ಗಾಯದ ಮೇಲೆ ಬರೆ ಎಳಿದ ಭೂಕಂಪ: ಟರ್ಕಿಯಲ್ಲಿ ಮತ್ತೊಮ್ಮೆ ಕಂಪಸಿದ ಭೂಮಿ!
ಟರ್ಕಿ ಮತ್ತು ಸಿರಿಯಾದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 34,000 ಕ್ಕಿಂತ ಹೆಚ್ಚಿದೆ.
ಈಗಾಗಲೇ ಪ್ರಬಲ ಭೂಕಂಪಕ್ಕೆ ನಲುಗಿ ಹೋದ ಟರ್ಕಿಯಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಟರ್ಕಿ ಮತ್ತು ಸಿರಿಯಾದಲ್ಲಿ 4.7 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಒಂದು ವಾರದ ಹಿಂದೆ 7.8 ತೀವ್ರತೆಯ ಭೂಕಂಪಕ್ಕೆ 34,000 ಕ್ಕಿಂತ ಹೆಚ್ಚಿನ ಸಾವು ಸಂಭವಿಸಿವೆ. ನೂರಾರು ಕಟ್ಟಡಗಳು ಧರೆಗುರುಳಿವೆ. ಅವಶೇಷಗಳ ಅಡಿ ದೇಹಗಳು ಹುದುಗಿಹೋಗಿವೆ. ನೂರಾರು ಜನ ಕಾಣೆಯಾಗಿದ್ದಾರೆ. ಹೀಗಿರುವಾಗ ಮತ್ತೊಂದು ಭೂಕಂಪ ಸಂಭವಿಸಿದೆ.
#BREAKING #TURKIYE #TURQUIA #TURQUIE #TURKEY
— loveworld (@LoveWorld_Peopl) February 6, 2023
🔴TURKIYE :POWERFUL EARTHQUAKE MAGNITUDE 7.4 HIT 10 CITIES IN SOUTHEASTERN REGION💔#VIDEO SANLIURFA CITY
Buildings continue to collapse due to AFTERSHOCKS #BreakingNews #UltimaHora #Earthquake #Terremoto #Temblor #Gempa #Deprem pic.twitter.com/kgEtacneUJ
ಅತಿ ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ಒಂದಾದ ಕಹ್ರಮನ್ಮಾರಾಸ್ನ ದಕ್ಷಿಣ ನಗರದ ಸಮೀಪದಲ್ಲಿ ಭೂಕಂಪನದ ಕೇಂದ್ರಬಿಂದುವಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ವರದಿ ಮಾಡಿದೆ.

ಭಾನುವಾರ ಟರ್ಕಿ ಮತ್ತು ಸಿರಿಯಾದಲ್ಲಿ ಒಂದು ವಾರದ ನಂತರ ಅವಶೇಷಗಳಿಂದ ಬದುಕುಳಿದವರನ್ನು ರಕ್ಷಿಸಲಾಯಿತು. ಈ ರಕ್ಷಣ ಕಾರ್ಯ ಇನ್ನೂ ಮುಂದುವರೆದಿದೆ. ಟರ್ಕಿಯ ಅಧಿಕಾರಿಗಳು ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ.

ಭೂಕಂಪ ಸಂಭವಿಸಿ ಒಂದು ವಾರದ ಬಳಿಕ ಅವಶೇಷಗಳ ಅಡಿ ಸಿಲುಕಿರುವವರು ಬದುಕಿರುವ ಸಾಧ್ಯತೆ ತುಂಬಾ ಕಡಿಮೆ ಇದೆ. ಸೋಮವಾರ ಭೂಕಂಪ ಮತ್ತು ಅದರ ನಂತರದ ಆಘಾತಗಳಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 34,000 ಮೀರಿದೆ ಮತ್ತು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಭೂಕಂಪವು ಈಗ 1939 ರಿಂದ ಟರ್ಕಿಯನ್ನು ಅಪ್ಪಳಿಸಿದ ಅತ್ಯಂತ ಮಾರಣಾಂತಿಕವಾಗಿದೆ.












Click it and Unblock the Notifications