Imran Khan House Attack: ನೀನಾ ಪಾಕಿಸ್ತಾನ?: ಇಮ್ರಾನ್ ಖಾನ್ ಮನೆ ಮೇಲೆ ಶೆಲ್ ದಾಳಿ
ಇಸ್ಲಾಮಾಬಾದ್: ಅದೇನು ಪಾಕಿಸ್ತಾನವೋ ಅಥವಾ ಭೂಮಿ ಮೇಲಿನ ನರಕವೋ ಗೊತ್ತಿಲ್ಲ. ಯಾಕಂದ್ರೆ ಆ ದೇಶದಲ್ಲಿ ಯಾರೇ ನ್ಯಾಯದ ಪರ ಮಾತನಾಡಿದರೂ ಜೀವ ತೆಗೆಯದೇ ಬಿಡಲ್ಲ ಅಲ್ಲಿನ ಸೇನೆ ಮತ್ತು ISI. ಇಂತಹ ಆರೋಪಗಳ ನಡುವೆ ಈಗ ಇಮ್ರಾನ್ ಖಾನ್ ಕಥೆಯೂ ಅದೇ ಹಾದಿ ಹಿಡಿದಿದೆ. ಇಮ್ರಾನ್ ಖಾನ್ ಕುಟುಂಬ ಜೀವಂತವಾಗಿ ಉಳಿಯುವುದೇ ಅನುಮಾನವಾಗಿದೆ.
ಇಮ್ರಾನ್ ಖಾನ್ ಅರೆಸ್ಟ್ ಆಗಿ ಜೈಲು ಸೇರುತ್ತಿದ್ದಂತೆ ಪಾಕಿಸ್ತಾನ ಮಿಲಿಟರಿ ಹಾಗೂ ಐಎಸ್‌ಐ ಹೊಸ ಆಟ ಶುರುಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಲಾಹೋರ್‌ನ ಇಮ್ರಾನ್ ಖಾನ್ ಮನೆ ಮೇಲೆ ನಿರಂತರವಾಗಿ ಶೆಲ್ ದಾಳಿ ನಡೆಸಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ ಕೈವಾಡವಿದೆ ಎಂದು ಖಾನ್ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಪರಿಣಾಮ ಪಾಕಿಸ್ತಾನದ ಬೀದಿಗಳಲ್ಲಿ ಇನ್ನಷ್ಟು ರಕ್ತ ಹರಿಯುವುದು ಪಕ್ಕಾ ಆಗಿದೆ. ಇಮ್ರಾನ್ ಖಾನ್ ಹೆಂಡತಿ ಜೀವ ಭಯದಲ್ಲೇ ಒಂಟಿಯಾಗಿ ಮನೆಯಲ್ಲಿ ನರಳುತ್ತಿದ್ದಾರಂತೆ.

