ಇಸ್ರೇಲ್ ದಾಳಿಗೆ 21 ಮಂದಿ ಬಲಿ: ಲೆಬನಾನ್ ಕ್ರಿಶ್ಚಿಯನ್ನರ ಆಕ್ರೋಶ!

ಇಸ್ರೇಲ್ ಮಾಡುತ್ತಿರುವ ಎಡವಟ್ಟುಗಳಿಗೆ ಯಾವುದೇ ತಡೆ ಬೀಳುತ್ತಿಲ್ಲ ಅಂತಾ ಕಾಣುತ್ತದೆ. ಈ ಆರೋಪ ಯಾಕಂದ್ರೆ, ಇದೀಗ ಇಸ್ರೇಲ್ ಮಿಲಿಟರಿ ನಡೆಸುತ್ತಿರುವ ಒಂದೊಂದು ದಾಳಿ ಕೂಡ ಜಾಗತಿಕ ಮಟ್ಟದಲ್ಲಿ ದೊಡ್ಡ ಕಂಪನ ಮೂಡಿಸುತ್ತಿದೆ. ಅದರಲ್ಲೂ ದಿಢೀರ್ ಅಂತಾ ಲೆಬನಾನ್ ಉತ್ತರ ಭಾಗದ ಮೇಲೂ ದಾಳಿ ನಡೆಸುತ್ತಿರುವ ಇಸ್ರೇಲಿ ಮಿಟಲಿಟರಿ ಏನು ಮಾಡಿದೆ ಗೊತ್ತಾ? ಇದೀಗ ಇಸ್ರೇಲ್ ವಿರುದ್ಧ ಕ್ರಿಶ್ಚಿಯನ್ ಸಮುದಾಯ ರೊಚ್ಚಿಗೇಳಲು ಕಾರಣ ಏನು?

ಇಸ್ರೇಲ್ ಇದೀಗ ಒಂದೇ ಸಮಯಕ್ಕೆ 4 ದೇಶಗಳ ವಿರುದ್ಧ ಘೋರ ಯುದ್ಧ ನಡೆಸುತ್ತಿದೆ. ಈ ಕಾರಣಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಮಧ್ಯ ಪ್ರಾಚ್ಯ ಇದೀಗ ಗ್ಯಾಸ್ ಲೀಕ್ ಆಗಿರುವ ಮನೆಯಂತೆ ಆಗಿದೆ. ಒಂದೇ ಒಂದು ಸಣ್ಣ ಕಿಡಿ ಬಿದ್ದರೂ ಭಗ್.. ಎಂದು ಇಡೀ ಮಧ್ಯಪ್ರಾಚ್ಯ ಭಸ್ಮವಾಗಿ ಹೋಗುವ ಭಯ ಆವರಿಸಿದೆ. ಹೀಗಿದ್ದರೂ ತನ್ನ ಹಠ ಬಿಡದ ಇಸ್ರೇಲ್ ಮಿಲಿಟರಿ ಶತ್ರುಗಳ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ಏನೇನೋ ಮಾಡುತ್ತಿದೆ, ಇಸ್ರೇಲ್ ಮಿಲಿಟರಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಮತ್ತೊಂದು ಮಹಾಯುದ್ಧ ಪಕ್ಕಾ ಎನ್ನುವ ಮಾತು ಕೇಳಿಬರುತ್ತಿದೆ. ಇಂತಹ ಸಮಯದಲ್ಲೇ ಒಂದೇ ದಿನ 21 ಜನ ಇಸ್ರೇಲ್ ಸೇನೆಯ ದಾಳಿಗೆ ಬಲಿ ಆಗಿರುವ ಆರೋಪ ಕೇಳಿ ಬಂದಿದೆ.

Allegedly Israel Military Attack Killed 21 In Lebanon

ಕ್ರಿಶ್ಚಿಯನ್ನರು ಹೆಚ್ಚಾಗಿ ವಾಸ ಮಾಡುವ....

ಅಷ್ಟಕ್ಕೂ ಇದೀಗ ಇಸ್ರೇಲ್ ಸೇನೆ ಕ್ರಿಶ್ಚಿಯನ್ನರು ಹೆಚ್ಚಾಗಿ ವಾಸ ಮಾಡುವ ಲೆಬನಾನ್‌ ದೇಶದ ಉತ್ತರ ಭಾಗದ ಮೇಲೆ ಕೂಡ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟು ದಿನ ಲೆಬನಾನ್ ದಕ್ಷಿಣ ಭಾಗದ ಮೇಲೆ ಮಾತ್ರ ಇಸ್ರೇಲ್ ದಾಳಿ ಮಡಿ ಹಿಜ್ಬುಲ್ಲಾ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಅಂತಾ ಹೇಳುತ್ತಿತ್ತು. ಆದರೆ ದಿಢೀರ್ ಲೆಬನಾನ್ ಉತ್ತರ ಭಾಗದ ಮೇಲೆಯು ಕೂಡ ಭೀಕರ ದಾಳಿ ಆರಂಭವಾಗಿದ್ದು, ಬಾಂಬ್ ಹಾಕಿ ಮಿಸೈಲ್ ಸುರಿದು ದಾಳಿ ಮಾಡಿದ ಆರೋಪ ಇಸ್ರೇಲಿ ಸೇನೆಯ ವಿರುದ್ಧ ಕೇಳಿ ಬಂದಿದೆ.

ಮಧ್ಯಪ್ರಾಚ್ಯದಲ್ಲಿ ಈಗ ಅನಿಶ್ಚಿತ ವಾತಾವರಣ?

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆದಷ್ಟು ಬೇಗನೇ ಯುದ್ಧಕ್ಕೆ ಬ್ರೇಕ್ ಬೀಳಬೇಕಿದೆ. ಇಲ್ಲವಾದರೆ ದಾಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಾಗೇ ಇನ್ನೊಂದು ಕಡೆ ಈ ದಾಳಿ ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಕೈಮೀರಿ ಹೋಗಿ ಇರಾನ್ ಯುದ್ಧಕ್ಕೆ ನೇರ ಎಂಟ್ರಿನ ಕೊಟ್ಟರೆ, ಪರಮಾಣು ಬಾಂಬ್ ಬಳಕೆ ಆಗುತ್ತಾ? ಎಂಬ ಭೀತಿಯೂ ಎದುರಾಗಿದೆ. ಇದು ಮಧ್ಯಪ್ರಾಚ್ಯದ ದೇಶಗಳಲ್ಲಿ ಇದೀಗ ಅನಿಶ್ಚಿತ ವಾತಾವರಣ ಸೃಷ್ಟಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+