ಚೀನಾ ನೆಲದಲ್ಲಿ ಇಸ್ರೇಲ್ ಅಧಿಕಾರಿಗಳ ಮೇಲೆ ಚೂರಿ ಇರಿತ?
ಬೀಜಿಂಗ್: ಒಂದ್ಕಡೆ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ರಣಕಾಳ ನಡೆಯುತ್ತಿದೆ. ಇನ್ನೊಂದು ಕಡೆ ಚೀನಾದಲ್ಲಿ ಭೀಕರ ಘಟನೆ ನಡೆದಿದ್ದು, ಚೀನಾ ರಾಜಧಾನಿ ಬೀಜಿಂಗ್‌ನ ಹೃದಯ ಭಾಗದಲ್ಲಿ ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡಿ ಚೂರಿ ಇರಿದಿದ್ದಾರಂತೆ. ಹಾಗಾದರೆ ಈ ಘಟನೆ ನಡೆದಿದ್ದು ಹೇಗೆ? ಇಸ್ರೇಲ್ ಅಧಿಕಾರಿಗಳಿಗೆ ಆಗಿದ್ದೇನು?
ಹೌದು ತನ್ನ ನೆಲದ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ರು ಅಂತಾ ರೊಚ್ಚಿಗೆದ್ದಿರುವ ಇಸ್ರೇಲ್ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. ಗಾಜಾಪಟ್ಟಿ ಹಾಗೂ ಹಮಾಸ್ ಉಗ್ರರ ನೆಲೆಗಳನ್ನ ನಾಶ ಮಾಡುತ್ತಿದೆ. ಆದರೆ ಇದೇ ಸಮಯದಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನ ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಇಂದು ಹಲ್ಲೆ ನಡೆದಿದೆ ಎಂದು ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಇಸ್ರೇಲ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಅರೆ ರಾಯಭಾರ ಕಚೇರಿ ಅಧಿಕಾರಿಗಳು ಟಾರ್ಗೆಟ್ ಆಗಿದ್ದು ಹೇಗೆ? ಬನ್ನಿ ತಿಳಿಯೋಣ.

ಇಸ್ರೇಲ್ ಅಧಿಕಾರಿಗಳು ಆಸ್ಪತ್ರೆ...
ಅಂದಹಾಗೆ ಈಗ ಇಸ್ರೇಲ್ ಅಧಿಕಾರಿಗಳ ಮೇಲೆ ದಾಳಿ ನಡೆದಿರುವುದು ರಾಯಭಾರ ಕಚೇರಿ ಆವರಣದಲ್ಲಲ್ಲ. ಇಂಥ ದಾಳಿ ರಾಯಭಾರ ಕಚೇರಿ ಆವರಣದಲ್ಲಿ ಸಂಭವಿಸುವ ಸಾಧ್ಯತೆ ಕೂಡ ಇಲ್ಲ, ಏಕೆಂದರೆ ರಾಯಭಾರ ಕಚೇರಿಗೆ ಬಿಗಿ ಬಂದೋಬಸ್ತ್ ಇರುತ್ತದೆ. ಆದ್ರೆ ಹೊರಗೆ ಅಟ್ಯಾಕ್ ನಡೆದಿದೆ ಅಂತಾ ಆರೋಪಿಸಲಾಗಿದೆ. ಹಲ್ಲೆಯ ನಂತರ ರಾಯಭಾರ ಕಚೇರಿಯ ಅಧಿಕಾರಿ ಒಬ್ಬರು ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಲಾಗಿದೆ. ಆದರೆ ಚೀನಾ ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯುದ್ಧದ ಹಿಂಸಾಚಾರಕ್ಕೆ 7 ದಿನ
ಈ ಬೆಳವಣಿಗೆ ನಡುವೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇದೀಗ 7ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಜನ 2 ಕಡೆ ಮೃತಪಟ್ಟಿದ್ದು, ಗಾಜಾಪಟ್ಟಿಯು ಸಂಪೂರ್ಣ ನಾಶ ಆಗೋಗಿದೆ. ಇದೇ ಸಂದರ್ಭದಲ್ಲಿ ತಮ್ಮ ರಾಯಭಾರ ಕಚೇರಿ ಅಧಿಕಾರಿಗಳ ಮೇಲೆ ಈಗ ಚೀನಾದಲ್ಲಿ ದಾಳಿ ನಡೆದಿದೆ ಎಂದು ಇಸ್ರೇಲ್ ಆರೋಪ ಮಾಡಿದೆ. ಆದರೆ ಈ ಕುರಿತಾಗಿ ಇನ್ನೂ ಚೀನಾ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಹಮಾಸ್ ಮತ್ತು ಇಸ್ರೇಲ್ ಜಗಳದ ಮಧ್ಯೆ ಮತ್ತೊಂದು ತಲೆನೋವು ಶುರುವಾಗಿದೆ.
ಒಟ್ನಲ್ಲಿ ಆದಷ್ಟು ಬೇಗ ಇಸ್ರೇಲ್ ಮತ್ತು ಹಮಾಸ್ ಕಿತ್ತಾಟಕ್ಕೆ ಬ್ರೇಕ್ ಹಾಕಬೇಕಿದೆ. ಇಲ್ಲ ಅಂದ್ರೆ ಈ ಯುದ್ಧ ಮುಂದೆ ಮಹಾಯುದ್ಧಕ್ಕೂ ಆಹ್ವಾನ ನೀಡಿದರೆ ಅಚ್ಚರಿ ಪಡಬೇಕಿಲ್ಲ. ಎಲ್ಲಾ ಬೆಳವಣಿಗೆ ಮಧ್ಯೆ ರಷ್ಯಾ ಮತ್ತು ಅಮೆರಿಕ ನಡುವೆಯೂ ಮುಸುಕಿನ ಗುದ್ದಾಟಕ್ಕೆ ಇಸ್ರೇಲ್ & ಹಮಾಸ್ ತಿಕ್ಕಾಟ ವೇದಿಕೆ ಒದಗಿಸಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧ ಮಧ್ಯೆ ಮತ್ತೊಂದು ಭೀಕರ ರಣಕಾಳಗ ಆರಂಭವಾಗಿದೆ.












Click it and Unblock the Notifications