ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ

ಅಮೆರಿಕ ತನ್ನ ಫೈಟರ್ ಜೆಟ್ ಮೂಲಕ ಚೀನಾದ ಬೇಹುಗಾರಿಕಾ ಬಲೂನ್‌ ಅನ್ನು ಹೊಡೆದುರುಳಿಸಿದೆ.

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 05; ಮಹತ್ವದ ಕಾರ್ಯಾಚರಣೆಯಲ್ಲಿ ಅಮೆರಿಕ ಚೀನಾದ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದೆ. ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಈ ಬಲೂನ್ ಕಾಣಿಸಿಕೊಂಡಿತ್ತು.

ಅಮೆರಿಕದ ರಕ್ಷಣಾ ಕೇಂದ್ರ ಕಚೇರಿ ಪೆಂಟಗಾನ್ ಈ ಕುರಿತು ಮಾಹಿತಿ ನೀಡಿದೆ. ಬೇಹುಗಾರಿಕಾ ಬಲೂನ್ ಹಾರಾಟದ ಮೂಲಕ ಅಮೆರಿಕದ ಸಾರ್ವಭೌಮತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಿದೆ.

ಅಮೆರಿಕದ ಕಣ್ಗಾವಲು ವಿಮಾನದಿಂದ ಆರು ಮೀಟರ್ ದೂರದಲ್ಲಿ ಹಾರಿದ ಚೀನಾ ಫೈಟರ್ ಜೆಟ್: ಮಹಾಯುದ್ಧದ ಮುನ್ಸೂಚನೆ?ಅಮೆರಿಕದ ಕಣ್ಗಾವಲು ವಿಮಾನದಿಂದ ಆರು ಮೀಟರ್ ದೂರದಲ್ಲಿ ಹಾರಿದ ಚೀನಾ ಫೈಟರ್ ಜೆಟ್: ಮಹಾಯುದ್ಧದ ಮುನ್ಸೂಚನೆ?

ಫೈಟರ್ ಜೆಟ್ ಮೂಲಕ ಅಮೆರಿಕ ದಕ್ಷಿಣ ಕೆರೊಲಿನಾ ಕರಾವಳಿಯಲ್ಲಿ ಹಾರಾಟ ನಡೆಸುತ್ತಿದ್ದ ಚೀನಾದ ಬಲೂನ್ ಅನ್ನು ಶನಿವಾರ ಹೊಡೆದು ಹಾಕಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಯುದ್ಧ ವಿಮಾನದ ಪೈಲೆಟ್‌ಗಳನ್ನು ಅಭಿನಂದಿಸಿದ್ದಾರೆ.

ಅರುಣಾಚಲ ಪ್ರದೇಶ: ಭಾರತ- ಚೀನಾ ಗಡಿ ಉದ್ದಕ್ಕೂ 22 ಹೊಸ ಮೊಬೈಲ್ ಟವರ್‌ ಸ್ಥಾಪನೆಅರುಣಾಚಲ ಪ್ರದೇಶ: ಭಾರತ- ಚೀನಾ ಗಡಿ ಉದ್ದಕ್ಕೂ 22 ಹೊಸ ಮೊಬೈಲ್ ಟವರ್‌ ಸ್ಥಾಪನೆ

America Shoots Down Suspected Chinese Spy Balloon

ಅಮೆರಿಕ ಈ ಕಾರ್ಯಾಚರಣೆಗಾಗಿಯೇ ದೇಶದ ಆಗ್ನೇಯ ಭಾಗರ 3 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ದೇಶದ ವಾಯುಪಡೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಎಂದು ಹೇಳಿ ಏರ್‌ಪೋರ್ಟ್‌ ಸ್ಥಗಿತಗೊಳಿಸಿ ಕಾರ್ಯಾಚರಣೆ ಆರಂಭಿಸಲಾಯಿತು.

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಬೈಡೆನ್‌ ನೇತೃತ್ವದ ಡೆಮಾಕ್ರಟಿಕ್ ಪಕ್ಷಕ್ಕೆ ಗೆಲುವು ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಬೈಡೆನ್‌ ನೇತೃತ್ವದ ಡೆಮಾಕ್ರಟಿಕ್ ಪಕ್ಷಕ್ಕೆ ಗೆಲುವು

ಫೈಟರ್ ಜೆಟ್‌ಗಳ ದಾಳಿ ಬಳಿಕ ಚೀನಾದ ಬೆಹುಗಾರಿಕಾ ಬಲೂನ್ ಸಮುದ್ರಕ್ಕೆ ಬೀಳುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಮೇರಿಲ್ಯಾಂಡ್‌ನಲ್ಲಿ ಮಾತನಾಡಿದ ಅಧ್ಯಕ್ಷ ಜೋ ಬೈಡನ್, "ಫೈಟರ್ ಜೆಟ್‌ ಬಲೂನ್‌ಗಳನ್ನು ಯಶಸ್ವಿಯಾಗಿ ಒಡೆದು ಹಾಕಿವೆ. ನಮ್ಮ ತಂಡವನ್ನು ಅಭಿನಂದಿಸುತ್ತೇನೆ" ಎಂದರು.

