Donald Trump: ದಿಢೀರ್ ಜೋ ಬೈಡನ್ ಭೇಟಿ ಮಾಡಿದ ಡೊನಾಲ್ಡ್ ಟ್ರಂಪ್!
ಅಮೆರಿಕದಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಆಗಿದ್ದು, ಜನರು ಡೊನಾಲ್ಡ್ ಟ್ರಂಪ್ ಅವರನ್ನ ಈ ಚುನಾವಣೆಯಲ್ಲಿ ಭರ್ಜರಿಯಾಗಿ ಆಯ್ಕೆ ಮಾಡಿದ್ದಾರೆ. ಜೋ ಬೈಡನ್ ಅವರ ಆಡಳಿತದಲ್ಲಿ ಸಾಕಷ್ಟು ಸಮಸ್ಯೆಗಳು ಆಗಿವೆ ಎಂಬ ಕಾರಣಕ್ಕೆ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗೆಲ್ಲುವ ಅವಕಾಶ ಗಿಟ್ಟಿಸಿಕೊಂಡರು. ಹೀಗಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಹೀನಾಯವಾಗಿ ಸೋತು ಸುಣ್ಣವಾಗಿದ್ದಾರೆ. ಇಷ್ಟೆಲ್ಲದರ ನಡುವೆ ದಿಢೀರ್ ಜೋ ಬೈಡನ್ ಭೇಟಿ ಮಾಡಿದ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ದೊಡ್ಡ ಜಯ ದಾಖಲಿಸುವ ಮೂಲಕ ಕಮಲಾ ಹ್ಯಾರಿಸ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಹೀಗೆ ಟ್ರಂಪ್ ಅವರ ಗೆಲುವು ಒಂದು ಕಡೆ, ಎದುರಾಳಿ ಡೆಮಾಕ್ರಟಿಕ್ ಪಕ್ಷದ ನಾಯಕರಿಗೆ ಭಾರಿ ದೊಡ್ಡ ಆಘಾತ ನೀಡಿದೆ. ಹಾಗೇ ಜೋ ಬೈಡನ್ ಆಡಳಿತದ ಬಗ್ಗೆ ಎದ್ದಿದ್ದ ಆಕ್ರೋಶಗಳು ಮತ್ತಷ್ಟು ಜೋರಾಗಿವೆ. ಈ ಸಮಯದಲ್ಲೇ ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಭೇಟಿ ಮಾಡಿದ್ದಾರೆ!

ಟ್ರಂಪ್ & ಬೈಡನ್ ಭೇಟಿ ಏಕೆ?
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅದೆಷ್ಟು ವಿಶಿಷ್ಟವೋ ಅಷ್ಟೇ ವೈಶಿಷ್ಟ್ಯತೆಗಳು ಅಮೆರಿಕ ಅಧ್ಯಕ್ಷರ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕೂಡ ನಾವು ಕಾಣಬಹುದು. ಯಾಕಂದ್ರೆ ಆ ದೇಶದಲ್ಲಿ, ಅಧ್ಯಕ್ಷರ ಚುನಾವಣೆ ಮುಗಿದು ಸುಮಾರು 2 ರಿಂದ 3 ತಿಂಗಳ ನಂತರ ಹೊಸ ಅಧ್ಯಕ್ಷರು ಸಂಪೂರ್ಣವಾಗಿ ಅಧಿಕಾರ ಕೈಗೆ ತೆಗೆದುಕೊಳ್ಳುತ್ತಾರೆ. ಹೀಗೆ ಹೊಸ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಕೂಡ ಇದೀಗ ಅದೇ ಕೆಲಸದಲ್ಲಿ ನಿರತರಾಗಿದ್ದಾರೆ.
ಅಷ್ಟಕ್ಕೂ ಜೋ ಬೈಡನ್ ಈಗ ಅಮೆರಿಕದ ಅಧ್ಯಕ್ಷರಾಗಿಯೇ ಕಾರ್ಯನಿರ್ವಹಣೆ ಮಾಡ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಹಸ್ತಾಂತರ ಮಾಡಬೇಕು. ಹೀಗಾಗಿ ಆ ಕೆಲಸಗಳು ವೇಗವಾಗಿ ಸಾಗಿದ್ದು, ಡೊನಾಲ್ಡ್ ಟ್ರಂಪ್ ನೇರವಾಗಿ ಜೋ ಬೈಡನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಧಿಕಾರ ಹಸ್ತಾಂತರದ ಬಗ್ಗೆ ಬೈಡನ್ ಅವರ ಬಳಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಯುದ್ಧ ನಿಲ್ಲಿಸಲು ಟ್ರಂಪ್ ಸಿದ್ಧತೆ?
ಹೀಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮರು ದಿನವೇ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಈ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಗೆಲ್ಲುವ ಮೊದಲು ಟ್ರಂಪ್ ಸಾಕಷ್ಟು ಭರವಸೆ ನೀಡಿದ್ದರು. ಅದು ಹೇಗೆ ಅಂದ್ರೆ, ತಾವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈಗ ನಡೆಯುತ್ತಿರುವ ಉಕ್ರೇನ್ & ರಷ್ಯಾ ಯುದ್ಧ ಸೇರಿ, ಇಸ್ರೇಲ್ & ಗಾಜಾ ಯುದ್ಧ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಟ್ರಂಪ್ ಅವರ ನಡೆ ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications