‘ಅಂಕಲ್‌ನ ಹೊಡಿತಿನಿ ಸುಬ್ಬಿ’ ಅಂತಿದೆ ರಷ್ಯಾ ಸೇನೆ!

ರಷ್ಯಾ & ಉಕ್ರೇನ್ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆ ವರದಿ ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ಹತ್ಯೆ ಮಾಡಲು ಪ್ರಯತ್ನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಅದ್ರಲ್ಲೂ ವ್ಲಾದಿಮಿರ್ ಪುಟಿನ್ ಅವರ ಅಧಿಕೃತ ಸರ್ಕಾರಿ ನಿವಾಸ ಕ್ರೆಮ್ಲಿನ್ ಮೇಲೆ ಭೀಕರ ಡ್ರೋನ್ ದಾಳಿ ಮಾಡಲಾಗಿತ್ತು. ಈಗ 1 ವರ್ಷದ ನಂತರ ಉಕ್ರೇನ್ ಅಧ್ಯಕ್ಷರ ಕಥೆ ಮುಗಿಸಲು ರಷ್ಯಾ ಯತ್ನಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪವೇ ಯುದ್ಧದ ಆರಂಭಕ್ಕೆ ಕಾರಣವಾಗಿತ್ತು ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು. 2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಎರಡು ದೇಶಗಳ ಮಧ್ಯೆ ಭೀಕರ ಕದನ ಶುರುವಾಗಿತ್ತು. ರಷ್ಯಾ & ಉಕ್ರೇನ್ ನಡುವೆ, ಯುದ್ಧದ ಭೀಕರತೆ ಶುರುವಾಗಿ ಈಗಾಗಲೇ ಲಕ್ಷಾಂತರ ಜನ ಜೀವ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ಉಕ್ರೇನ್ ಅಧ್ಯಕ್ಷರ ಕಥೆ ಮುಗಿಸಲು ಪ್ರಯತ್ನ ನಡೆದಿದೆ ಎಂದು ಆರೋಪ ಮಾಡಲಾಗಿದೆ.

Allegedly Russian Military Is Plans For The Ukraine President Assassination

ಉಕ್ರೇನ್ ಅಧ್ಯಕ್ಷನೇ ನಾಪತ್ತೆ?

ಈ ಪರಿಸ್ಥಿತಿ ಅರಿತು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಅದರಲ್ಲೂ ಉಕ್ರೇನ್ ದೇಶದಲ್ಲಿ ಈ ಝೆಲೆನ್ಸ್ಕಿ ಸಾರ್ವಜನಿಕರ ಕಣ್ಣಿಗೆ ಕಾಣಿಸುತ್ತಿಲ್ಲವಂತೆ. ಇದು ಕೂಡ ಕುತೂಹಲ ಕೆರಳಿಸಿದ್ದು, ಜೊತೆಗೆ ಉಕ್ರೇನ್‌ನ ಬಿಟ್ಟು ಬೇರೆ ದೇಶದಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ನೆಲೆ ಪಡೆದಿದ್ದಾರೆ. ಅವರು ಆಗಾಗ ಉಕ್ರೇನ್‌ಗೆ ಬಂದು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗೆ ಅಂತೆ ಕಂತೆ ಮಧ್ಯೆ 'ಅಂಕಲ್‌ನ ಹೊಡಿತಿನಿ ಸುಬ್ಬಿ' ಅಂತಿದೆ ರಷ್ಯಾ!

Allegedly Russian Military Is Plans For The Ukraine President Assassination

ಡ್ಯಾಂ ಹೊಡೆದಿದ್ದು ಯಾರು?

ರಷ್ಯಾ ಪಿತ್ತ ನೆತ್ತಿಗೇರಲು ಹಲವು ಕಾರಣ ಇದೆ. ಅದರಲ್ಲೂ ಉಕ್ರೇನ್ ದೇಶದಲ್ಲಿ ಸ್ಫೋಟದ ಪರಿಣಾಮ ಹೊಡೆದು ಹೋದ ಡ್ಯಾಂ ನಾಶಕ್ಕೆ ಕಾರಣ, ಸ್ವತಃ ಇದೇ ವೊಲೊಡಿಮಿರ್ ಝೆಲೆನ್ಸ್ಕಿ ಎಂಬ ಆರೋಪ ರಷ್ಯಾ ಮಾಡ್ತಿದೆ. ಅದು ಬಿಡಿ ಯುದ್ಧದಲ್ಲಿ ಝೆಲೆನ್ಸ್ಕಿ ಸಾಕಷ್ಟು ಅಪರಾಧ ಎಸಗಿದ್ದಾರೆ, ಎಂಬ ಮಾತನ್ನೂ ರಷ್ಯಾ ಹೇಳುತ್ತಿದೆ. ಇದು ಬೆಂಕಿ ಎಬ್ಬಿಸಿದ್ದು ಈ ಮೂಲಕ ಎರಡೂ ದೇಶಗಳ ನಡುವೆ ದ್ವೇಷ ಧಗಧಗಿಸುತ್ತಿದೆ. ಮತ್ತೊಂದು ಕಡೆ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಉಕ್ರೇನ್ ಚುನಾವಣೆ ನಡೆಯಬೇಕಿತ್ತು, ಆದರೂ ಚುನಾವಣೆ ನಡೆದಿಲ್ಲ. ಹೀಗಾಗಿ ಕಂಪನ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+