ಕಾಮದಾಟ ಬಯಲಾಗದಿರಲು ನಟಿಗೆ ಲಕ್ಷಾಂತರ ರೂಪಾಯಿ ನೀಡಿದ್ದ ಟ್ರಂಪ್

Posted By:
Subscribe to Oneindia Kannada

ವಾಷಿಂಗ್ಟನ್, ಜ 14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹನ್ನೊಂದು ವರ್ಷದ ಹಿಂದೆ ನಟಿಯೊಂದಿಗೆ ನಡೆಸಿದ ಕಾಮದಾಟದ ವಿಚಾರವನ್ನು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಈಗ ಬಹಿರಂಗಪಡಿಸಿದೆ.

2006ರಲ್ಲಿ ಉದ್ಯಮಿಯಾಗಿದ್ದ ಟ್ರಂಪ್, ತಾನು ನೀಲಿ ಚಿತ್ರ ನಟಿಯೊಂದಿಗೆ ನಡೆಸಿದ್ದ ರಂಗಿನಾಟ ಬಯಲು ಮಾಡದಂತೆ ನಟಿಗೆ 1.30 ಲಕ್ಷ ಡಾಲರ್ (83 ಲಕ್ಷ ರೂಪಾಯಿ) ಮೊತ್ತವನ್ನು ತಮ್ಮ ಖಾಸಗಿ ವಕೀಲರ ಮೂಲಕ ಕಳುಹಿಸಿಕೊಟ್ಟಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಸುರಿಮಳೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸಿದ ನಂತರ ನೀಲಿ ಚಿತ್ರ ನಟಿ ಸ್ಟಾರ್ಮಿ ಡೇನಿಯಲ್, ಹನ್ನೊಂದು ವರ್ಷದ ಹಿಂದೆ ಟ್ರಂಪ್ ಜೊತೆಗಿನ ಸಂಬಂಧವನ್ನು ಎಬಿಸಿ ನ್ಯೂಸ್ ವಾಹಿನಿಗೆ ವಿವರಿಸಲು ಮುಂದಾಗಿದ್ದರು. ಆ ವೇಳೆ, ಆಕೆಯ ಬಾಯಿ ಮುಚ್ಚಿಸಲು ಭಾರೀ ಮೊತ್ತದ ಹಣವನ್ನು ನಟಿ ಸ್ಟಾರ್ಮಿಗೆ ನೀಡಲಾಗಿತ್ತು.

Donald Trump paid porn star $130,000 to stay silent over alleged affair – Wall Street Journal report

ತನ್ನ ರಂಗಿನಾಟದಿಂದ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎನ್ನುವ ಉದ್ದೇಶದಿಂದ ಟ್ರಂಪ್, ತಮ್ಮ ವಕೀಲ ಮೈಕೆಲ್ ಕೊಹೆನ್ ಮೂಲಕ, ನಟಿ ಸ್ಟ್ರಾರ್ಮಿ ವಕೀಲರಿಗೆ ದುಡ್ಡನ್ನು ತಲುಪಿಸಿದ್ದರು. ಜೊತೆಗೆ, ಯಾವುದೇ ವಿಚಾರವನ್ನು ಬಹಿರಂಗ ಪಡಿಸದಂತೆ ನಟಿಗೆ ಎಚ್ಚರಿಕೆ ನೀಡಿದ್ದರು.

ಬಟಾಬಯಲಾಯ್ತು ಡೊನಾಲ್ಡ್ ಟ್ರಂಪ್ ಎಂಬ ಆವೇಶದ ಕಿಡಿಯ ಗುಟ್ಟು!

ಆದರೆ, ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಯನ್ನು ಟ್ರಂಪ್ ವಕೀಲ ಮತ್ತು ನಟಿ ಸ್ಟಾರ್ಮಿ ವಕೀಲರಿಬ್ಬರೂ ಅಲ್ಲಗಳೆದಿದ್ದಾರೆ. ಜೊತೆಗೆ, ಇದೊಂದು ಹಳೆಯ ವದಂತಿಯೆಂದು ಶ್ವೇತಭವನ ಕೂಡಾ ಪತ್ರಿಕೆಯ ವಿರುದ್ದ ಕಿಡಿಕಾರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
American President Donald Trump paid porn star $130,000 to stay silent over alleged affair, Wall Street Journal report.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