Gaza War: ಗಾಜಾ ನೆಲದಲ್ಲಿ ನಿಲ್ಲದ ಯುದ್ಧ & ಹಿಂಸಾಚಾರ, 69,000 ಜೀವಗಳು ಬಲಿ?
ಗಾಜಾ ನೆಲದಲ್ಲಿ ದೊಡ್ಡ ಹಿಂಸಾಚಾರ ಶುರುವಾಗಿ ಈಗಾಗಲೇ ಹತ್ತಾರು ಸಾವಿರ ಜನರ ಜೀವವೇ ಹೋಗಿದೆ. ಇನ್ನೇನು ಗಾಜಾ ಯುದ್ಧಕ್ಕೆ ಬ್ರೇಕ್ ಬಿತ್ತು ಅನ್ನುವಾಗಲೇ ಮತ್ತೆ ಫೈಟಿಂಗ್ ಶುರುವಾಗಿ ಜನರು ಪರದಾಡುತ್ತಿದ್ದಾರೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ತಿಕ್ಕಾಟದಲ್ಲಿ ಸಿಲುಕಿ ಸಾಮಾನ್ಯ ಜನರು ನರಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳ ನಡುವೆ, ಗಾಜಾ ನೆಲದಲ್ಲಿ ನಿಲ್ಲದ ಯುದ್ಧ & ಹಿಂಸಾಚಾರ, 69,000 ಜೀವಗಳು ಬಲಿ?
2 ವರ್ಷಗಳ ಹಿಂದೆ ಶುರುವಾಗಿದ್ದ ಇಸ್ರೇಲ್ & ಗಾಜಾ ನಡುವಿನ ಘೋರ ಕದನ ಇಂದಿಗೆ ಕೂಡ ಮುಕ್ತಾಯವಾಗಿಲ್ಲ. ಇಸ್ರೇಲ್ ಸೇನೆ ಗಾಜಾ ನೆಲದಲ್ಲಿ ಹಮಾಸ್ ವಿರುದ್ಧ ಕಾರ್ಯಾಚರಣೆ ನಡೆಸುವ ನೆಪ ಹೇಳುತ್ತಾ ಸಾಮಾನ್ಯ ಜನರ ಜೀವ ಬಲಿ ಪಡೆಯುತ್ತಿರುವ ಆರೋಪ ಕೇಳಿಬರುತ್ತಿದೆ. ಆದರೆ ಯಾವುದಕ್ಕೂ ಕೇರ್ ಮಾಡದೆ ಮುಂದೆ ನುಗ್ಗುತ್ತಿರುವ ಇಸ್ರೇಲ್ ಮಿಲಿಟರಿ ಮತ್ತಷ್ಟು ದಾಳಿಯನ್ನ ನಡೆಸುತ್ತಿದೆ. ಹೀಗೆ ಹಿಂಸೆ ನಿಲ್ಲದ ಕಾರಣ ಇದೀಗ 69,000 ಜೀವಗಳು ಬಲಿಯಾಗಿರುವ ಆರೋಪ ಕೇಳಿಬಂದಿದೆ. ಈ ಪೈಕಿ ಮಕ್ಕಳು & ಮಹಿಳೆಯರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರಂತೆ. ಗಾಜಾ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಲೆಕ್ಕ ನೀಡಿ, ಗಂಭೀರ ಆರೋಪ ಮಾಡಿದ್ದಾರೆ.

ನಿಂತಿದ್ದ ಯುದ್ಧ ಮತ್ತೆ ಶುರುವಾಗಿದ್ದು ಏಕೆ?
ಅಂದಹಾಗೆ ಇಸ್ರೇಲ್ & ಗಾಜಾ ನಡುವಿನ ವಾರ್ ನಿಂತು ಹೋಗಿತ್ತು, ಸ್ವತಃ ಅಮೆರಿಕ ಅಧ್ಯಕ್ಷರ ಎಂಟ್ರಿಯಿಂದ ಯುದ್ಧಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಮಾತುಕತೆ ಮುರಿದುಬಿದ್ದ ಕಾರಣ ಈಗ ಮತ್ತೆ ಹಿಂಸೆ ಭುಗಿಲೆದ್ದಿದೆ. ಈ ಮೂಲಕ ಗಾಜಾ ನೆಲ ಮತ್ತಷ್ಟು ಕೆಂಪಾಗಿದೆ & ರಕ್ತ ಚೆಲ್ಲಾಡುತ್ತಿದೆ. ಹೀಗಾಗಿ ಸ್ಥಳೀಯರು ಜೀವ ಉಳಿಸಿಕೊಳ್ಳಲು ಒದ್ದಾಡುವ ವಾತಾವರಣ ನಿರ್ಮಾಣವಾಗಿದೆ.
ಜಗತ್ತಿನಾದ್ಯಂತ ತೀವ್ರ ಆಕ್ರೋಶ...
ಒಟ್ನಲ್ಲಿ ಯುದ್ಧ & ಹಿಂಸೆ ಅಮಲು ಕಡಿಮೆ ಆಗುತ್ತಿದೆ, ಮನುಷ್ಯರು ಕ್ರಮೇಣ ಮತ್ತೆ ಮನುಷ್ಯತ್ವ ತೋರಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿ ಹೋಗಿದೆ. 2023 ಅಕ್ಟೋಬರ್ 07 ಶನಿವಾರ ಶುರುವಾದ ಇಸ್ರೇಲ್, ಹಮಾಸ್ ನಡುವಿನ ಯುದ್ಧ ಸರಿಯಾಗಿ 2 ವರ್ಷ ಪೂರೈಸಿದ ಬೆನ್ನಲ್ಲೇ ದಿಢೀರ್ ಯುದ್ಧಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೆದಿತ್ತು. ಆದರೆ ಅದೆಲ್ಲಾ ಮತ್ತೆ ಸುಳ್ಳಾಗಿದ್ದು, ಗಾಜಾ ನೆಲದಲ್ಲಿನ ಲಕ್ಷ ಲಕ್ಷ ನಿವಾಸಿಗಳು ಯುದ್ಧದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಜಗತ್ತಿನಾದ್ಯಂತ ಮೊಳಗುತ್ತಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications