ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ?
ಡೊನಾಲ್ಡ್ ಟ್ರಂಪ್ ಬಹುಶಃ ಇಡೀ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಮಾಜಿ ಅಧ್ಯಕ್ಷ ಮಾತ್ರವಲ್ಲ, ಸಾಲು ಸಾಲು ಗಂಭೀರ ಕೇಸ್ ಫೇಸ್ ಮಾಡುತ್ತಿರುವ ರಾಜಕೀಯ ವ್ಯಕ್ತಿ ಕೂಡ ಆಗಿದ್ದಾರೆ. ಇಂತಹ ವಿವಾದಾತ್ಮಕ ವ್ಯಕ್ತಿ ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧೆ ಮಾಡಲು ಬಂದಿದ್ದಾರೆ ಎಂಬುದು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಮತ್ತು ನಾಯಕರ ಗಂಭೀರ ಆರೋಪ. ಹೀಗೆ ಸಾಲು ಸಾಲು ಆರೋಪ ಎದುರಿಸುತ್ತಿರುವ ಟ್ರಂಪ್‌ಗೆ ಈಗ ಮತ್ತೊಂದು ರಣ ಭೀಕರ ಆಘಾತ ಎದುರಾಗಿದೆ!
ಹೌದು, 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಒಂದು ರೀತಿ ದೊಡ್ಡ ಡ್ರಾಮಾಗೆ ಸಾಕ್ಷಿ ಆಗಿತ್ತು. ಯಾಕಂದ್ರೆ ಡೊನಾಲ್ಡ್ ಟ್ರಂಪ್ & ಬೆಂಬಲಿಗರು ಮತ್ತೊಮ್ಮೆ ಟ್ರಂಪ್ ಆಯ್ಕೆಗಾಗಿ, ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರಿ ದೊಡ್ಡ ಕಿತ್ತಾಟಕ್ಕೂ, 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕ್ಷಿ ಆಗಿತ್ತು. ಹೀಗಿದ್ದಾಗಲೇ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಅಮೆರಿಕದ ಸಂಸತ್ ಕಟ್ಟಡದ ಮೇಲೂ ಟ್ರಂಪ್ ಬೆಂಬಲಿಗರ ಪಡೆ ಭೀಕರ ದಾಳಿ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗಿದ್ದಾಗ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು ಡೊನಾಲ್ಡ್ ಟ್ರಂಪ್. ಇದೀಗ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಸ್ಪರ್ಧೆಗೆ ಇಳಿದಿದ್ದು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಡೊನಾಲ್ಡ್ ಟ್ರಂಪ್‌ಗೆ ಭಾರಿ ಸಂಕಷ್ಟ?
ಅಂದಹಾಗೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ತಿರುಚುವ ಪ್ರಯತ್ನ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ, ಇದೀಗ ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಸಂಕಷ್ಟ ಶುರುವಾಗಿದೆ. ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ವಕೀಲ ಜಾಕ್ ಸ್ಮಿತ್ ನೇತೃತ್ವದ ತಂಡ ಈಗ ದೋಷಾರೋಪ ಪಟ್ಟಿ ಸಲ್ಲಿಸಿದೆಯಂತೆ. ಅಮೆರಿಕ ಚುನಾವಣೆಗೆ ಮತದಾನ ನಡೆಯಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಈ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಹೀಗೆ ಟ್ರಂಪ್ ವಿರುದ್ಧ ಈಗ ಸಲ್ಲಿಕೆ ಆಗಿರುವ ಪರಿಷ್ಕೃತ ದೋಷಾರೋಪ ಪಟ್ಟಿಯಲ್ಲಿ 2020ರ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ತಿರುಚುವ ಯತ್ನದ ಭಾಗವಾಗಿ ಈಗಾಗಲೇ ಟ್ರಂಪ್ ವಿರುದ್ಧ ಮಾಡಲಾದ ಆರೋಪ ಮತ್ತೆ ಮತ್ತೆ ರಿಪೀಟ್ ಆಗಿದೆ. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಮೇಲೆ ಕೂಡ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಮೆರಿಕದ ಚುನಾವಣೆ ಅಖಾಡ ಮತ್ತಷ್ಟು ರಂಗೇರಿದೆ.
ಜೋ ಬೈಡನ್ & ಟ್ರಂಪ್ ಫೈಟ್
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ & ಡೊನಾಲ್ಡ್ ಟ್ರಂಪ್ ಭಾರಿ ಫೈಟಿಂಗ್ ನಡೆಸಿದ್ದರು. ಈ ಫೈಟಿಂಗ್‌ನಲ್ಲಿ ಜೋ ಬೈಡನ್ ಗೆದ್ದು ಬೀಗಿದ್ದರು. ಆದರೆ ಇದೇ ಸಮಯದಲ್ಲಿ ಅಮೆರಿಕ ಚುನಾವಣೆ ಫಲಿತಾಂಶ ತಿರುಚುವ ಪ್ರಯತ್ನ ನಡೆದಿತ್ತು ಎಂಬ ಬಗ್ಗೆ ಗಂಭೀರ ಆರೋಪ ಕೇಳಿಬಂದಿತ್ತು. ಈ ಕೇಸ್ ಸಂಬಂಧ ಜುಲೈ 1 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, 6-3 ಬಹುಮತದ ತೀರ್ಪು ನೀಡಿತ್ತು. ಹೀಗಿದ್ದಾಗ ಮತ್ತೊಂದು ಸಂಕಷ್ಟ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಎದುರಾಗಿದೆ.












Click it and Unblock the Notifications