Donald Trump: ಭಾರತ ಮೂಲದವರಿಗೆ ಒಳ್ಳೆಯ ಸ್ಥಾನಮಾನ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಹೊಸ ತಲ್ಲಣ ಸೃಷ್ಟಿಯಾಗಿದೆ. ಯಾಕಂದ್ರೆ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವಿರೋಧಿಗಳಿಗೆ ಭಯ ಶುರುವಾಗಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಆಡಳಿತ ಹೊಸ ವಿಷಯಕ್ಕೆ ಸದ್ದು ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಗೆಲುವಿಗೆ ಭಾರಿ ದೊಡ್ಡ ನೆರವು ನೀಡಿದ ಭಾರತೀಯರನ್ನ ಮರೆತಿಲ್ಲ. ಇದೇ ಕಾರಣಕ್ಕೆ ಭಾರತ ಮೂಲದವರ ಬೆನ್ನಿಗೆ ನಿಂತು, ಭಾರತ ಮೂಲದವರಿಗೆ ಒಳ್ಳೆಯ ಸ್ಥಾನಮಾನ ನೀಡ್ತಿದ್ದಾರೆ ಟ್ರಂಪ್!
ಅಮೆರಿಕದಲ್ಲಿ ಭಾರತೀಯರು ಭಾರಿ ಪ್ರಮಾಣದಲ್ಲಿ ಹೋಗಿ ನೆಲೆಸಿದ್ದಾರೆ. ಹಾಗೇ ಭಾರತದ ಪ್ರಜೆಗಳ ಬೆಂಬಲ ಇಲ್ಲದೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲ್ಲುವುದು ಸುಲಭದ ಮಾತೇ ಅಲ್ಲ. ಈಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತೀಯರ ಬೆಂಬಲ ಕೂಡ ದೊಡ್ಡ ಮಟ್ಟದಲ್ಲೇ ಸಿಕ್ಕಿತ್ತು. ಹೀಗಾಗಿಯೇ ಕಮಲಾ ಹ್ಯಾರಿಸ್ ವಿರುದ್ಧ ಗೆಲ್ಲುವುದು ಟ್ರಂಪ್ ಅವರಿಗೆ ಸುಲಭವಾಗಿತ್ತು. ಇದೀಗ ಆ ಋಣ ತೀರಿಸಲು ಟ್ರಂಪ್ ಅವರು ಮುಂದಾಗಿದ್ದಾರೆ!

ವಿವೇಕ್ ರಾಮಸ್ವಾಮಿಗೆ ಉತ್ತಮ ಸ್ಥಾನ
ಭಾರತ ಮೂಲದ ಅಮೆರಿಕದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕ ಸರ್ಕಾರದ ಕಾರ್ಯಕ್ಷಮತೆ ಮೇಲುಸ್ತುವಾರಿ ಇಲಾಖೆಯ ಹೊಣೆ ಹೊತ್ತುಕೊಂಡಿದ್ದಾರೆ. ಈ ಹುದ್ದೆಯನ್ನ ಅಮೆರಿಕದ ಅತ್ಯುತ್ತಮ ಸ್ಥಾನಗಳಲ್ಲಿ ಒಂದು ಎನ್ನಲಾಗಿದೆ. ಇದರ ಜೊತೆಗೆ ಇನ್ನೂ ಹಲವು ಭಾರತ ಮೂಲದ ಅಮೆರಿಕನ್ನರಿಗೆ ಉತ್ತಮವಾದ ಸ್ಥಾನಗಳನ್ನೇ ನೀಡಲು ಡೊನಾಲ್ಡ್ ಟ್ರಂಪ್ ಅವರು ಈಗ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಕೂಡ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ.
ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಅಧಿಕಾರಕ್ಕೆ
ಅಮೆರಿಕದಲ್ಲಿ ಚುನಾವಣೆ ನಡೆದ ಕೆಲವು ತಿಂಗಳ ನಂತರ ಹೊಸ ಅಧ್ಯಕ್ಷರು ಅಧಿಕಾರವನ್ನ ವಹಿಸಿಕೊಳ್ಳುತ್ತಾರೆ. ಇದೀಗ ಡೊನಾಲ್ಡ್ ಟ್ರಂಪ್ ಅವರು 2025ರ ಜನವರಿ ತಿಂಗಳಲ್ಲಿ ಹೀಗೆ ಅಮೆರಿಕದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅಬ್ಬರದ ಸಿದ್ಧತೆಗಳು ಅಮೆರಿಕದಲ್ಲಿ ಇದೀಗ ಶುರುವಾಗಿದೆ.
ಈಗಾಗಲೇ ಜೋ ಬೈಡನ್ ಅವರ ಜತೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಮಾತುಕತೆ ನಡೆಸಿದ್ದು ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಮತ್ತೊಂದು ಕಡೆ, ಅಮೆರಿಕದ ಪ್ರಮುಖ ಹುದ್ದೆಗಳಿಗೆ ಈಗಾಗಲೇ ಡೊನಾಲ್ಡ್ ಟ್ರಂಪ್ ಅವರ ಸಹವರ್ತಿಗಳು ಬಂದು ಕೂತಿದ್ದಾರೆ. ಈ ಮೂಲಕ ಬಹುತೇಕ ಜೋ ಬೈಡನ್ ಆಡಳಿತ ಕೊನೆಯಾಗಲು ಕ್ಷಣಗಣನೆ ಆರಂಭವಾಗಿದೆ.
ಒಟ್ನಲ್ಲಿ ಅಮೆರಿಕದಲ್ಲಿ ಹೊಸ ಗಾಳಿ ಬೀಸಿದಂತೆ ಕಾಣುತ್ತಿದ್ದು, ಡೊನಾಲ್ಡ್ ಟ್ರಂಪ್ ಅವರ ಅಧಿಕಾರದಲ್ಲಿ ಅಮೆರಿಕದಲ್ಲಿ ಏನೆಲ್ಲಾ ಬದಲಾವಣೆ ಕಾಣಬಹುದು? ಅನ್ನೋದನ್ನು ಕಾದು ನೋಡಬೇಕಿದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಸಮಯದಲ್ಲಿ ಅಮೆರಿಕನ್ನರಿಗೆ ಸಾಕಷ್ಟು ಭರವಸೆಗಳನ್ನ ನೀಡಿದ್ದಾರೆ.












Click it and Unblock the Notifications