರಾತುಗಳನ್ನು ನೀಡುತ್ತಿಲ್ಲ. ಅವರಿಗೆ ನಮ್ಮ ಸ್ವಾಧೀನ ಪ್ರಕ್ರಿಯೆ ಬಗ್ಗೆ ಆತಂಕವಿದೆ. ಪ್ರತಿದಿನ ನಮಗೆ ಅಧಿಕ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ಎಲಾನ್‌ ಮಸ್ಕ್‌ ಆರೋಪಿಸಿದ್ದಾರೆ. ನಮ್ಮ ಕಂಪನಿಗೆ ದಿನವೊಂದಕ್ಕೆ 4 ಮಿಲಿಯನ್ ಡಾಲರ್‌ ನಷ್ಟವಾಗುತ್ತಿದೆ. ನೌಕರರ ವಜಾಗೊಳಿಸುವುದು ಬಿಟ್ಟು ತಮಗೆ ಬೇರೆ ಆಯ್ಕೆಗಳಿಲ್ಲ. ವಜಾಗೊಂಡ ಎಲ್ಲರಿಗೂ ಮೂರು ತಿಂಗಳ ಹೆಚ್ಚುವರಿ ವೇತನ ನೀಡಲಾಗಿದೆ. ಕಾನೂನಿನ ಪ್ರಕಾರ ಶೇ.50ರಷ್ಟು ಹೆಚ್ಚುವರಿ ವೇತನ ಕೊಡಲಾಗಿದೆ ಎಂದು ಎಲಾನ್‌ ಮಸ್ಕ್‌ ಮಾಹಿತಿ ನೀಡಿದ್ದರು.

English summary
Now global companies have stopped advertising on Twitter. Elon Musk expressed sadness about this. Apple, the iPhone maker, has stopped advertising on Twitter. Elon Musk has tweeted about this, 'Apple has stopped advertising on Twitter. "Does the Apple company hate freedom of speech in America?" he asked,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X