Ukraine War: ರಷ್ಯಾ ಸೇನೆಯಿಂದ ನಿಲ್ಲದ ದಾಳಿ, 250 ಡ್ರೋನ್ & 14 ಕ್ಷಿಪಣಿ ಮೂಲಕ ದಾಳಿ?
ರಷ್ಯಾ & ಉಕ್ರೇನ್ ನಡುವೆ ಒಂದು ಕಡೆ ಮಹತ್ವದ ಕದನ ವಿರಾಮ ಘೋಷಣೆ ಮಾತುಕತೆ ನಡೆಯುವಾಗಲೇ, ಇನ್ನೊಂದು ಕಡೆ ಬಡಿದಾಟ ಕೂಡ ಮುಂದುವರಿದಿದೆ. ರಷ್ಯಾ & ಉಕ್ರೇನ್ ಹೀಗೆ ಭೀಕರ ಯುದ್ಧ ನಡೆಸುತ್ತಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಬರ್ಬರವಾಗಿ ದಾಳಿಯ ನಡೆಸುತ್ತಿದ್ದಾರೆ. ಈ ರೀತಿಯಾಗಿ ರಷ್ಯಾ ನಡೆಸುತ್ತಿರುವ ದಾಳಿಗೆ ಉಕ್ರೇನ್ ಸಂಪೂರ್ಣ ಬೆಚ್ಚಿ ಬಿದ್ದಿದೆ, ಅಲ್ಲದೆ ಮತ್ತೊಂದು ಕಡೆ ಸಾಮಾನ್ಯ ಜನರ ಪ್ರಾಣ ಪಕ್ಷಿ ಕೂಡ ಲೆಕ್ಕಕ್ಕೆ ಸಿಗದಂತೆ ಹಾರಿ ಹೋಗುತ್ತಿದೆ.
ಯುರೋಪ್ ಮಾತ್ರವಲ್ಲ ಇಡೀ ಜಗತ್ತು ನಡುಗಿ ಹೋಗುವಂತೆ ರಷ್ಯಾ & ಉಕ್ರೇನ್ ಬಡಿದಾಟ ಮುಂದುವರಿಸಿವೆ. ರಷ್ಯಾ ಎಂಬ ದೈತ್ಯ ದೇಶದ ಜೊತೆಗೆ ಉಕ್ರೇನ್ ವಾರ್ ನಡೆಸುತ್ತಿದ್ದು, ಈ ಮೂಲಕ ಹಿಂಸಾಚಾರ ಕೂಡ ಜೋರಾಗಿದೆ. ಆದರೆ ಇದನ್ನ ನಿಲ್ಲಿಸಬೇಕು ಅಂತಾ ಜಗತ್ತಿನ ದೊಡ್ಡ ದೊಡ್ಡ ದೇಶಗಳೇ ಪ್ರಯತ್ನ ಮಾಡುತ್ತಿವೆ. ಅದರಲ್ಲೂ ಅಮೆರಿಕ ಈ ವಿಚಾರದಲ್ಲಿ ಭಾರಿ ದೊಡ್ಡ ಪ್ರಭಾವ ಬೀರುತ್ತಿದೆ. ಹೀಗೆ ಕದನ ವಿರಾಮ ಘೋಷಣೆ ಆಗಬೇಕು ಎಂಬ ಪ್ರಯತ್ನ ನಡೆಸುವ ಸಮಯದಲ್ಲೇ ಉಕ್ರೇನ್ ಮೇಲೆ ರಷ್ಯಾ 250 ಡ್ರೋನ್ ಹಾಗೂ 14 ಖಂಡಾಂತರ ಕ್ಷಿಪಣಿ ಮೂಲಕ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ.

ರಷ್ಯಾ ದಾಳಿಗೆ ಹೆದರಿ ಕೂತ ಉಕ್ರೇನ್!
ಹೌದು, ಇದೀಗ ಉಕ್ರೇನ್ ಮಾಡಿರುವ ಆರೋಪದ ಪ್ರಕಾರ ದಿಢೀರ್ ರಾತ್ರೋ ರಾತ್ರಿ ದಾಳಿ ನಡೆದಿದೆ. ರಷ್ಯಾ 250 ಡ್ರೋನ್ ಹಾಗೂ 14 ಖಂಡಾಂತರ ಕ್ಷಿಪಣಿ ಮೂಲಕ ದಾಳಿ ನಡೆಸಿ, ಇನ್ನೂ ದೊಡ್ಡ ವಿನಾಶಕ್ಕೆ ಕೈ ಹಾಕಿದೆ ಎಂದು ಆರೋಪ ಮಾಡಿದೆ. ಇಷ್ಟೆಲ್ಲದರ ನಡುವೆ ಕೂಡ ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆ ಮುಂದುವರಿದಿದೆ, ಮತ್ತೊಂದು ಕಡೆ ದೂರದ ಟರ್ಕಿ ದೇಶದಲ್ಲಿ ಉಕ್ರೇನ್ & ರಷ್ಯಾ ನಡುವೆ ಯುದ್ಧ ನಿಲ್ಲಿಸಲು ಶಾಂತಿ ಮಾತುಕತೆ ಸಾಗಿದೆ. ಈ ಸಮಯದಲ್ಲೂ ರಷ್ಯಾ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಆರೋಪ ಮಾಡ್ತಿದೆ.
307 ಖೈದಿಗಳ ವಿನಿಮಯ ಪ್ರಕ್ರಿಯೆ
ಮೇ 24ರ ಶನಿವಾರ ಕೂಡ ರಷ್ಯಾ & ಉಕ್ರೇನ್ ನಡುವೆ ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆ ಮುಂದುವರಿದಿದ್ದು, ತಲಾ 307 ಖೈದಿಗಳ ವಿನಿಮಯ ಪ್ರಕ್ರಿಯೆ ಯಶಸ್ವಿಯಾಗಿದೆ. ಶುಕ್ರವಾರ ಕೂಡ ಇದೇ ರೀತಿಯಾಗಿ ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆ ನಡೆದಿತ್ತು. ಶುಕ್ರವಾರದಂದು ಒಟ್ಟು 390 ಜನರ ಹಸ್ತಾಂತರ ನಡೆದಿದ್ದು, ಇದೀಗ ಮತ್ತೊಂದು ಸುತ್ತಿನಲ್ಲಿ ಹಸ್ತಾಂತರವನ್ನ ಮಾಡಲಾಗಿದೆ. ಇಷ್ಟೆಲ್ಲಾ ಶಾಂತಿ ಮಾತುಕತೆ ನಡೆಯುತ್ತಿದ್ದರು ಕೂಡ ಒಬ್ಬರು ಮತ್ತೊಬ್ಬರ ಮೇಲೆ ದಾಳಿ ನಿಲ್ಲಿಸುತ್ತಿಲ್ಲ ಎಂಬುದೇ ವಿಪರ್ಯಾಸದ ಸಂಗತಿ.












Click it and Unblock the Notifications