ಮಗು ಚಿವುಟೋದು.. ತೊಟ್ಟಿಲು ತೂಗೋದು.. ಇದೇ ಅಮೆರಿಕದ ಬುದ್ಧಿ?
ವಾಷಿಂಗ್ಟನ್: ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿದ ಕಥೆ ಅಮೆರಿಕಗೆ ಸರಿಯಾಗೇ ಹೊಂದುತ್ತೆ. ಮಗು ಚಿವುಟೋದು.. ತೊಟ್ಟಿಲು ತೂಗೋದು.. ಅಮೆರಿಕಗೆ ಇದು ಕರಗತವಾಗಿದೆ ಎಂಬ ಆರೋಪ ಪದೇ ಪದೆ ಸಾಬೀತು ಕೂಡ ಆಗುತ್ತಿದೆ. ಈಗ ಉಕ್ರೇನ್ ವಿಚಾರದಲ್ಲೂ ಅಮೆರಿಕ ಡಬಲ್ ಗೇಮ್ ಆಡುತ್ತಿರುವ ಆರೋಪ ಕೇಳಿಬಂದಿದೆ. ಬೆಳಗ್ಗೆ ಒಂದು ಹೇಳಿಕೆ ನೀಡಿ, ಈಗ ಉಲ್ಟಾ ಕೆಲಸ ಮಾಡಿದೆ!
ಹೌದು, ಇಷ್ಟುದಿನ ರಷ್ಯಾದ ಗಡಿ ಭಾಗದ ಹಳ್ಳಿಗಳ ಮೇಲೆ ದಾಳಿ ನಡೆಸುತ್ತಿದ್ದ ಉಕ್ರೇನ್ ನಿನ್ನೆ ನೇರ ರಷ್ಯಾ ರಾಜಧಾನಿಗೆ ನುಗ್ಗಿ ಬಾಂಬ್ ಹಾಕಿತ್ತು. ಈ ದಾಳಿ ನಡೆಸಿದ್ದೇ ಉಕ್ರೇನ್‌ನ ಸೇನೆ ಅನ್ನೋ ಆರೋಪ ಕೇಳಿಬಂದ ಬೆನ್ನಲ್ಲೇ, ದೊಡ್ಡಣ್ಣ ಅನಿಸಿಕೊಳ್ಳುವ ಅಮೆರಿಕ ನಡುಗಿದೆ. ಯಾವ ಕ್ಷಣದಲ್ಲಿ ರಷ್ಯಾ ತಮ್ಮ ಮೇಲೆ ದಾಳಿ ಮಾಡುತ್ತೋ ಅನ್ನೋ ಭಯದಲ್ಲಿ ಪರೋಕ್ಷವಾಗಿ ತಪ್ಪು ಒಪ್ಪಿಕೊಂಡಿತ್ತು ಅಮೆರಿಕ. ಆದರೆ ಈಗ ಏನು ಮಾಡಿದೆ ಗೊತ್ತಾ? ಬೆಳಗ್ಗೆ ಒಂದು ಮಾತು ಹೇಳಿ, ಈಗ ಉಕ್ರೇನ್‌ಗೆ ಸಾವಿರಾರು ಕೋಟಿ ರೂಪಾಯಿ ಗಿಫ್ಟ್ ಕೊಡಲು ಮುಂದಾಗಿದೆ.

