ರಷ್ಯಾ & ಉಕ್ರೇನ್ ಯುದ್ಧ: ರಷ್ಯಾದ 2 ಲಕ್ಷ ಸೈನಿಕರ ಸಾವು?
ಮಾಸ್ಕೋ: 2ನೇ ಮಹಾಯುದ್ಧದ ನಂತರ ಇನ್ನೆಂದಿಗೂ ಮಹಾಯುದ್ಧ ನಡೆಯೋದೆ ಇಲ್ಲ ಅಂತಾ ಜಗತ್ತು ಭಾವಿಸಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಈಗಿನ ಪರಿಸ್ಥಿತಿಯ ಅವಲೋಕನ ಮಾಡಿದರೆ, ಈಗಾಗಲೇ 3ನೇ ಮಹಾಯುದ್ಧ ಶುರುವಾದಂತೆ ಕಾಣುತ್ತಿದೆ. 474 ದಿನದಲ್ಲಿ ರಷ್ಯಾ ಬರೋಬ್ಬರಿ 2 ಲಕ್ಷ ಸೈನಿಕರನ್ನ ಕಳೆದುಕೊಂಡಿದೆ ಎನ್ನಲಾಗಿದೆ.
ಯುದ್ಧ ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತೆ ಅಂದಿದ್ದೇ ಬಂತು. ಆದರೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಅದರಲ್ಲೂ ಉಕ್ರೇನ್ ಡ್ಯಾಂ ಬ್ಲಾಸ್ಟ್ ಆದ ನಂತರ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿದೆ. ಯಾವಾಗ ಬೇಕಾದರೂ ಉಕ್ರೇನ್ ಸೇನೆ ರಷ್ಯಾ ಮೇಲೆ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಆದ್ರೆ ಡ್ಯಾಂ ಬ್ಲಾಸ್ಟ್ ಮಾಡಿದ್ದು ನಾವಲ್ಲ ಅಂತಾ ರಷ್ಯಾ ಹೇಳುತ್ತಾ ಬಂದಿದೆ. ಅಕಸ್ಮಾತ್ ರಷ್ಯಾ ಮೇಲೆ ದಾಳಿ ನಡೆದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದೆ. ಹೀಗಾಗಿ ಪರಮಾಣು ದಾಳಿ ನಡೆಸುವ ಬಗ್ಗೆ ರಷ್ಯಾ ಪರೋಕ್ಷ ಎಚ್ಚರಿಕೆ ಕೊಟ್ಟಿದೆ (Russia Ukraine War).

ರಷ್ಯಾದ 2 ಲಕ್ಷ ಸೈನಿಕರ ಸಾವು?
ಹೌದು, ಇದೀಗ ಉಕ್ರೇನ್ ಮೂಲದ ಸುದ್ದಿಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ 2,16,180 ಸೈನಿಕರನ್ನ ರಷ್ಯಾ ಈವರೆಗೂ ಕಳೆದುಕೊಂಡಿದೆ. ಅಂದರೆ ಉಕ್ರೇನ್ ಸೇನೆ ಅಂದಾಜಿನಂತೆ 2 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ. ಹಾಗೇ ಕಳೆದ ಒಂದೇ ದಿನದಲ್ಲಿ ರಷ್ಯಾದ 540 ಜನರನ್ನ ಹತ್ಯೆ ಮಾಡಿರುವುದಾಗಿ ಉಕ್ರೇನ್ ತಿಳಿಸಿದೆ ಎಂದು ಈ ವೆಬ್‌ಸೈಟ್ ವರದಿ ಮಾಡಿದೆ. ಈ ಮೂಲಕ ರಷ್ಯಾ & ಉಕ್ರೇನ್ ನಡುವಿನ ಯುದ್ಧ ಹತ್ತು ಲಕ್ಷಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಂತಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಉಕ್ರೇನ್ ಪಡೆಗಳ ದಾಳಿ ಎದುರಿಸಲು ರಷ್ಯಾ ಪರಮಾಣು ಅಸ್ತ್ರ ಬಳಸುವ ಸಾಧ್ಯತೆ ಹೆಚ್ಚಾಗಿದೆ.
ಏನಿದು ಡ್ಯಾಂ ಬ್ಲಾಸ್ಟ್ ಘಟನೆ?
ಅದು ಜೂನ್ 6ರ ಮಧ್ಯರಾತ್ರಿ, ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಜನ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಆಗಲೇ ನೋಡಿ ಸಂಭವಿಸಿದ್ದು ಭೀಕರ ಘಟನೆ. ಭೀಕರ ಬಾಂಬ್ & ಸ್ಫೋಟಕ ಬಳಸಿ ಖೆರ್ಸನ್ ಪ್ರಾಂತ್ಯದ ಕಖೌಕಾ ಡ್ಯಾಂ ಬ್ಲಾಸ್ಟ್ ಮಾಡಲಾಗಿತ್ತು. ಘಟನೆ ಬಳಿಕ ರಷ್ಯಾ ಮತ್ತು ಉಕ್ರೇನ್ ನಡುವೆ ಪರಿಸ್ಥಿತಿ ಕೊತ ಕೊತ ಕುದಿಯುತ್ತಿದೆ. ಈ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋ ಸಹಾಯ ಪಡೆದು ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿಯನ್ನ ನಡೆಸೋದು ಪಕ್ಕಾ ಎನ್ನಲಾಗಿತ್ತು. ಉಕ್ರೇನ್ ಈಗ ರಷ್ಯಾ ವಿರುದ್ಧ ಪ್ರತಿಕಾರಕ್ಕೆ ಸಜ್ಜಾದಂತೆ ಕಾಣುತ್ತಿದೆ. ಇದನ್ನ ಸ್ವತಃ ಉಕ್ರೇನ್ ಅಧ್ಯಕ್ಷ ಸ್ಪಷ್ಟವಾಗಿ ಹೇಳಿದ್ದಾರೆ.

