ಕೊತ ಕೊತ ಕುದಿಯುತ್ತಿದೆ ಮಧ್ಯಪ್ರಾಚ್ಯ: ಬೆಂಕಿ ಆರಿಸುವ ಹೀರೋ ಯಾರು?

ಇಸ್ರೇಲ್ & ಗಾಜಾ ನಡುವೆ ಯುದ್ಧದ ಬೆಂಕಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ವಾರ್ ನಿಲ್ಲಿಸಲು ಯಾರ ಕೈಯಲ್ಲಿ ಕೂಡ ಸಾಧ್ಯ ಇಲ್ಲವಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಹೀಗೆ, ಯುದ್ಧದ ಕೆನ್ನಾಲಿಗೆ ಇಡೀ ಮಧ್ಯಪ್ರಾಚ್ಯಕ್ಕೆ ಚಾಚುತ್ತಿರುವ ಸಮಯದಲ್ಲೇ, ಮತ್ತೊಮ್ಮೆ ಈ ಸ್ಥಳದಲ್ಲೇ ಘೋರ ದಾಳಿಯ ಸದ್ದು ಕೇಳಿಬಂದಿದೆ. ಹೀಗಾಗಿ ಅಮಾಯಕರು ದಾಳಿ ಭೀಕರತೆ ನಲುಗಿ ಹೋಗಿದ್ದು, ಜೀವ ಉಳಿದರೆ ಸಾಕಪ್ಪಾ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೆ ಇದೇ ರೀತಿ ಇಸ್ರೇಲ್ ಸೇನೆ ಮತ್ತಷ್ಟು ಭೀಕರ ದಾಳಿ ನಡೆಸಲು ಸಜ್ಜಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಅಂದಹಾಗೆ ಮಧ್ಯಪ್ರಾಚ್ಯ ಜಾಗತಿಕ ಮಟ್ಟದಲ್ಲಿ ಅತಿ ಮುಖ್ಯವಾದ ಪ್ರದೇಶ. ಯಾಕಂದ್ರೆ ಈ ಜಾಗದಿಂದಲೇ ಜಗತ್ತಿನ ಅತಿ ಮುಖ್ಯ ವಸ್ತು, ಅಂದ್ರೆ ಚಿನ್ನಕ್ಕೆ ಸಮಾನವಾದ ಪೆಟ್ರೋಲ್ & ಡೀಸೆಲ್ ಸೇರಿದಂತೆ ಗ್ಯಾಸ್ ಸಪ್ಲೈ ಆಗುವುದು. ಆದರೆ ಇದೇ ಮಧ್ಯಪ್ರಾಚ್ಯ ಇದೀಗ ಘೋರ ಯುದ್ಧದ ಬೆಂಕಿಗೆ ಸಿಲುಕಿ ನರಳುತ್ತಿದ್ದು, ಹಮಾಸ್ & ಇಸ್ರೇಲ್ ನಡುವೆ ಶುರುವಾದ ಯುದ್ಧ ಪ್ರತಿಯೊಂದು ಕ್ಷಣಕ್ಕೂ ಕೈಮೀರಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಭಯದ ವಾತಾವರಣ, ಜಗತ್ತಿನ ಮೂಲೆ ಮೂಲೆಗೂ ಆವರಿಸಿದ ಸಮಯದಲ್ಲೇ ಮತ್ತೊಮ್ಮೆ ಇಸ್ರೇಲ್ ಸೇನೆ ಭೀಕರ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ!

Allegedly Gaza Strip Once Again In Fear After Israel Military Doing This

ಎಂಟ್ರಿ & ಎಕ್ಸಿಟ್ ದಾರಿಗಳೇ ಬಂದ್!

ವೆಸ್ಟ್‌ಬ್ಯಾಂಕ್‌ ಪ್ರದೇಶದಲ್ಲಿ ಇಸ್ರೇಲ್ ಭಾರಿ ದೊಡ್ಡ ಕಾರ್ಯಾಚರಣೆಗೆ ಕೈಹಾಕಿದೆ. ಹೀಗಾಗಿ ಈ ಭಾಗದಲ್ಲಿ ಮತ್ತೆ ಮತ್ತೆ ರಕ್ತಪಾತ ಹೆಚ್ಚಾಗುತ್ತಿದೆ. ಇದೀಗ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 9 ಪ್ಯಾಲೆಸ್ತೀನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದೆ ಬಂಡುಕೋರ ಸಂಘಟನೆ. ಜೆನಿನ್‌ ನಗರವನ್ನು ಇಸ್ರೇಲ್ ಪಡೆಗಳು ಸುತ್ತುವರಿದಿದ್ದು, ಎಕ್ಸಿಟ್ & ಎಂಟ್ರಿ ದಾರಿಗಳನ್ನೇ ಇದೀಗ ಮುಚ್ಚಲಾಗಿದೆ ಎಂದು ಆರೋಪಿಸಲಾಗಿದೆ.

ಹೀಗೆ ದಾರಿಗಳು ಬಂದ್ ಆದ ಕಾರಣಕ್ಕೆ ಸ್ಥಳೀಯ ಆಸ್ಪತ್ರೆಗಳಿಗೂ ತೆರಳಲು ಆಗುತ್ತಿಲ್ಲ ಎಂದು ಆರೋಪ ಮಾಡಿರುವ ಬಂಡುಕೋರ ಸಂಘಟನೆಯ ನಾಯಕರು, ಮತ್ತೊಂದು ಕಡೆ ನಿರಾಶ್ರಿತರ ಶಿಬಿರಗಳಿಗೆ ಕೂಡ ಭಾರಿ ಹಾನಿ ಆಗಿದೆ ಎಂದು ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಆದರೆ ಕಾರ್ಯಾಚರಣೆ ನಡೆದಿದ್ದು ಯುದ್ಧದ ಆತಂಕ ಹೆಚ್ಚಾಗುವಂತೆ ಮಾಡಿದೆ.

652 ಪ್ಯಾಲೆಸ್ತೀನ್ ಪ್ರಜೆಗಳ ಸಾವು?

ಮತ್ತೊಂದು ಕಡೆ ಗಾಜಾ ಪಟ್ಟಿ ಭಾಗದಲ್ಲಿ ಯುದ್ಧ ಶುರುವಾದ ನಂತರ ವೆಸ್ಟ್‌ಬ್ಯಾಂಕ್‌ ಕೂಡ ಕೊತ ಕೊತ ಕುದಿಯುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಆರೋಪವನ್ನ ಮಾಡಲಾಗುತ್ತಿದೆ. ಹಾಗೇ ಗಾಜಾದಲ್ಲಿ ಯುದ್ಧ ಶುರುವಾದ ನಂತರ, ಇಸ್ರೇಲ್‌ ದಾಳಿಯಿಂದಾಗಿ ವೆಸ್ಟ್‌ಬ್ಯಾಂಕ್‌ ಪ್ರದೇಶದಲ್ಲಿ ಸುಮಾರು 652 ಪ್ಯಾಲೆಸ್ತೀನ್ ಪ್ರಜೆಗಳು ಜೀವ ಬಿಟ್ಟಿದ್ದಾರೆ ಎಂಬ ಆರೋಪವನ್ನ ಸ್ಥಳೀಯ ಆರೋಗ್ಯ ಸಚಿವಾಲಯ ಮಾಡಿದೆ. ಮತ್ತೊಂದು ಕಡೆ ಇಸ್ರೇಲ್ ಸೇನೆ ಮಾತ್ರ ಬಂಡುಕೋರರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+