Donald Trump: ಟ್ಯಾಕ್ಸ್ ಬಾಣ ಬಿಟ್ಟ ಟ್ರಂಪ್, ನಲುಗಿ ಹೋದ ಭಾರತ ವಿರೋಧಿ ಕೆನಡಾ!

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮನಸ್ಸಿಗೆ ಬಂದಂತೆ ಆದೇಶ ನೀಡುತ್ತಿದ್ದಾರೆ ಎಂಬ ಆರೋಪ ಇದೆ. ಆದರೆ ಎದರಾಳಿಗಳ ಮಾತಿಗೆ ಕೇರ್ ಮಾಡದ ಟ್ರಂಪ್ ಮಾತ್ರ ತಮ್ಮ ಮನಸ್ಸಿಗೆ ಬಂದ ಆದೇಶಗಳನ್ನು ಹೊರಡಿಸುತ್ತಲೇ ಇದ್ದಾರೆ. ಇಷ್ಟೆಲ್ಲಾ ಕಿರಿಕ್ ನಡುವೆ ಡೊನಾಲ್ಡ್ ಟ್ರಂಪ್ ಅವರು ಬಿಟ್ಟಿರುವ ಟ್ಯಾಕ್ಸ್ ಬಾಣಕ್ಕೆ ಭಾರತ ವಿರೋಧಿ ಕೆನಡಾ ನಲುಗಿ ಹೋಗಿದೆ!

ಸಹಜವಾಗಿ ಅಮೆರಿಕ ಇಡೀ ಜಗತ್ತಿನ ವ್ಯವಹಾರದ ಮೇಲೆ ಪ್ರಭಾವ ಹೊಂದಿರುತ್ತದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರದ ನಂತರ ಶತ್ರುಗಳಿಗೆ ನಡುಕ ಶುರುವಾಗಿತ್ತು. ಅದರಲ್ಲೂ ಮೊದಲಿನಿಂದ ಕೂಡ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ಡೊನಾಲ್ಡ್ ಟ್ರಂಪ್ ಅವರ ನಡುವೆ ಕಿರಿಕಿರಿ ಕಿರಿಕ್ ನಡೆಯುತ್ತಲೇ ಇತ್ತು. ಹೀಗಿದ್ದಾಗ ಟ್ರಂಪ್ ಚುನಾವಣೆ ಗೆದ್ದಿದ್ದೇ ತಡ ಕೆನಡಾಗೆ ಮೊದಲ ಶಾಕ್ ಕೊಟ್ಟರು. ಇಷ್ಟೆಲ್ಲದರ ಮಧ್ಯೆ ಕೆಲ ದಿನಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ಟ್ರಂಪ್ ಕೆನಡಾ, ಮೆಕ್ಸಿಕೋ, ಚೀನಾಗೆ ಒಟ್ಟೊಟ್ಟಿಗೆ ಇದೀಗ ಆಘಾತ ನೀಡಲು ಸಜ್ಜಾಗಿದ್ದಾರೆ!

American President Donald Trump Will Impose Special Tariffs On Canada Mexico and China

ಅಮೆರಿಕ ಅಕ್ಕಪಕ್ಕದ ದೇಶಗಳು ಶೇಕ್!

ಹೌದು, ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ಜನರ ಮೇಲೆ ತೆರಿಗೆ ಭಾರ ಹಾಕುವ ಬದಲು ಅಮೆರಿಕದ ಜೊತೆಗೆ ವ್ಯವಹಾರ ನಡೆಸುವ ದೇಶಗಳ ಮೇಲೆ ತೆರಿಗೆ ಹಾಕಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಕೆನಡಾ ಮತ್ತು ಮೆಕ್ಸಿಕೋಗೆ ಶೇಕಡಾ 25 ರಷ್ಟು ತೆರಿಗೆ ವಿಧಿಸಲು ನಿರ್ಧಾರ ಮಾಡಿದ್ದಾರೆ. ಅಂದರೆ ಕೆನಡಾ ಮತ್ತು ಮೆಕ್ಸಿಕೋ ದೇಶಗಳಿಂದ ಅಮೆರಿಕಗೆ ಬರುವ ವಸ್ತುಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ಹಾಕಲಾಗುತ್ತದೆ. ಹಾಗೇ ಚೀನಾ ಮೂಲಕ ಬರುವ ವಸ್ತುಗಳ ಮೇಲೆ ಶೇಕಡಾ 10 ರಷ್ಟು ತೆರಿಗೆ ಬೀಳಲಿದೆಯಂತೆ.

ಕೆನಡಾ ಪ್ರಧಾನಿ ಹೇಳಿದ್ದು ಏನು?

ಇನ್ನೇನು ಕೆಲವೇ ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಹೊಸ ತೆರಿಗೆ ನಿಯಮ ಘೋಷಣೆ ಮಾಡಿ, ಕೆನಡಾ, ಮೆಕ್ಸಿಕೋ & ಚೀನಾ ವಿರುದ್ಧ ಹೆಚ್ಚಿನ ಸುಂಕ ವಿಧಿಸುವ ಸಾಧ್ಯತೆ ಇದೆ. ಹೀಗಿದ್ದಾಗ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡ ಅಮೆರಿಕ ಮೊದಲು ಘೋಷಣೆಯನ್ನ ಮಾಡಲಿ, ಆ ಬಳಿಕ ನಾವು ಕೂಡ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

ಮೆಕ್ಸಿಕೋ ಕೂಡ ಟ್ರಂಪ್ ಆಡಳಿತದ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ ಅಂತಾ ಮಾಹಿತಿಯನ್ನ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಈ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ಪಾಶ್ಚಿಮಾತ್ಯರ ಒಗ್ಗಟ್ಟು ಈ ಮೂಲಕ ಮುರಿದು ಹೋಗುವ ಮುನ್ಸೂಚನೆ ಕೂಡ ಸಿಗುತ್ತಿದೆ. ಮುಂದೆ ಇದೇ ರೀತಿ ಯುರೋಪ್ ದೇಶಗಳಿಗೂ ಟ್ಯಾಕ್ಸ್ ಏಟು ಗ್ಯಾರಂಟಿ ಆಗುತ್ತಾ? ಅನ್ನೋ ಡೌಟ್ ಕೂಡ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+