13 ವರ್ಷಗಳ ಹುಡುಕಾಟದ ಫಲ : ಜಲ್ಲಿಕಲ್ಲುಗಳ ರಾಶಿಯಲ್ಲಿ ಸಿಕ್ಕಿತು ಹಳದಿ ವಜ್ರ

Yellow Dimond : ತಾಳಿದವನು ಬಾಳಿಯಾನು ಎನ್ನುವ ಮಾತಿದೆ. ಹೌದು, ಜೀವನದಲ್ಲಿ ತಾಳ್ಮೆಯಿದ್ದರೆ ಇವತ್ತಲ್ಲ ನಾಳೆ ನೀವು ಗೆಲ್ಲೋದು ಗ್ಯಾರಂಟಿ. ಸೋಲೋಪ್ಪಿಕೊಳ್ಳಬಾರದು ಅಷ್ಟೇ. ಇದಕ್ಕೆ ಜೀವಂತ ಸಾಕ್ಷಿ ಅಮೆರಿಕದ ಜ್ಯಾಕ್ ಪಿಯರಾರ್ಡಿನ್. ಇವರು 13 ವರ್ಷಗಳಿಂದ ನಿರಂತರವಾಗಿ ವಜ್ರ ಹುಡುಕುತ್ತಾ ಇದ್ದಾರೆ. ಕೊನೆಗೂ ಅಪರೂಪದಲ್ಲಿ ಅಪರೂಪ ಎನ್ನುವಂಥ ವಜ್ರವೊಂದು ಇವರಿಗ ಸಿಕ್ಕಿದೆ. ಸಿಕ್ಕಿದ್ದೆಲ್ಲಿ, ಏನೀ ವಜ್ರದ ಮಹತ್ವ?

ಅಪರೂಪದ Yellow Diamond :

13 ವರ್ಷಗಳ ಹುಟುಕಾಟ, ಅಲೆದಾಟ ಅಷ್ಟು ಸುಲಭವಲ್ಲ. ಈ ಸಮಯದಲ್ಲಿ ಇವರಿಗೆ 300 ಕ್ಕೂ ಹೆಚ್ಚು ರತ್ನ ಸಿಕ್ಕಿವೆ. ಆದರೆ ಅವರಿಗೆ ಬೇಕಾಗಿದ್ದದ್ದು ವಜ್ರ. ವಜ್ರ ಸಿಗುವವರೆಗೆ ಅವರು ಸುಮ್ಮನಾಗಲಿಲ್ಲ. ಕೊನೆಗೆ ಒಂದು ದಿನ ಅವರ ಶ್ರಮಕ್ಕೆ ಫಲ ಸಿಕ್ಕಿತು. 6.03 ಕ್ಯಾರೆಟಿನ ಅಪರೂಪದ ಹಳದಿ ವಜ್ರ ಅವರಿಗೆ ಸಿಕ್ಕಿದೆ. ಇದರ ಅಂದಾಜು ಬೆಲೆ ಲಕ್ಷದಿಂದ ಎನ್ನಲಾಗಿದೆ.

American Man Found 6 Carrot Yellow Dimond After Years Of Search Named American Dream Dimond Goes Viral

ಜ್ಯಾಕ್ ಪಿಯರಾರ್ಡಿನ್ ಯುಎಸ್ ನೌಕಾಪಡೆಯ ಮೀಸಲು ಸಿಬ್ಬಂದಿ. 2013 ರಿಂದ ಅರ್ಕಾನ್ಸಾಸ್ ನ ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್ ನಲ್ಲಿ ವಜ್ರಕ್ಕಾಗಿ ಇವರ ಹುಡುಕಾಟ ನಡೀತಾ ಇದೆ. ಜನವರಿ 25, 2026 ರಂದು, ಅವರು ತಮ್ಮ ಸ್ನೇಹಿತ ಮೈಕೆಲ್ ಶುಮಾಕರ್ ಅವರೊಂದಿಗೆ ಜಲ್ಲಿಕಲ್ಲುಗಳನ್ನು ಶೋಧಿಸುತ್ತಿದ್ದರು.

ಜಲ್ಲಿಕಲ್ಲುಗಳ ರಾಶಿಯಲ್ಲಿ ವಜ್ರ :

ಆಗ ಜಲ್ಲಿಕಲ್ಲುಗಳ ರಾಶಿಯಲ್ಲಿ ಚಿನ್ನದಂತೆ ಫಳ ಫಳನೆ ಹೊಳೆಯುವ ವಸ್ತು ಅವರ ಕಣ್ಣಿಗೆ ಬಿತ್ತು. ದೂರದಲ್ಲಿ ನೋಡಿದಾಗ ಅದು ಚಿನ್ನ ಎಂದೇ ಭಾವಿಸಿದ್ದರು. ಆದರೆ ಹತ್ತಿರ ಹೋಗಿ ನೋಡುವಾಗ ಅವರ ಕಣ್ಣನ್ನೇ ನಂಬುವುದು ಅವರಿಗೆ ಕಷ್ಟವಾಯಿತು. ಚಿನ್ನದಂತೆ ಹೊಳೆಯುತ್ತಿದ್ದ ಆ ವಸ್ತು ಅಪರೂಪದ ಹಳದಿ ವಜ್ರ ಎನ್ನುವುದು ಗೊತ್ತಾಗುತ್ತದೆ. ಈ ವಜ್ರ ಅವರಿಗೆ ಸಿಕ್ಕಾಗ ಟಿಕ್ ಟಾಕ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರು. ಹೀಗಾಗಿ ಅವರ ವರ್ಷಗಳ ಕಠಿಣ ಪರಿಶ್ರಮದ ಫಲ ಕ್ಯಾಮೆರಾದಲ್ಲಿ ಸೆರೆಯಾಗಿದೆ.