ರಕ್ಷಣಾ ಕಾರ್ಯದರ್ಶಿ ಸಮರ್ಥನೆ; ಬೇಹುಗಾರಿಕಾ ಬಲೂನ್ ಒಡೆದು ಹಾಕಿರುವ ಅಮೆರಿಕದ ಕಾರ್ಯಾಚರಣೆಯನ್ನು ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್ ಸಮರ್ಥಿಸಿಕೊಂಡಿದ್ದಾರೆ. "ಇದು ಉದ್ದೇಶಪೂರ್ವಕ ಮತ್ತು ಕಾನೂನು ಬದ್ಧ ಕ್ರಮವಾಗಿದೆ. ನಮ್ಮ ಸಾರ್ವಭೌಮತ್ವನ್ನು ಉಲ್ಲಂಘನೆ ಮಾಡಿದ ಚೀನಾದ ಪ್ರತಿಕ್ರಿಯೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.

ಬಲೂನ್‌ನಲ್ಲಿರುವ ಸಾಧನಗಳಿಗೆ ಗುಂಡು ಹಾರಿಸಿದರೆ ಅದರಿಂದ ಭೂ ಪ್ರದೇಶದ ಜನರಿಗೆ ಹಾನಿ ಮಾಡಬಹುದು ಎಂದು ಅಧಿಕಾರಿಗಳು ಮೊದಲು ಅಂದಾಜಿಸಿದ್ದರು ಬಳಿಕ ಹಿರಿಯ ಅಧಿಕಾರಿಗಳ ಒಪ್ಪಿಗೆ ಬಳಿಕ ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೇ ಸಮುದ್ರಕ್ಕೆ ಬಿದ್ದ ಸಾಧನಗಳಿಗಾಗಿ ಹುಡುಕಾಟ ಮುಂದುವರೆದಿದೆ.

china

ಫೆಬ್ರವರಿ ತಿಂಗಳ ಮೊದಲ ದಿನವೇ ಅಮೆರಿಕದ ವಾಯು ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಚೀನಾದ ಬೃಹತ್ ಗಾತ್ರದ ಬಲೂನ್‌ಗಳನ್ನು ಮೊದಲು ಪೆಂಟಗಾನ್ ಪತ್ತೆ ಹಚ್ಚಿತ್ತು. ಈ ಬೆಳವಣಿಗೆ ಬಳಿಕ ಅಮೆರಿಕ ಚೀನಾ ವಿರುದ್ಧ ಅಸಮಾಧಾನಗೊಂಡಿತ್ತು. ಈ ಹಿನ್ನಲೆಯಲ್ಲಿ ಚೀನಾಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಪ್ರವಾಸವನ್ನು ಸಹ ರದ್ದುಪಡಿಸಲಾಗಿತ್ತು.

ಕಳೆದ ಹಲವು ವರ್ಷಗಳ ಬಳಿಕ ಚೀನಾಗೆ ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿಗಳ ಭೇಟಿ ಇದಾಗಿತ್ತು. ಆದರೆ ಬೇಹುಗಾರಿಕಾ ಬಲೂನ್ ಹಾರಾಟ ನಡೆಸಿ ಚೀನಾ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಚೀನಾ ಅಮೆರಿಕ ವಾಯುಪಡೆ ಪ್ರದೇಶ ಅತಿಕ್ರಮಿಸಿರುವ ಕುರಿತು ಶುಕ್ರವಾರ ಅಧ್ಯಕ್ಷ ಜೋ ಬೈಡನ್‌ಗೆ ವಿವರಣೆ ನೀಡಲಾಗಿತ್ತು.

ಚೀನಾದ ಬೇಹುಗಾರಿಕಾ ಬಲೂನ್ ಕಣ್ಗಾವಲು ಉಪಕರಣದ ಜೊತೆಗೆ ಕೆಲವು ಭಾರವಾದ ವಸ್ತುಗಳನ್ನು ಒಳಗೊಂಡಿತ್ತು. ಮೊದಲು ಅಮೆರಿಕದ ಪೂರ್ವ ಭಾಗದಲ್ಲಿ ಹಾರಾಟ ನಡೆಸುತ್ತಿದ್ದ ಬಲೂನ್ ಬಳಿಕ ಮಧ್ಯ ಅಮೆರಿಕಕ್ಕೆ ಬಂದಿತ್ತು. ಈ ಬೆಳವಣಿಗೆಗೆ ಚೀನಾ ವಿಷಾದ ವ್ಯಕ್ತಪಡಿಸಿತ್ತು. ಶ್ವೇತಾ ಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜಿನ್ ಪಿಯರ್ ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆ ಸ್ವೀಕಾರವಾದುದಲ್ಲ ಎಂದು ಹೇಳಿಕೆ ನೀಡಿದ್ದರು.

ಮೊದಲು ಬಲೂನ್‌ನಿಂದ ಅಮೆರಿಕಕ್ಕೆ ತೊಂದರೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ಈ ಹಾರಾಟ ನಿಲ್ಲಿಸುವ ಕುರಿತು ಯಾವ ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಜೋ ಬೈಡನ್‌ಗೆ ನೀಡಲಾಗಿತ್ತು. ಬಲೂನ್ ಹೊಡೆದುಉರುಳಿಸಿದರೆ ಜನರಿಗೆ ಆಗವು ಹಾನಿ ತಪ್ಪಿಸಲು ಎಲ್ಲಾ ಕ್ರಮಗಳನ್ನು ಅಮೆರಿಕ ಸೇನೆ ಕೈಗೊಂಡಿತ್ತು.

English summary
Pentagon said that United States shot down a suspected Chinese spy balloon off at country's east coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X