ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ಅಮೆರಿಕ?
ಹಮಾಸ್ ಉಗ್ರರ ವಿರುದ್ಧ ದಾಳಿ ನಡೆಸುತ್ತಿರುವ ಇಸ್ರೇಲ್ ಇಡೀ ಗಾಜಾ ಪಟ್ಟಿ ನಗರವನ್ನೇ, ಪೀಸ್ ಪೀಸ್ ಮಾಡಿ ಹಾಕಿದೆ. ಒಂದು ಕಡೆ ಈ ವಿಚಾರವಾಗಿ, ಭಾಗಶಃ ಇಡೀ ಪ್ರಪಂಚವೇ ಆಕ್ರೋಶ ಹೊರಹಾಕುತ್ತಿದೆ. ಮತ್ತೊಂದ್ಕಡೆ ಅಮೆರಿಕದ ಬುಡಕ್ಕೂ ಇದೇ ವಿಚಾರ ಬಿಸಿನೀರು ಕಾಯಿಸಿದಂತೆ ಆಗುತ್ತಿದೆ. ಇಂತಹ ಸಮಯದಲ್ಲೇ ಅಮೆರಿಕ ಅಧ್ಯಕ್ಷರು, ಇಸ್ರೇಲ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕ ನಡುವೆ ಗಟ್ಟಿಯಾದ ಬಾಂಧವ್ಯ ಇದೆ. ಆದರೂ ಪ್ಯಾಲೆಸ್ತೀನ್‌ನ ಮೇಲೆ ಇಸ್ರೇಲ್ ಯುದ್ಧ ಸಾರಿದ ಬಳಿಕ ಅಮೆರಿಕ & ಇಸ್ರೇಲ್ ನಡುವೆ ಸಂಬಂಧ ಹಳಸುತ್ತಾ ಸಾಗಿದೆ. ಅದರಲ್ಲೂ ಈ ಯುದ್ಧ ಅಮೆರಿಕಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆಯನ್ನ ಮಾಡುತ್ತಿದೆ. ಹೀಗಾಗಿ ಯುದ್ಧವನ್ನು ಹೇಗಾದರೂ ನಿಲ್ಲಿಸಬೇಕು ಎಂಬುದು ಜೋ ಬೈಡನ್ ಸರ್ಕಾರದ ಪ್ಲ್ಯಾನ್. ಆದರೆ ಈ ಐಡಿಯಾಗಳು ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಪದೇ ಪದೇ ಇಸ್ರೇಲ್‌ಗೆ ವಾರ್ನಿಂಗ್ ಕೊಡುತ್ತಿದ್ದ ಅಮೆರಿಕ ಈಗ ಬೇರೆಯದ್ದೇ ರೀತಿ ಮಾತನಾಡಿ ಸಂಬಂಧ ಕಡಿದುಕೊಳ್ಳುವ ರೀತಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಅಮೆರಿಕ & ಇಸ್ರೇಲ್ ದೂರ ದೂರ?
ಇಸ್ರೇಲ್ ಸೇನೆ ಈಗ ಗಾಜಾಪಟ್ಟಿ ನಗರವನ್ನು ಮುಕ್ಕಾಲು ಭಾಗ ಧ್ವಂಸ ಮಾಡಿ ಹಾಕಿದ್ದು, ಅಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ನರಳಾಡುತ್ತಿದ್ದಾರೆ ಎಂಬ ಆರೋಪ ಇದೆ. ಈ ಬೆಳವಣಿಗೆ ನಡುವೆ ಮುರಿದು ಬಿದ್ದ ಕಟ್ಟಡಗಳಲ್ಲೇ ಜನರು ಜೀವನ ಮಾಡುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಇಂತಹ ಪರಿಸ್ಥಿತಿಯ ಹೊತ್ತಲ್ಲೇ ಅಮೆರಿಕ ಕೂಡ ಅಲರ್ಟ್ ಆಗಿ ಯುದ್ಧ ನಿಲ್ಲಿಸಲು ಪರೋಕ್ಷವಾಗಿ ಇಸ್ರೇಲ್ ಸೇನೆ ಮೇಲೆ ಒತ್ತಡ ಹಾಕುತ್ತಿತ್ತು. ಆದರೆ ಅಮೆರಿಕದ ಮಾತು ಕೇಳದ ಇಸ್ರೇಲ್ ದಾಳಿ ಮಾಡುತ್ತಲೇ ಇದೆ. ಇಂತಹ ಸ್ಥಿತಿಯಲ್ಲಿ ಬೈಡನ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನಮ್ಮ ಮಾತು ಕೇಳದೆ ಇದ್ದರೆ...
ಗಾಜಾಪಟ್ಟಿ ಭಾಗದಲ್ಲಿ ಲಕ್ಷಾಂತರ ಜನರು ಅನ್ನ & ನೀರು ಇಲ್ಲದೆ ನರಳಾಡುತ್ತಿದ್ದಾರೆ. ಈ ಜನರಿಗೆ ಅನ್ನ & ನೀರು ಒದಗಿಸುವ ಕಾರ್ಯವನ್ನು ಮಾಡಲು ಸಾವಿರಾರು ಟ್ರಕ್‌ಗಳಲ್ಲಿ ಅಕ್ಕಿ ಸೇರಿದಂತೆ ಗೋಧಿ ಹಿಟ್ಟು, ನೀರು, ಔಷಧ ಹೀಗೆ ಅಗತ್ಯ ಸಾಮಗ್ರಿಗಳು ಬಂದಿವೆ. ಆದರೂ ಈ ವಸ್ತುಗಳನ್ನು ಈಜಿಪ್ಟ್ ದೇಶದ ರಫಾ ಗಡಿಯಿಂದ ಗಾಜಾಪಟ್ಟಿ ಒಳಗೆ ಬಿಡಲು ಇಸ್ರೇಲ್ ಸೇನೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇಂತಹ ಪರಿಸ್ಥಿತಿ ಎದುರಾದ ಸಮಯದಲ್ಲೇ ಅಮೆರಿಕ ಕೂಡ ಖಡಕ್ ವಾರ್ನಿಂಗ್ ಕೊಟ್ಟಿರುವುದು ಇಡೀ ಜಗತ್ತಿನ ಗಮನ ಸೆಳೆದಿದೆ.

ಕಳೆದ 6 ತಿಂಗಳಿಂದ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಯುದ್ಧ ಈಗ ದೊಡ್ಡ ತಿರುವನ್ನು ಪಡೆದಿದೆ. 32,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಯುದ್ಧದ ಹಿನ್ನೆಲೆ ಜೀವ ಬಿಟ್ಟಿರುವ ನಡುವೆ, ಇಸ್ರೇಲ್ ವಿರುದ್ಧ ಅಮೆರಿಕ ಕೂಡ ಕೋಪ ತೋರಿಸುತ್ತಿದೆ. ಹೀಗೆ ಇಬ್ಬರ ನಡುವಿನ ಕಿರಿಕ್ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications