Gaza: ಗಾಜಾ ನೆಲದಲ್ಲಿ ಇಸ್ರೇಲ್ ದಾಳಿ ಮತ್ತಷ್ಟು ಭೀಕರ, ಈವರೆಗೂ 56,000 ಜನರ ಸಾವು?

ಹೊಡಿ ಮಗ.. ಹೊಡಿ ಮಗ.. ಅಂತಾ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ಚಂಡಾಟ ಆಡುತ್ತಿದೆ. ಅತ್ತ ಹಮಾಸ್ ಬಂಡುಕೋರರ ಹೆಡೆಮುರಿ ಕಟ್ಟುತ್ತೇವೆ ಅಂತಾ ಗಾಜಾ ಪಟ್ಟಿಗೆ ಎಂಟ್ರಿ ಕೊಟ್ಟಿದ್ದ ಇಸ್ರೇಲ್ ಸೇನೆ ಈಗ ಇಡೀ ಗಾಜಾ ನಗರವನ್ನೇ ನಾಶ ಮಾಡಿ ಹಾಕಿದೆ ಅನ್ನೋ ಆರೋಪ ಕೂಡ ಇದೆ. ಇಷ್ಟೆಲ್ಲಾ ತಿಕ್ಕಾಟ ತೀವ್ರವಾಗಿರುವ ಸಮಯದಲ್ಲೇ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದು, ಸಂಚಲನ ಸೃಷ್ಟಿಯಾಗಿದೆ. ಮತ್ತೊಂದು ಕಡೆ ಗಾಜಾ ಪಟ್ಟಿಯಲ್ಲಿ ಶವಗಳ ರಾಶಿ ಮತ್ತಷ್ಟು ಹೆಚ್ಚಾಗುತ್ತಿದೆ.

ಹಮಾಸ್ ತಮ್ಮ ಮೇಲೆ ದಾಳಿ ಮಾಡಿದೆ ಅಂತಾ ಆರೋಪಿಸಿ ಇಸ್ರೇಲ್ ಕೌಂಟರ್ ಅಟ್ಯಾಕ್ ಮಾಡಿತ್ತು. ಈ ದಾಳಿಯ ಪರಿಣಾಮ ಇಸ್ರೇಲ್ & ಗಾಜಾ ಪಟ್ಟಿ ನಡುವೆ ಘೋರ ಕಾಳಗ ಶುರುವಾಗಿತ್ತು. ಅಲ್ಲದೆ ಇಂತಹ ಭೀಕರ ದಾಳಿಗೆ ಹೆದರಿ ಜನರು ಕೂಡ ಊರು ಬಿಟ್ಟು ಓಡಿ ಹೋಗಿದ್ದರು. ಇಷ್ಟೆಲ್ಲಾ ಘಟನೆಗಳ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪ ಇಸ್ರೇಲ್ ವಿರುದ್ಧ ಕೇಳಿಬಂದಿದೆ. ಅಂದಹಾಗೆ ಇದೀಗ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆ ಪರಿಣಾಮ ಅರ್ಧ ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ, ಅಲ್ಲದೆ ಲಕ್ಷಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Allegedly More Than 56 000 Killed And 1 31 848 Injured In Gaza By Israel Attack

56,000ಕ್ಕೂ ಹೆಚ್ಚು ಜನರ ಸಾವು?

ಅದು 2023 ಅಕ್ಟೋಬರ್ 7 ಶನಿವಾರ, ಅಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ರಾಕೆಟ್ & ಗನ್ ಮೂಲಕ ದಾಳಿ ಮಾಡಿ ಹಲವರ ಸಾವಿಗೆ ಕಾರಣರಾಗಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಈ ಬೆಳವಣಿಗೆ ನಂತರ ತಕ್ಷಣ ಎಚ್ಚೆತ್ತುಕೊಂಡ ಇಸ್ರೇಲ್ ಸೇನೆ, ಗಾಜಾ ಪಟ್ಟಿಗೆ ನುಗ್ಗಿತ್ತು. ಹಾಗೇ ಗಾಜಾದಲ್ಲಿ ಭಾರಿ ದೊಡ್ಡ ಪ್ರಮಾಣದ ದಾಳಿಯನ್ನ ಕೂಡ ನಡೆಸಿತ್ತು. ಹೀಗೆ ಇಬ್ಬರ ನಡುವೆ ಯುದ್ಧ ಶುರುವಾಗಿ 2 ವರ್ಷ ತುಂಬುವ ಹಂತಕ್ಕೆ ಬಂದು ನಿಂತಿದೆ.

ಯುದ್ಧ ನಿಲ್ಲಿಸುವಂತೆ ಹೆಚ್ಚಾದ ಒತ್ತಡ

ಇಷ್ಟಾದರೂ ಭೀಕರ ಯುದ್ಧ ಮಾತ್ರ ನಿಂತಿಲ್ಲ, ಹೀಗೆ ಹಿಂಸಾಚಾರ ಶುರುವಾದ ನಂತರ ಗಾಜಾ ಪಟ್ಟಿಯಲ್ಲಿ ಬರೋಬ್ಬರಿ 56,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸುಮಾರು 1,00,000ಕ್ಕೂ ಹೆಚ್ಚು ಗಾಜಾ ನಿವಾಸಿಗಳು ಗಾಯಗೊಂಡು ನರಳುತ್ತಿದ್ದಾರೆ ಎಂದು ಇಸ್ರೇಲ್ ಮಿಲಿಟರಿಯ ವಿರುದ್ಧ ಆರೋಪ ಮಾಡಲಾಗಿದೆ. ಹೀಗೆ ಇಸ್ರೇಲ್ & ಗಾಜಾ ನಡುವಿನ ಯುದ್ಧ ಮತ್ತಷ್ಟು ಭೀಕರವಾಗಿ, ಜನರ ಎದೆಯಲ್ಲಿ ಇನ್ನಷ್ಟು ಆತಂಕ ಮೂಡಿದೆ. ಇರಾನ್ & ಇಸ್ರೇಲ್ ಯುದ್ಧ ನಿಂತಂತೆ, ಇಸ್ರೇಲ್ & ಗಾಜಾ ನಡುವಿನ ಯುದ್ಧ ಕೂಡ ನಿಲ್ಲಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+