ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಏರಿಕೆ ತಡೆಗೆ 'ಶೂನ್ಯ ಕೋವಿಡ್ ನೀತಿ' ಅಡಿ ಅಮೆರಿಕಾ ಸೂಕ್ತ ಕ್ರಮ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಕೋವಿಡ್ ಸೋಂಕು ಅತ್ಯಧಿಕ ಗರಿಷ್ಠ ಮಟ್ಟದಲ್ಲಿ ಹೆಚ್ಚಾಗಿರುವ ಚೀನಾದಿಂದ ಬರುವ ಪ್ರಯಾಣಿಕರಿಂದ ಸೋಂಕು ಹರಡಲಿದೆ. ಈ ಕಾರಣಕ್ಕೆ ಅಮೆರಿಕಾ ಸರ್ಕಾರ 'ಶೂನ್ಯ ಕೋವಿಡ್ ನೀತಿ' ಅಡಿಯಲ್ಲಿ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ವರದಿ ಪ್ರಕಾರ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣದ ಬಗ್ಗೆ ಅಮೆರಿಕ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಪ್ರಕರಣಗಳ ಪಾರದರ್ಶಕ ವರದಿ ನೀಡುವಂತೆ ಚೀನಾಗೆ ಆಗ್ರಹಿಸಿದ್ದನ್ನು ಅಮೆರಿಕ ಬೆಂಬಲಿಸಿದೆ.

ಕೋವಿಡ್: ಬೆಂಗಳೂರಿನಲ್ಲಿ ಸಿದ್ಧತೆ ಹೆಚ್ಚಿಸಿದ ಬಿಬಿಎಂಪಿ ಕೋವಿಡ್: ಬೆಂಗಳೂರಿನಲ್ಲಿ ಸಿದ್ಧತೆ ಹೆಚ್ಚಿಸಿದ ಬಿಬಿಎಂಪಿ

ಚೀನಾದಿಂದ ಜಪಾನ್‌ಗೆ ಆಗಮಿಸಿ ಪ್ರಯಾಣಿಕರಿಂದ ಕೋವಿಡ್ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಮಲೇಷ್ಯಾ ಹೊಸ ಟ್ರ್ಯಾಕಿಂಗ್ ಮತ್ತು ಕೋವಿಡ್ ಕಣ್ಗಾವಲು ಕ್ರಮಗಳನ್ನು ವಿಧಿಸಿದೆ. ಅದೇ ರೀತಿಯ ಹಲವು ಕ್ರಮಗಳನ್ನು ಯುಎಸ್‌ ಕೈಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

America is taking appropriate action under Zero Covid Policy to prevent the rise of Covid

ಚೀನಾ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ ಕೋವಿಡ್ ಹೆಚ್ಚಾಗಿ ಜನರ ಜೀವಕ್ಕೆ, ಜೀವನಕ್ಕೆ ಸಾಕಷ್ಟು ಹಾನಿ ಉಂಟಾಯಿತು. ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಕೊರೊನಾ ಕಡಿಮೆಯಾಗಿದೆ ಎಂದು ನಿರ್ಲಕ್ಷಿಸಿದ್ದು ಹಾಗೂ ಕ್ರಮಗಳ ಹಿಂಪಡೆಯುವಿಕೆಯಿಂದ ಇಲ್ಲಿನ ಜನ ಅಸಮಾಧಾನಗೊಂಡಿದ್ದಲ್ಲದೇ ಪ್ರತಿಭಟನೆಗೂ ಮುಂದಾಗಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದಲ್ಲಿ ಕ್ವಾರಂಟೈನ್ ಇಲ್ಲ

ಚೀನಾ ಇನ್ನು ಮುಂದೆ ಒಳಬರುವ ಪ್ರಯಾಣಿಕರನ್ನು ಜನವರಿ 8 ರಿಂದ ಕ್ವಾರಂಟೈನ್‌ಗೆ ಒಳಪಡಿಸುವುದಿಲ್ಲ ಎಂದು ದೇಶ ಹೇಳಿದೆ. ಆ ದೇಶದ ಅಧಿಕೃತ ಹೇಳಿಕೆಯಲ್ಲಿ, ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ದೇಶಕ್ಕೆ ಆಗಮಿಸುವ ಜನರು ನಿರ್ಗಮನದ 48 ಗಂಟೆಗಳ ಒಳಗೆ ನೆಗಟಿವ್ ವರದಿ ಮಾತ್ರ ಪಡೆಯಬೇಕಾಗುತ್ತದೆ ಎಂದು ಹೇಳಿದೆ.

ಸದ್ಯ ಚೀನಾವು ವಿಶ್ವದ ಅತಿದೊಡ್ಡ ಕೋವಿಡ್ -19 ಹರಡುವಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ವಿಶ್ವಾದ್ಯಂತ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಲ್ಲಿ ಆತಂಕ ಮತ್ತು ಕಳವಳ ಉಂಟುಮಾಡಿದೆ. ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜಿನ ಪ್ರಕಾರ, ಕಳೆದ ವಾರ ಒಂದೇ ದಿನದಲ್ಲಿ ಸುಮಾರು 37 ಮಿಲಿಯನ್ ಜನರು ವೈರಸ್ ಸೋಂಕಿಗೆ ಒಳಗಾಗಿದ್ದರು.

America is taking appropriate action under Zero Covid Policy to prevent the rise of Covid

ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಸಮಾಲೋಚನೆಯ ಆಧಾರದ ಮೇಲೆ ಹೊಸ ಪ್ರಯಾಣ ಮುನ್ನೆಚ್ಚರಿಕೆಗಳನ್ನು ಪರಿಗಣಿಸುತ್ತಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ. ಹೊಸ ರೂಪಾಂತರದ ಹೊರಹೊಮ್ಮುವಿಕೆಯನ್ನು ಪತ್ತೆ ಮಾಡಲು ನೆರವಾದ ಜೀನೋಮಿಕ್ ಸೀಕ್ವೆನ್ಸಿಂಗ್ ಮಾಹಿತಿಯನ್ನು ಆಧಾರದ ಮೇಲೆ ಅಮೆರಿಕದ ಮುಂದಿನ ನಡೆ ಏನೆಂಬುದು ತಿಳಿಯಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

English summary
America is taking appropriate action under 'Zero Covid Policy' to prevent the rise of Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X