Gaza War: ಇಸ್ರೇಲ್ ದಾಳಿಯಲ್ಲಿ 130ಕ್ಕೂ ಹೆಚ್ಚು ಗಾಜಾ ಪ್ರಜೆಗಳು ಬಲಿ?
ರಕ್ತ.. ರಕ್ತ.. ರಕ್ತ.. ಮಧ್ಯಪ್ರಾಚ್ಯ ಭಾಗದಲ್ಲಿ ರಕ್ತಪಾತ ಜೋರಾಗಿದೆ. ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ಜೋರಾಗಿದ್ದು, ನರಳಾಟ ಕೂಡ ಹೆಚ್ಚಾಗಿದೆ. ಎಲ್ಲಿ ನೋಡಿದರೂ ಪೀಸ್ ಆಗಿ ಬಿದ್ದ ಕಟ್ಟಡಗಳು ನಗರದ ತುಂಬಾ ಶವ ಕೊಳೆತ ವಾಸನೆ. ಕುಡಿಯಲು ನೀರು ಸಿಗುವುದಿಲ್ಲ, ತಿನ್ನಲು ಅನ್ನ ಮೊದಲೇ ಇಲ್ಲ. ಎಲ್ಲಾ ಕಡೆ ಬರೀ ಬಾಂಬ್ ಸದ್ದು, ಬಿಟ್ಟರೆ ಸ್ಮಶಾನ ಮೌನ ಎನ್ನುವಂತಾಗಿದೆ. ಇಂತಹ ಸಮಯದಲ್ಲೇ ದಿಢೀರ್ ಇಸ್ರೇಲ್ ದಾಳಿಯಲ್ಲಿ 130ಕ್ಕೂ ಹೆಚ್ಚು ಗಾಜಾ ಪ್ರಜೆಗಳು ಬಲಿ ಆಗಿದ್ದಾರಾ? ಏನಿದು ಗಂಭೀರ ಆರೋಪ?
ಅಂದಹಾಗೆ ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್ ಸೇನೆ & ಹಮಾಸ್ ನಡುವಿನ ಯುದ್ಧ ಪರಿಣಾಮ ಈಗಾಗಲೇ ಭಾಗಶಃ ಗಾಜಾ ನಗರ ಹಾಳಾಗಿ ಹೋಗಿದ್ದು, ಜನರು ಕೂಡ ಅರ್ಧ ಜೀವ ಉಳಿಸಿಕೊಂಡು ನರಳುತ್ತಿದ್ದಾರೆ. ಇದರ ಜೊತೆಗೆ ಸುಮಾರು 40,000ಕ್ಕೂ ಜನರು ಯುದ್ಧಕ್ಕೆ ಬಲಿಯಾದ ಆರೋಪ ಕೇಳಿಬಂದಿದೆ. ಇಂತಹ ಸಮಯದಲ್ಲೇ ಈಗ ಇಸ್ರೇಲ್ ಮತ್ತೊಂದು ಘೋರ ದಾಳಿ ನಡೆಸಿದ್ದು, ಇದರ ಪರಿಣಾಮ 130ಕ್ಕೂ ಹೆಚ್ಚು ಜನರು ಒಂದೇ ಕಡೆ ಜೀವ ಬಿಟ್ಟಿರುವ ಆರೋಪ ಕೇಳಿಬಂದಿದೆ. ಈಗಾಗಲೇ ಯುದ್ಧದ ಬಲೆಯಲ್ಲಿ ಸಿಲುಕಿ ನರಳಿರುವ ಗಾಜಾ ಜನರಿಗೆ ಈ ಸುದ್ದಿ ಮತ್ತೊಂದು ರೀತಿ ಆಘಾತ ನೀಡಿದೆ.

ಜಾಗತಿಕವಾಗಿ ಕೂಡ ತೀವ್ರ ಚರ್ಚೆ
ಬೆಂಕಿ ಹೊತ್ತಿಕೊಂಡಿದೆ, ಜಗತ್ತಿನಾದ್ಯಂತ ಶಾಂತಿ ನಾಶವಾಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಭೂಮಿಯ ಮೇಲೆ ಯುದ್ಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಮನುಷ್ಯರೇ ಈ ಭೂಮಿ ಮೇಲಿನಿಂದ ಸಂಪೂರ್ಣ ನಾಶವಾಗಿ ಹೋಗುವ ಭಯ ಈಗ ಕಾಡುತ್ತಿದೆ. ಯಾಕಪ್ಪಾ ಅಂದ್ರೆ ಈ ಬಾರಿ ಮತ್ತೊಂದು ಮಹಾಯುದ್ಧ ನಡೆದರೆ ಜಗತ್ತು ಸಂಪೂರ್ಣ ನಾಶವಾಗುವುದು ಗ್ಯಾರಂಟಿ. ಇಂತಹ ಸಮಯದಲ್ಲೇ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸಿದ ಭಾರಿ ದೊಡ್ಡ ವಾಯುದಾಳಿ 100ಕ್ಕೂ ಹೆಚ್ಚು ಜನರ ಜೀವ ಕಳೆದಿದೆ ಎಂಬ ಆರೋಪ ಸಂಚಲನ ಸೃಷ್ಟಿಸಿದೆ.












Click it and Unblock the Notifications