6.03 ಕ್ಯಾರೆಟ್ ವಜ್ರ :

ಈ ವಜ್ರದ ತೂಕ 6.03 ಕ್ಯಾರೆಟ್. ಇದು ಸ್ಫಟಿಕದಂತೆ ಕಾಣಿಸುತ್ತಿತ್ತು. 2026 ರಲ್ಲಿ ಪಾರ್ಕಿನಲ್ಲಿ ಸಿಕ್ಕಿದ ಅತಿದೊಡ್ಡ ವಜ್ರ ಎಂದೇ ಹೇಳಲಾಗುತ್ತದೆ. ಕೆಲವರು ಇದರ ಬೆಲೆ 1 ಮಿಲಿಯನ್ ಡಾಲರ್ ಅಂದರೆ ಸುಮಾರು 9.57 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಇನ್ನು ರತ್ನ ಮೌಲ್ಯಮಾಪಕರ ಪ್ರಕಾರ, ಉತ್ತಮ ಗುಣಮಟ್ಟದ ವಜ್ರದ ಮೌಲ್ಯವು ಸುಮಾರು 2.5 ಮಿಲಿಯನ್ ಡಾಲರ್ ಅಥವಾ ಸುಮಾರು 2.4 ಕೋಟಿ ರೂ. ಎನ್ನಲಾಗಿದೆ. ಆದರೆ ಅದರ ನಿಜವಾದ ಬೆಲೆಯು ತಜ್ಞರ ಮೌಲ್ಯಮಾಪನ ಮತ್ತು ಗುಣಮಟ್ಟವನ್ನು ಅವಲಂಬಿಸಿರುತ್ತದೆ.

ಅಮೆರಿಕನ್ ಡ್ರೀಮ್ ಡೈಮಂಡ್ :

ಜ್ಯಾಕ್ ಮತ್ತು ಮೈಕೆಲ್ ಈ ಅಪರೂಪದ ರತ್ನಕ್ಕೆ ಅಮೆರಿಕನ್ ಡ್ರೀಮ್ ಡೈಮಂಡ್ ಎಂದು ಹೆಸರಿಟ್ಟಿದ್ದಾರೆ. ಜ್ಯಾಕ್ ವಜ್ರದಿಂದ ಗಳಿಸಿದ ಹಣವನ್ನು ತನ್ನ ಸ್ನೇಹಿತನೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಯಾಕೆಂದರೆ ಜಲ್ಲಿಕಲ್ಲುಗಳನ್ನು ಸಂಗ್ರಹಿಸಲು ಸ್ನೇಹಿತ ಸಹಾಯ ಮಾಡಿದ್ದಾರೆ. ಇದಲ್ಲದೆ, ಈ ಹಣದಿಂದ ಸ್ಫಟಿಕ ಗಣಿಯನ್ನು (mining) ತೆರೆಯುವ ತನ್ನ ಕನಸನ್ನು ನನಸಾಗಿಸಬಹುದು ಎನ್ನುವುದು ಅವರ ಅಭಿಪ್ರಾಯ.

ಇಲ್ಲಿವರೆಗೆ 37,000ಕ್ಕೂ ಹೆಚ್ಚು ವಜ್ರ ಪತ್ತೆ :

ಅರ್ಕಾನ್ಸಾಸ್ ನ ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್ ವಜ್ರ ಸಿಗುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲಿ ಸಾಮಾನ್ಯ ಜನರು ಕೂಡಾ ವಜ್ರಗಳನ್ನು ಹುಡುಕಬಹುದು. ಮಾತ್ರವಲ್ಲ ಇಲ್ಲಿ ಸಿಕ್ಕಿರುವ ರತ್ನಗಳನ್ನು ತಮ್ಮೊಂದಿಗೆಯೇ ಇಟ್ಟುಕೊಳ್ಳಬಹುದು. 1972ರಲ್ಲಿ ಇದು ಸ್ಟೇಟ್ ಪಾರ್ಕ್ ಆದಾಗಿನಿಂದ ಇಲ್ಲಿ 37,000ಕ್ಕೂ ಹೆಚ್ಚು ವಜ್ರಗಳು ಸಿಕ್ಕಿವೆ.

ಸೋಶಿಯಲ್ ಮಿಡಿಯಾದಲ್ಲೂ ಚರ್ಚೆ :

ಜ್ಯಾಕ್ ನ ಈ ಆವಿಷ್ಕಾರದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲೂ (social media) ಚರ್ಚೆಯಾಗುತ್ತಿದೆ. ಅವರ ತಾಳ್ಮೆ ಮತ್ತು ನಿರಂತರ ಪ್ರಯತ್ನವನ್ನು ತುಂಬಾ ಮಂದಿ ಶ್ಲಾಘಿಸಿದ್ದಾರೆ. 13 ವರ್ಷಗಳ ಸುದೀರ್ಘ ಹುಡುಕಾಟದ ನಂತರ ಪತ್ತೆಯಾದ ಈ ವಜ್ರ ಅವರಿಗೆ ಕೇವಲ ಅಮೂಲ್ಯ ರತ್ನವಲ್ಲ. ಕಠಿಣ ಪರಿಶ್ರಮ ಮತ್ತು ಭರವಸೆಯ ದೊಡ್ಡ ಗೆಲುವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+