ಭಾರತ & ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ- ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು? India vs Pakistan
ಅಮೆರಿಕ ಇದೀಗ ಮತ್ತೊಮ್ಮೆ ಜಗತ್ತಿನಲ್ಲಿ ತನ್ನ ಶಕ್ತಿ ಏನು ಅನ್ನೋದನ್ನ ತೋರಿಸಿದ್ದು, ಈ ಮೂಲಕ ಭಾರತ & ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಮಾಡುವಲ್ಲಿ ಯಶಸ್ವಿ ಕೂಡ ಆಗಿದೆ. ಪಾಕಿಸ್ತಾನ ಉಗ್ರರನ್ನ ಮುಂದೆ ಬಿಟ್ಟು ಭಾರತದಲ್ಲಿ ದಾಳಿ ಮಾಡಿಸಿದ್ದ ಕಾರಣ ಭಾರತೀಯ ಸೇನೆ ನೇರವಾಗಿ ಪಾಕಿಸ್ತಾನದ ವಿರುದ್ಧ ದಾಳಿ ಆರಂಭ ಮಾಡಿತ್ತು. ಉಗ್ರರನ್ನು ಅವರ ಅಡಗುದಾಣದಲ್ಲೇ ಹತ್ಯೆ ಮಾಡಲಾಗಿತ್ತು. ಹೀಗಿದ್ದಾಗ ಪಾಪಿ ಪಾಕಿಸ್ತಾನದ ಸೇನೆಯು ಕೂಡ ಮರುದಾಳಿ ಆರಂಭ ಮಾಡಿತ್ತು.
ಪಾಕಿಸ್ತಾನ ಸೇನೆ ಭಾರತದ ಮೇಲೆ ದಾಳಿ ಆರಂಭ ಮಾಡಿದ ಕಾರಣಕ್ಕೆ ಭಾರತೀಯ ಸೇನೆಯು ಕೂಡ ಸರಿಯಾಗಿ ಉತ್ತರ ನೀಡಿದೆ. ಭಾರತದ ದಾಳಿಯನ್ನು ತಡೆಯಲು ಆಗದೆ ನಲುಗಿ ಹೋದ ಪಾಪಿ ಪಾಕ್ ಜಗತ್ತಿನ ಎದುರು ಬೇಡಿಕೊಳ್ಳುವ ಪರಿಸ್ಥಿತಿ ಬಂದಿತ್ತು. ಅದರಲ್ಲೂ ಅಮೆರಿಕದ ಎದುರು ಯುದ್ಧ ನಿಲ್ಲಿಸಲು ಪರಿಪರಿಯಾಗಿ ಬೇಡಿದ್ದ ಪಾಪಿ ಪಾಕಿಸ್ತಾನ ಕೊನೆಗೂ ಸಂಧಾನ ಮಾಡಿಕೊಂಡು ಸೈಲೆಂಟ್ ಆಗಿದೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವೆ ಇದೀಗ ಕದನ ವಿರಾಮ ಘೋಷಣೆ ಆಗಿದ್ದು, ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮಾತನಾಡಿದ್ದಾರೆ.

ಟ್ರಂಪ್ ದಿನಕ್ಕೊಂದು ಹೇಳಿಕೆ ಶುರು!
ಭಾರತ & ಪಾಕಿಸ್ತಾನ ಯುದ್ಧ ನಿಲ್ಲಿಸಿದೆ ಎಂದು ಗೆದ್ದು ಬೀಗುತ್ತಿರುವ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ಇದೀಗ ಯುದ್ಧ ನಿಲ್ಲಿಸಿದ್ದಕ್ಕೆ ಎರಡೂ ದೇಶಗಳಿಗೆ ಅಭಿನಂದನೆಯನ್ನ ಸಲ್ಲಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಭಾರತ & ಪಾಕಿಸ್ತಾನ ಯುದ್ಧ ನಿಲ್ಲಿಸುವ ರೀತಿ ಮಾಡಿ ನಾನು ಗೆದ್ದು ಬೀಗಿದ್ದೀನಿ ಅಂತಾನೂ ಅವರು ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಟ್ರಂಪ್ ಅವರ ಈ ಹೇಳಿಕೆ ಕೂಡ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಪಾಪಿ ಪಾಕಿಸ್ತಾನ ಸೇನೆ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಲೇ ಇದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ದಿನಕ್ಕೊಂದು ಹೇಳಿಕೆಯನ್ನ ನೀಡುತ್ತಿದ್ದು, ಭಾರಿ ವಿವಾದ ಎಬ್ಬಿಸುತ್ತಿದೆ.
ಒಟ್ನಲ್ಲಿ ಭಾರತ & ಪಾಕಿಸ್ತಾನ ಯುದ್ಧ ನಿಂತಿದ್ದು ಭಾರತೀಯ ಸೇನೆಯ ಶಕ್ತಿ ನೋಡಿ ಎಂಬ ಮಾತಿನಲ್ಲಿ ಅನುಮಾನವೇ ಬೇಡ. ಯಾಕಂದ್ರೆ ಭಾರತೀಯ ಸೇನೆ ಅಷ್ಟು ಶಕ್ತಿಯುತವಾಗಿದೆ & ಶತ್ರು ಸೇನೆಯನ್ನ ಹೊಡೆದು ಬಿಸಾಕುವ ಸಾಮರ್ಥ್ಯ ಹೊಂದಿದೆ. ಭಾರತೀಯ ಸೇನೆಯನ್ನ ಪಾಪಿ ಪಾಕಿಸ್ತಾನ ಎದುರು ಹಾಕಿಕೊಂಡು ಬದುಕುವುದಕ್ಕೆ ಅಸಾಧ್ಯ ಅನ್ನೋದು ಗೊತ್ತಾಗಿ, ಕೊನೆಗೆ ಸಂಧಾನ ಮಾಡಿಸಿಕೊಂಡಿದೆ ಪಾಪಿ ಪಾಕಿಸ್ತಾನ. ಆದರೆ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯಿಂದಲೇ ವಿವಾದ ಸೃಷ್ಟಿ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications