ಭಾರತಕ್ಕೆ ಜೈ ಎನ್ನಲಿರುವ ಅಮೆರಿಕ, ಪಾಕಿಸ್ತಾನಕ್ಕೆ ಕೈ ಕೊಡುವುದು ಗ್ಯಾರಂಟಿ! Operation Sindoor
ಭಾರತ & ಪಾಕಿಸ್ತಾನ ನಡುವೆ ಪರೋಕ್ಷವಾಗಿ ಯುದ್ಧ ಶುರುವಾಗಿದ್ದು, ಇನ್ನೇನು ಅಧಿಕೃತ ಘೋಷಣೆ ಒಂದೇ ಬಾಕಿ ಎನ್ನುವ ಪರಿಸ್ಥಿತಿ ಇದೆ. ಒಂದು ಕಡೆ ಭಾರತೀಯ ಸೇನೆಯಿಂದ ಪಾಪಿ ಉಗ್ರರ ವಿರುದ್ಧ ಖಡಕ್ ಕ್ರಮ ಕೈಗೊಂಡ ನಂತರ, ಇನ್ನೊಂದು ಕಡೆ ಪಾಪಿ ಪಾಕಿಸ್ತಾನದ ಸೇನೆ ಕೂಡ ಭಾರತದ ವಿರುದ್ಧ ದಾಳಿ ಆರಂಭ ಮಾಡಿದೆ. ಇಂತಹ ಸಮಯದಲ್ಲೇ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಆಘಾತ ನೀಡುವುದು ಗ್ಯಾರಂಟಿ ಆಗುತ್ತಿದೆ.
ಅಂದಹಾಗೆ ಯುದ್ಧದ ರಕ್ತ ಹರಿಯುವ ಸಮಯದಲ್ಲೇ, ಭಾರತ & ಪಾಕಿಸ್ತಾನ ಪರವಾಗಿರುವ ದೇಶಗಳು ತಮ್ಮ ತಮ್ಮ ವಾದ ಮಂಡನೆ ಮಾಡುತ್ತಿವೆ. ಭಾರತಕ್ಕೆ ಅತಿಹೆಚ್ಚು ಬೆಂಬಲ ಕೂಡ ಸಿಗುತ್ತಿದ್ದು, ಉಗ್ರರನ್ನು ಬೆಳೆಸುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಆಘಾತವೇ ಎದುರಾಗುತ್ತಿದೆ. ಈ ಸಮಯದಲ್ಲೇ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ, ಭಾರತ & ಪಾಕಿಸ್ತಾನದ ನಡುವೆ ಶುರು ಆಗಿರುವ ಯುದ್ಧದ ಬಗ್ಗೆ ಒಂದು ಕಣ್ಣು ಇಟ್ಟಿದೆ. ಯಾಕಂದ್ರೆ ಇಡೀ ಜಗತ್ತಿಗೇ ಈ ಯುದ್ಧ ದೊಡ್ಡ ಆಘಾತ ನೀಡಿದೆ, ಮತ್ತೊಂದು ಕಡೆ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ಕೊಡಲು ಇದೀಗ ಅಮೆರಿಕ ಸಜ್ಜಾಗಿ ನಿಂತಿದೆ.

ಪಾಪಿ ಪಾಕಿಸ್ತಾನಕ್ಕೆ ದೊಡ್ಡ ಆಘಾತ!
ಜಾಗತಿಕ ಮಟ್ಟದಲ್ಲಿ ಪಾಪಿ ಪಾಕಿಸ್ತಾನ ಕೆಟ್ಟ ಹೆಸರು ಸಂಪಾದನೆ ಮಾಡಿದ್ದು, ವಿಶ್ವಸಂಸ್ಥೆ ಸೇರಿದಂತೆ ಜಾಗತಿಕವಾಗಿ ದೊಡ್ಡ ದೊಡ್ಡ ಸಂಸ್ಥೆಗಳು ಕೂಡ ಪಾಕಿಸ್ತಾನದ ವಿರುದ್ಧ ಇವೆ. ಅದರಲ್ಲೂ ಹಲವು ದೇಶಗಳು ಕೂಡ ಪಾಕಿಸ್ತಾನ ಸರಿ ಇಲ್ಲ ಅಂತಾನೇ ಹೇಳುತ್ತವೆ. ಹೀಗೆ, ಅಮೆರಿಕ ಕೂಡ ಪಾಕಿಸ್ತಾನದ ಉಗ್ರ ಪೋಷಣೆ ಬಗ್ಗೆ ಆಕ್ರೋಶ ಹೊರ ಹಾಕುತ್ತಲೇ ಬಂದಿದೆ. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾರತದ ಪರವಾಗಿ ಬ್ಯಾಟ್ ಬೀಸಿ ಪಾಕಿಸ್ತಾನಕ್ಕೆ ಆಘಾತ ನೀಡುತ್ತಿದ್ದಾರೆ.
ಅಮೆರಿಕ ಕೈಕೊಟ್ಟ ಕಾರಣ ಪಾಕ್‌ಗೆ ಶಾಕ್!
ಹೌದು, ಪಾಕಿಸ್ತಾನಕ್ಕೆ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯ ಮಾಡಿತ್ತು ಅಮೆರಿಕ ಎಂಬ ಮಾತು ಇದೆ. ಯಾಕಂದ್ರೆ ಈ ಹಿಂದೆ ಅಮೆರಿಕದಲ್ಲಿ ಇದ್ದ ಅಧ್ಯಕ್ಷರು ಭಾರತದ ವಿರುದ್ಧ ಪಾಪಿ ಪಾಕಿಸ್ತಾನ ಬೆಂಬಲಿಸುತ್ತಿದ್ದರು. ಈ ಕಾರಣಕ್ಕೆ ದೊಡ್ಡ ಪ್ರಮಾಣದ ಸಹಾಯ ಮಾಡಿ ಪಾಕಿಸ್ತಾನ ಎತ್ತಿ ಕಟ್ಟುವ ಕೆಲಸ ಮಾಡಿದ್ದರು ಎಂಬ ಆರೋಪ ಇದೆ. ಆದರೆ ಇದೀಗ ಅಲ್ಲಿ ಅಂದ್ರೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಇದ್ದು, ಟ್ರಂಪ್ ಅವರಿಗೂ & ಪಾಕಿಸ್ತಾನ ರಾಜಕಾರಣಿಗಳಿಗೂ ಭಾರಿ ದ್ವೇಷ ಇದೆ. ಅಲ್ಲದೆ ಪಾಕಿಸ್ತಾನದ ವಿರುದ್ಧ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದಾರೆ. ಹೀಗಾಗಿ ಈಗ ಪಾಕಿಸ್ತಾನಕ್ಕೆ ಅಮೆರಿಕ ಸಹಾಯ ಮಾಡುವುದು ಅನುಮಾನ, ಹಾಗೇ ಭಾರತ ಪರವಾಗಿ ಅಮೆರಿಕ ನಿಲ್ಲುವುದು ಕೂಡ ಗ್ಯಾರಂಟಿ.












Click it and Unblock the Notifications