ಒಂಟಿ ಮಹಿಳೆ ಮೇಲೆ ಉತ್ತರ ಪೌರುಷ
ಹೌದು, ಪರಿಸ್ಥಿತಿ ಏನೇ ಇರಲಿ ಅಥವಾ ಎಂತಹದ್ದೇ ತಪ್ಪು ನಡೆದಿರಲಿ. ಅದನ್ನ ನೋಡಿಕೊಳ್ಳಲು ಕಾನೂನು ಇದೆ. ಆದರೆ ಪಾಕಿಸ್ತಾನದಲ್ಲಿ ಪಾಕಿ ಸೇನೆ & ಐಎಸ್‌ಐ ಮಾಡಿದ್ಧೇ ರೂಲ್ಸ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿದ್ದಾರೆ ಇಮ್ರಾನ್ ಅಭಿಮಾನಿಗಳು. ಪತಿ ಜೈಲಿನಲ್ಲಿರುವ ಸಂದರ್ಭದಲ್ಲಿ ಇಮ್ರಾನ್ ಪತ್ನಿ ಮೇಲೆ ಪಾಕಿಸ್ತಾನ ಸೇನೆ ಉತ್ತರ ಪೌರುಷ ತೋರಿಸುತ್ತಿದೆಯಾ? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಇಮ್ರಾನ್ ಖಾನ್ ಮನೆ ಮೇಲೆ ಯದ್ವಾತದ್ವ ಗುಂಡು ಹಾರಿಸಿ ಭಯಪಡಿಸಲಾಗುತ್ತಿದೆ.
ನಾಲ್ವರ ಹೆಣ ಬಿದ್ದರೂ ಸಮಾಧಾನ ಇಲ್ವಾ?
ಈಗಾಗಲೇ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಆದರೆ ಹಿಂಸೆ ನಿಯಂತ್ರಿಸಲು ಆಗದ ಪಾಕಿಸ್ತಾನ ಸೇನೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿರುವ ಆರೋಪ ಈಗ ಕೇಳಿಬಂದಿದೆ. ಹೌದು ಭೀಕರ ಹಿಂಸಾಚಾರದಲ್ಲಿ ಒಟ್ಟು ನಾಲ್ವರು ಮೃತಪಟ್ಟರೂ ಪಾಕಿಸ್ತಾನ ಸೇನೆಗೆ ಇನ್ನೂ ನೆಮ್ಮದಿ ಸಿಕ್ಕಿಲ್ವಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗಳ ನಡುವೆ ಒಂಟಿ ಮಹಿಲೆ ಮೇಲೆಯೂ ಭೀಕರವಾಗಿ ಶೆಲ್ ದಾಳಿ ನಡೆಸುತ್ತಿದೆ ನಾಚಿಕೆ ಬಿಟ್ಟ ಪಾಕ್ ಸೇನೆ.
Another attack on Zaman Park with heavy shelling going on right now when only Mrs Khan is there alone with just a couple of domestic staff. What purpose does such an attack serve beyond pure harassment & terrorisation of Khan's wife who is alone with a couple of domestic staff?…
— Shireen Mazari (@ShireenMazari1) May 10, 2023
ಪಾಕಿಸ್ತಾನ ಸೇನೆಯಿಂದ ಕಂಡಲ್ಲಿ ಗುಂಡು
ಇಮ್ರಾನ್ ಖಾನ್ ಕ್ರಿಕೆಟ್ ಆಡುವಾಗ ಎಷ್ಟು ಫೇಮಸ್ ಆಗಿದ್ರೋ, ಈಗಲೂ ಅಷ್ಟೇ ಬೆಂಬಲಿಗರು ಮತ್ತು ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಇಮ್ರಾನ್ ಅರೆಸ್ಟ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಕಾಡ್ಗಿಚ್ಚು ಧಗ ಧಗಿಸುತ್ತಿದೆ. ಆದರೆ ಇದನ್ನ ಕಂಟ್ರೋಲ್ ಮಾಡಲು ಪಾಕ್ ಸೇನೆ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಅಮಾಯಕ ಜನರ ಮೇಲೂ ಗುಂಡು ಹಾರಿಸುತ್ತಾ, ಪ್ರತಿಭಟನೆ ಕಂಟ್ರೋಲ್ ಮಾಡಲು ಉಗ್ರ ದಾರಿ ಕಂಡುಕೊಂಡಿದೆ. ಪಾಕ್ ಸೇನೆ ಹಾರಿಸಿದ ಗುಂಡಿಗೆ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಇಮ್ರಾನ್ 8 ದಿನ ಕಸ್ಟಡಿಗೆ!
ಅಂದಹಾಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನ 8 ದಿನಗಳ ಕಾಲ ಬಂಧನದಲ್ಲಿಡಬಹುದು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಅರೆಸ್ಟ್ ಆದ 1 ದಿನದ ನಂತರ ತೀರ್ಪು ಹೊರಬಿದ್ದಿದೆ. ಈ ಮೂಲಕ ಇಮ್ರಾನ್ ಹೊರಗೆ ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದ್ಕಡೆ ಇಮ್ರಾನ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟು ಉಗ್ರರೂಪ ತಾಳುವ ಎಲ್ಲ ಮುನ್ಸೂಚನೆ ಸಿಗುತ್ತಿದೆ. ಇದು ಪಾಕಿಸ್ತಾನದ ಸಾಮಾನ್ಯ ಪ್ರಜೆಗಳ ನೆಮ್ಮದಿಗೆ ಬೆಂಕಿ ಇಟ್ಟಿದೆ.

ಏನಿದು ಇಮ್ರಾನ್ ವಿರುದ್ಧದ ಕೇಸ್?
ಅಷ್ಟಕ್ಕೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಖಾನ್ ಬೆಂಬಲಿಗರು ಹೇಳುತ್ತಿರುವ ವಿಚಾರವೇ ಬೇರೆ.












Click it and Unblock the Notifications