ನ್ಯಾಟೋ ವಿಚಾರಕ್ಕೆ ಶುರುವಾಗಿದ್ದ ಯುದ್ಧ!
ರಷ್ಯಾ ಕೊತ ಕೊತ ಕುದಿಯುವಾಗಲೇ ಉಕ್ರೇನ್ ಅಧ್ಯಕ್ಷ ನ್ಯಾಟೋ & ಅಮೆರಿಕ ಜೊತೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಇನ್ನು ಯುದ್ಧ ಶುರುವಾಗಿದ್ದು ಕೂಡ ಇದೇ ರೀತಿ, ಉಕ್ರೇನ್ ಸೇನೆಯನ್ನು ನ್ಯಾಟೋ ಒಕ್ಕೂಟಕ್ಕೆ ಅಮೆರಿಕ ಸೆಳೆಯುತ್ತಿದೆ. ಹೀಗೆ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇನೆ ಸೇರಿದರೆ ರಷ್ಯಾಗೆ ಈ ಘಟನೆಯಿಂದ ಅಪಾಯ ಎದುರಾಗಲಿದೆ. ಈ ಕಾರಣಕ್ಕೆ ಯುದ್ಧ ಸಾರಿದ್ದೇವೆ ಎಂದು ರಷ್ಯಾ ಹೇಳಿತ್ತು. ಈಗ ನೋಡಿದರೆ ಉಕ್ರೇನ್ ಅಧ್ಯಕ್ಷ ಯುದ್ಧಕ್ಕೆ ಸಹಾಯ ಮಾಡಿ ಅಂತಾ ಅದೇ ನ್ಯಾಟೋ, ಅಮೆರಿಕದ ಬಳಿ ಮನವಿ ಮಾಡುತ್ತಿದ್ದಾರೆ. ಇದು ರಷ್ಯಾ ಕೋಪವನ್ನ ಮತ್ತಷ್ಟು ಹೆಚ್ಚಿಸುತ್ತಿದೆ.
10 ವರ್ಷ ಕಳೆದರೂ ಯುದ್ಧ ನಿಲ್ಲಲ್ಲ!
ಉಕ್ರೇನ್ ಯುದ್ಧ ಶುರುವಾದ ಸಂದರ್ಭದಲ್ಲೇ ರಷ್ಯಾ ಒಂದು ದೀರ್ಘಕಾಲದ ಯುದ್ಧಕ್ಕೆ ಸಜ್ಜಾಗಿ ಬಂದಂತೆ ಕಾಣುತ್ತಿದೆ. ರಷ್ಯಾದ ಯುದ್ಧ ತಂತ್ರ & ಉಕ್ರೇನ್ ವಿರುದ್ಧ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವ ರೀತಿ ನೋಡಿದರೆ ಸಾಕು ಅನುಮಾನ ಬಾರದೆ ಇರದು. ಏಕೆಂದರೆ ಈ ಜಗತ್ತಿನಲ್ಲೇ 2ನೇ ಬಲಿಷ್ಠ ಸೇನೆಯನ್ನು ಹೊಂದಿರುವ ರಷ್ಯಾ ಪಡೆಗೆ ಉಕ್ರೇನ್ ಯಾವ ಲೆಕ್ಕ? ಹೀಗಿದ್ರೂ ಈ ಯುದ್ಧ ಮುಂದುವರಿಯುತ್ತಿದೆ ಏಕೆ? ಯಾವ ಕಾರಣಕ್ಕೆ? ಎಂಬ ಪ್ರಶ್ನೆ ಮೂಡಿದೆ. ಹೀಗಿದ್ದಾಗ ಸಂಧಾನ ನಡೆಸಿ, ಯುದ್ಧ ನಿಲ್ಲಿಸಲು ಜಗತ್ತಿನ ಬಲಶಾಲಿ ರಾಷ್ಟ್ರಗಳು ಪ್ರಯತ್ನಿಸುತ್ತಿಲ್ಲ. ಇದೇ ಸಂದರ್ಭದಲ್ಲೇ ರಷ್ಯಾ 2 ಲಕ್ಷ ಸೈನಿಕರನ್ನ ಈಗಾಗಲೇ ಕಳೆದುಕೊಂಡಿದೆ ಎನ್ನುತ್ತಿದೆ ಉಕ್ರೇನ್.












Click it and Unblock the Notifications