ಪರಮಾಣು ಯುದ್ಧಕ್ಕೆ ಸಿದ್ಧವಾಗುತ್ತಿದೆಯಾ ರಷ್ಯಾ ಸೇನೆ?

ರಷ್ಯಾ ಸೇನೆಯು ಇದೀಗ ಉಕ್ರೇನ್ ವಿರುದ್ಧ ಭಾಗಶಃ ಜಯ ಸಾಧಿಸಿದ್ದು, ದಿನದಿಂದ ದಿನಕ್ಕೆ ಇನ್ನಷ್ಟು & ಮತ್ತಷ್ಟು ಮುಂದೆ ನುಗ್ಗುತ್ತಿದೆ. ಈ ಮೂಲಕ ಉಕ್ರೇನ್ ನೆಲವನ್ನ ಕೆಲವೇ ಕೆಲವು ತಿಂಗಳಲ್ಲಿ ರಷ್ಯಾ ಸೇನೆ ಸಂಪೂರ್ಣ ವಶಕ್ಕೆ ಪಡೆಯುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಗಂಭೀರ ಆರೋಪ ಒಂದು ರಷ್ಯಾ ಸೇನೆಯ ವಿರುದ್ಧ ಕೇಳಿಬಂದಿದ್ದು, ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಯಾಗಿದೆ.

ಕೆಲವು ದಿನಗಳ ಹಿಂದಷ್ಟೇ, ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರು ಮಹತ್ವದ ಹೇಳಿಕೆ ನೀಡಿದ್ದರು. ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುವಾಗ ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್‌ ವಿರುದ್ಧದ ಯುದ್ಧ ಗೆಲ್ಲಲ್ಲು ರಷ್ಯಾಗೆ ಅಣ್ವಸ್ತ್ರ ಬೇಕಾಗಿಲ್ಲ. ಆದರೂ ಪರಮಾಣು ಅಸ್ತ್ರಗಳ ಬಳಕೆಗೆ ನಾವು ಸಿದ್ಧವಾಗೇ ಇದ್ದೇವೆ ಎಂಬ ಎಚ್ಚರಿಕೆ ನೀಡಿದ್ದರು. ಈ ಮೂಲಕ ನಮ್ಮ ತಂಟೆಗೆ ಬರಬೇಡಿ ಎಂಬ ಸಂದೇಶವನ್ನು, ಪಾಶ್ಚಿಮಾತ್ಯ ದೇಶಗಳಿಗೆ ರವಾನಿಸಿದ್ದರು ಪುಟಿನ್. ಇದೀಗ ನೋಡಿದರೆ ರಷ್ಯಾ ಸೇನೆಯ ವಿರುದ್ಧವೇ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

Allegedly The Russian Military Is Preparing For Nuclear War

ಪರಮಾಣು ಯುದ್ಧಕ್ಕೆ ರಹಸ್ಯ ತಯಾರಿ?

ರಷ್ಯಾ ಅಧ್ಯಕ್ಷ ಪುಟಿನ್ ಪರಮಾಣು ಯುದ್ಧದ ಬಗ್ಗೆ ಮಾತನಾಡಿದ ನಂತರ ಪಾಶ್ಚಿಮಾತ್ಯರ ಬುಡವೇ ಅಲುಗಾಡಿ ಹೋಗಿದೆ. ಇದರ ಜೊತೆಗೆ ರಷ್ಯಾ ಯಾವ ಕ್ಷಣದಲ್ಲಿ ಏನು ಮಾಡುತ್ತೋ? ಎಂಬ ಭಯ ಕೂಡ ಅಮೆರಿಕ & ಅದರ ಸ್ನೇಹಿತರಾದ ಪಾಶ್ಚಿಮಾತ್ಯ ದೇಶಗಳನ್ನು ಇದೀಗ ಕಾಡುತ್ತಿದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಇದೀಗ ರಷ್ಯಾ ರಹಸ್ಯವಾಗಿ ಪರಮಾಣು ಯುದ್ಧ ಶುರು ಮಾಡಲು ತಯಾರಿ ಆರಂಭ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿಯೇ ಉಕ್ರೇನ್ ಕೂಡ ಅಲರ್ಟ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+