ಡಬಲ್ ಗೇಮ್ ಆಡ್ತಿದೆಯಾ ಅಮೆರಿಕ?
ಉಕ್ರೇನ್‌ಗೆ ಒಂದೇ ವರ್ಷದಲ್ಲಿ ಅಮೆರಿಕ 3 ಲಕ್ಷ ಕೋಟಿ ನೆರವನ್ನ ನೀಡಿದೆ. ಮೊನ್ನೆ ಮೊನ್ನೆ ಸಾವಿರಾರು ಕೋಟಿ ಪ್ಯಾಕೇಜ್ ನೀಡಿದ್ದ ಅಮೆರಿಕ ಈಗ ಮತ್ತೆ ₹2,482 ಕೋಟಿ ಮೊತ್ತದ ನೆರವಿನ ಹೊಸ ಪ್ಯಾಕೇಜ್ ಘೋಷಿಸಲು ಸಿದ್ಧವಾಗಿರುವ ಆರೋಪ ಕೇಳಿಬಂದಿದೆ. ಈ ಪ್ಯಾಕೇಜ್‌ನಲ್ಲಿ ಹೆಚ್ಚುವರಿ ಡ್ರೋನ್ ಪೂರೈಸಲಾಗುತ್ತಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿರುವುದು ಪುಟಿನ್ ಪಿತ್ತ ನೆತ್ತಿಗೇರಿಸಿದೆ. ಬೆಳಗ್ಗೆ ನೋಡಿದರೆ ರಷ್ಯಾ ರಾಜಧಾನಿಯಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ನಮ್ಮ ಪಾತ್ರ ಇಲ್ಲ ಎಂದಿತ್ತು ಅಮೆರಿಕ. ಈಗ ಉಕ್ರೇನ್‌ಗೆ ಮತ್ತಷ್ಟು ಡ್ರೋನ್ ನೀಡಲು ಮುಂದಾಗಿರುವುದು ರಷ್ಯಾನ ರೊಚ್ಚಿಗೆಬ್ಬಿಸಿದೆ.
ಬೆಳಗ್ಗೆ ಒಂದು ಮಾತು.. ರಾತ್ರಿ ಇನ್ನೊಂದು!
ಹೌದು, ಅಮೆರಿಕ ಬೆಳಗ್ಗೆ ನೀಡಿದ್ದ ಸ್ಪಷ್ಟನೆ ಪ್ರಕಾರ ರಷ್ಯಾ ವಿರುದ್ಧ ಉಕ್ರೇನ್ ನಡೆಸಿದೆ ಎಂದು ಆರೋಪಿಸಲಾಗುತ್ತಿರುವ ದಾಳಿಗೆ ತನ್ನ ಬೆಂಬಲ ಇಲ್ಲ ಎಂದಿತ್ತು. ಯಾಕಂದ್ರೆ ಅಕಸ್ಮಾತ್ ಅಮೆರಿಕದ ಬೆಂಬಲದ ಮೂಲಕವೇ ಉಕ್ರೇನ್ ಈ ದಾಳಿ ನಡೆಸಿದೆ ಅನ್ನೋದು ಮುಂದೆ ಗೊತ್ತಾದ್ರೆ ರಷ್ಯಾ ಯಾವ ಕ್ಷಣದಲ್ಲಿ ಬೇಕಾದ್ರೂ ಅಮೆರಿಕ ಮೇಲೆ ಅಟ್ಯಾಕ್ ಮಾಡಬಹುದು. ಅಷ್ಟೇ ಅಲ್ಲ ರಷ್ಯಾ ಮನಸ್ಸು ಮಾಡಿದರೆ ಅಮೆರಿಕದ ರಾಜಧಾನಿಗೂ ನುಗ್ಗುವ ತಾಕತ್ ಹೊಂದಿದೆ. ಈ ಕಾರಣಕ್ಕೆ ಅಮೆರಿಕ ಸ್ಪಷ್ಟನೆ ನೀಡಿ, ಪರೋಕ್ಷವಾಗಿ ಉಕ್ರೇನ್ ಪರ ನಾವು ನಿಂತಿಲ್ಲ ಎಂದಿತ್ತು. ಆದ್ರೆ ಈಗ ಕೇಸ್ ಉಲ್ಟಾ ಆಗುತ್ತಿದೆ.

ಬೆನ್ನಿಗೆ ನಿಂತಿರುವ ಅಮೆರಿಕ ಸೇನೆ!
ರಷ್ಯಾ & ಉಕ್ರೇನ್ ವಾರ್ ಶುರುವಾಗಿ 461 ದಿನ ಉರುಳಿದೆ, ಆದರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಈ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ವಿನಾಶಕಾರಿ ಅಸ್ತ್ರವನ್ನು ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ಅದೇ ಉಡುಗೊರೆ ಈಗ ಉಕ್ರೇನ್ ಸಹಾಯಕ್ಕೆ ಬರುತ್ತಿದ್ದು, ರಷ್ಯಾ ಕೂಡ ಜಿದ್ದಿಗೆ ಬಿದ್ದು ಹೋರಾಡುತ್ತಿದೆ. ಈಗ ನೋಡಿದರೆ ಮತ್ತಷ್ಟು ವಿನಾಶಕಾರಿ ಡ್ರೋನ್‌ಗಳನನ್ನ ತನ್ನ ಸ್ನೇಹಿತ ಉಕ್ರೇನ್‌ಗೆ ನೀಡುತ್ತಿದೆ ಅಮೆರಿಕ.
ಯುದ್ಧದಿಂದ ಅಮೆರಿಕಗೆ ಲಾಭ ಏನು?
ಅಮೆರಿಕ ಲಾಭ ಇಲ್ಲದೆ ಯಾವುದೇ ಕೆಲಸ ಮಾಡಲ್ಲ ಎನ್ನುವ ಮಾತಿದೆ. ಮಾತಿಗೆ ತಕ್ಕಂತೆ ಇದೀಗ ಉಕ್ರೇನ್‌ನ ಪರವಾಗಿ ನಿಂತಿದೆ ಅಮೆರಿಕ. ಉಕ್ರೇನ್ ಪರ ನಿಂತಿರುವ ಅಮೆರಿಕಗೆ ಇದರಿಂದ ಏನು ಲಾಭ ಎಂದರೆ, ರಷ್ಯಾ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಂಡು, ಯುರೋಪ್ ಮೇಲೆ ತಾನು ಹೊಂದಿರುವ ಹಿಡಿತವನ್ನ ಇಡೀ ಜಗತ್ತಿಗೆ ತೋರಿಸುವ ಪ್ರಯತ್ನ ಸಾಗಿದೆ ಎಂಬ ಆರೋಪವಿದೆ. ಆದರೆ ರಷ್ಯಾ ಅಷ್ಟು ಸುಲಭಕ್ಕೆ ತನ್ನ ಸೋಲು ಒಪ್ಪಿಕೊಳ್ಳದೆ ಹೋರಾಡುತ್ತಿರುವುದು ಅಮೆರಿಕದ ನಿದ್ದೆ ಕೆಡಿಸಿದೆ. ಇದೇ ಕಾರಣಕ್ಕೆ ಉಕ್ರೇನ್ ಸೇನೆಗೆ ಅಮೆರಿಕ ಪದೇ ಪದೆ ನೆರವು ನೀಡುತ್ತಿರುವ ಆರೋಪವು ಕೇಳಿಬಂದಿದೆ.












Click it and Unblock the Notifications