ಗಾಜಾ ನೆಲದಲ್ಲಿ ಮತ್ತೆ ಅಲ್ಲೋಲ ಕಲ್ಲೋಲ, ಇಸ್ರೇಲ್ ವಾಯುದಾಳಿಗೆ 14 ಜನ ಬಲಿ?
ಗಾಜಾ ನೆಲದಲ್ಲಿ ರಕ್ತಪಾತ ನಿಂತಿಲ್ಲ, ಗಾಜಾ ನೆಲದಲ್ಲಿ ಪದೇ ಪದೇ ಹಿಂಸಾಚಾರವು ಭುಗಿಲೆದ್ದು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪರಿಸ್ಥಿತಿ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ, ಇಂತಹ ಸಮಯದಲ್ಲೇ ಮತ್ತೆ ಇಂದು ಘೋರ ದುರಂತ ಒಂದು ನಡೆದುಬಿಟ್ಟಿದೆ. ಅಂದಹಾಗೆ ಗಾಜಾ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್ ಮಿಲಿಟರಿ ಮತ್ತಷ್ಟು ಪ್ರದೇಶಗಳ ಮೇಲೆ ವಾಯುದಾಳಿ ಆರಂಭಿಸಿದೆ. ಇದರ ಪರಿಣಾಮ ಇಸ್ರೇಲ್ ವಾಯುದಾಳಿ ಹಿನ್ನೆಲೆ ಇದೀಗ 14 ಜನ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯುದ್ಧದ ಆರ್ಭಟ ಮತ್ತಷ್ಟು ತೀವ್ರವಾಗಿದ್ದು, ಇದೀಗ ಮತ್ತೆ ನಲುಗಿ ಹೋಗಿದೆ ಗಾಜಾ ಪಟ್ಟಿ. 2023 ಅಕ್ಟೋಬರ್ 07 ಶನಿವಾರ ಶುರುವಾಗಿದ್ದ ಇಸ್ರೇಲ್ & ಹಮಾಸ್ ನಡುವಿನ ಯುದ್ಧ ಇಡೀ ಗಾಜಾ ಪಟ್ಟಿ ನಾಶ ಮಾಡಿ ಹಾಕಿದೆ. ಹೀಗಿದ್ದಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಬಂದು ಈ ಯುದ್ಧ ನಿಲ್ಲಿಸಿದ್ದೀನಿ ಅಂತಾ ಬಿಲ್ಡಪ್ ಕೊಡುತ್ತಿದ್ದರು. ಇಷ್ಟೆಲ್ಲದರ ನಡುವೆ ದಿಢೀರ್ ಮತ್ತೊಮ್ಮೆ ಗಾಜಾ ಪಟ್ಟಿಯಲ್ಲಿ ಯುದ್ಧ ಬೆಂಕಿ ಭುಗಿಲೆದ್ದು, ಇಸ್ರೇಲ್ ಸೇನೆಯಿಂದ ನಡೆದಿದೆ ಎಂಬ ದಾಳಿಯಲ್ಲಿ ಈಗ 14 ಪ್ಯಾಲೆಸ್ತೀನ್ ನಾಗರಿಕರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ, ಗಾಜಾ ಪಟ್ಟಿ ಮತ್ತೊಮ್ಮೆ ನಲುಗಿ ಹೋಗಿದ್ದು ಇಸ್ರೇಲ್ ಮಿಲಿಟರಿ ತನ್ನ ದಾಳಿಯನ್ನು ಇನ್ನಷ್ಟು ಭೀಕರಗೊಳಿಸಿದೆ ಎಂದು ಆರೋಪ ಮಾಡಿದ್ದಾರೆ ಗಾಜಾ ಅಧಿಕಾರಿಗಳು

ಭೀಕರ ದಾಳಿ ಮುಂದುವರಿಸಿದ ಇಸ್ರೇಲ್?
ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿರುವ ಭೀಕರ ರಣರಂಗ ಇನ್ನೇನು ನಿಂತು ಹೊಗಿದೆ, ಎಲ್ಲವೂ ಶಾಂತವಾಗುತ್ತಿದೆ ಎನ್ನುವಾಗಲೇ ಮತ್ತೆ ಹಿಂಸಾಚಾರ ಸ್ಫೋಟಗೊಂಡಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಯುದ್ಧ ಮತ್ತೆ ಆರಂಭವಾಗಿದ್ದು, ಪ್ರಮುಖ ಪ್ರದೇಶಗಳ ಮೇಲೆ ಗುರಿ ಇಟ್ಟು ದಾಳಿ ಮಾಡುತ್ತಿದೆ ಇಸ್ರೇಲ್ ಸೇನೆ. ಇಸ್ರೇಲ್ ದಾಳಿ ಪರಿಣಾಮ ಕೆಲವೇ ದಿನಗಳ ಅಂತರದಲ್ಲಿ ನೂರಾರು ಜನ ಜೀವ ಕಳೆದುಕೊಂಡ ಆರೋಪ ಕೇಳಿ ಬಂದಿದೆ.
ಆತಂಕ ಮೂಡಿಸಿದ ಯುದ್ಧ & ಹಿಂಸೆ
ಇಸ್ರೇಲ್ & ಹಮಾಸ್ ಯುದ್ಧ ನಡೆದು ಗಾಜಾ ಪಟ್ಟಿ, ಪ್ಯಾಲೆಸ್ತೀನ್ ನಾಶವಾಗಿವೆ. ಹೀಗೆ ಯುದ್ಧ ಶುರುವಾಗಲು ಕಾರಣವಾಗಿದ್ದು ಹಮಾಸ್ ಬಂಡುಕೋರರ ಕೃತ್ಯ ಎಂಬ ಆರೋಪ ಇದೆ. 2023 ಅಕ್ಟೋಬರ್ 7 ರಂದು ಇಸ್ರೇಲ್ & ಹಮಾಸ್ ನಡುವೆ ಈ ಯುದ್ಧ ಶುರುವಾಗಿತ್ತು. ಈ ಯುದ್ಧಕ್ಕೆ ಬ್ರೇಕ್ ಹಾಕಲು ಡೊನಾಲ್ಡ್ ಟ್ರಂಪ್ ಎಲ್ಲಾ ಪ್ರಯತ್ನವನ್ನು ಮಾಡಿದ್ದರೂ ಮತ್ತೆ ಈ ಯುದ್ಧ ಭುಗಿಲೆದ್ದಿದೆ. ಅಲ್ಲದೆ ಮಧ್ಯಪ್ರಾಚ್ಯ ಭಾಗದಲ್ಲಿ ತಲೆನೋವು ಶುರುವಾಗಿರುವ ಹಿನ್ನೆಲೆ ಆತಂಕ ಮನೆಮಾಡಿದೆ.












Click it and Unblock the Notifications