ಇಸ್ರೇಲ್ ಸೈನಿಕರ ಹಾವಳಿಗೆ ಹೆದರಿ ಊರು ಬಿಟ್ಟು ಓಡಿ ಹೋದ 70,000 ಜನ?
ಇಸ್ರೇಲ್ ತನ್ನ ದಾಳಿಯನ್ನ ಮತ್ತಷ್ಟು ಹೆಚ್ಚಿಸುವ ಮೂಲಕ ಪ್ಯಾಲೆಸ್ತೀನ್ ಮೇಲೆ & ಗಾಜಾ ಪಟ್ಟಿ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಮುಂದಾದಂತೆ ಕಾಣುತ್ತಿದೆ. ಅದ್ರಲ್ಲೂ ಇಸ್ರೇಲ್ ಇದೀಗ ದಕ್ಷಿಣ ಗಾಜಾ ಪಟ್ಟಿಯ ಪ್ರದೇಶ ಖಾನ್ ಯೂನಿಸ್ ನಗರದ ಮೇಲೆ ಭೀಕರ ಅಟ್ಯಾಕ್ ಆರಂಭ ಮಾಡಿದೆ. ಹೀಗೆ ಇಸ್ರೇಲ್ ಸೇನೆ ದಾಳಿ ಆರಂಭ ಮಾಡಿದ್ದರಿಂದ ಸುಮಾರು 70,000ಕ್ಕೂ ಹೆಚ್ಚು ಜನ ಊರು ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸರಿಯಾಗಿ 10 ತಿಂಗಳ ಹಿಂದೆ ಆರಂಭ ಆಗಿದ್ದ ಹಮಾಸ್ & ಇಸ್ರೇಲ್ ವಾರ್ ಈಗಾಗಲೇ ಗಾಜಾ ಪಟ್ಟಿ ಪ್ರದೇಶವನ್ನ ಬಹುತೇಕ ಹಾಳುಮಾಡಿದೆ. ಹೀಗಾಗಿ ಜನರು ಕೂಡ ಪರದಾಡುತ್ತಿದ್ದಾರೆ ಎಂಬ ಆಕ್ರೋಶ ಮೊಳಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ, ಪರಿಸ್ಥಿತಿ ನಿಭಾಯಿಸಲು ಇದೀಗ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಸಣ್ಣ ಸಣ್ಣ ಬಿಡಾರ ಹಾಕಿಕೊಂಡು ಲಕ್ಷಾಂತರ ಜನ ಈಗ ಬದುಕುತ್ತಿದ್ದಾರೆ. ಸರಿಯಾಗಿ ಅನ್ನ & ನೀರು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದಾಗಲೇ ಇಸ್ರೇಲ್ ತನ್ನ ದಾಳಿಯನ್ನ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆ ಮಾಡುತ್ತಿದೆ, ಇದರಿಂದ ವಿನಾಶ ಗ್ಯಾರಂಟಿ ಎಂಬ ಆರೋಪ ಕೇಳಿಬಂದಿದೆ.

ಇಸ್ರೇಲ್ ಸೇನೆಯಿಂದ ದಿಢೀರ್ ದಾಳಿ?
ಅಕ್ಟೋಬರ್ 7, 2023 ರಂದು ಶುರುವಾದ ಹಮಾಸ್ & ಇಸ್ರೇಲ್ ಯುದ್ಧ ಈಗಾಗಲೇ ಹತ್ತಿರ ಹತ್ತಿರ 40 ಸಾವಿರ ಜನರನ್ನು ಬಲಿ ಪಡೆದಿದೆ ಎಂಬ ಆರೋಪ ಇದೆ. ಹೀಗಿದ್ದಾಗ ಮತ್ತೊಮ್ಮೆ ತನ್ನ ದಾಳಿಯ ದಿಕ್ಕು ಬದಲಾಯಿಸಿರುವ ಇಸ್ರೇಲ್ ಸೇನೆ, ಹಮಾಸ್ ನೆಲೆಗಳನ್ನ ಗುರಿಯಾಗಿಸಿ ಬೇರೆ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿರುವುದಾಗಿ ಹೇಳಿದೆ. ಆದರೆ ಇಲ್ಲೂ ಅಮಾಯಕರ ಜೀವನ ಹಾಳಾಗಿ ಹೋಗುತ್ತಿದೆ ಎಂಬ ಆಕ್ರೋಶ ಮೊಳಗಿದೆ. ಗಾಜಾ ಪಟ್ಟಿಯ ದಕ್ಷಿಣ ಭಾಗ ಖಾನ್ ಯೂನಿಸ್ ನಗರದ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ ಎಂದು ಆರೋಪಿಸಲಾಗಿದೆ
ಹಮಾಸ್ ಮುಖ್ಯಸ್ಥನಿಗೆ ಹುಡುಕಾಟ?
ಅದರಲ್ಲೂ ಇತ್ತೀಚೆಗೆ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆ ಮಾಡಲಾಗಿತ್ತು. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಇರಾನ್ ಅಧ್ಯಕ್ಷರ ಪ್ರಮಾಣ ವಚನ ಹಿನ್ನೆಲೆ ಅಲ್ಲಿಗೆ ತೆರಳಿದ್ದ ಸಮಯದಲ್ಲೇ ಕೊಲೆ ಮಾಡಲಾಗಿದೆ ಎಂಬ ಆರೋಪ ಇತ್ತು. ಹೀಗೆ ಹತ್ಯೆ ನಡೆದ ನಂತರ, ಹಮಾಸ್ ಸಂಘಟನೆಗೆ ಹೊಸ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು. ಹೊಸ ಮುಖ್ಯಸ್ಥನಿಗಾಗಿ ಇದೀಗ ಇಸ್ರೇಲ್ ಸೇನೆ ಹುಡುಕಾಟ ಆರಂಭ ಮಾಡಿದೆ ಎನ್ನಲಾಗಿದೆ.
ಹಮಾಸ್ ನೂತನ ಮುಖ್ಯಸ್ಥನಾಗಿ ನೇಮಕಗೊಂಡಿರುವ ಯಾಹ್ಯಾ ಸಿನ್ವರ್, ಯೂನಿಸ್ ಖಾನ್ ನಗರದ ಸುರಂಗಗಳಲ್ಲಿ ಅಡಿಗಿರುವ ಮಾಹಿತಿ ಹಿನ್ನೆಲೆ ಇಸ್ರೇಲ್ ಈ ರೀತಿ ದಾಳಿ ಮಾಡುತ್ತಿದೆ ಎಂದು ಹೇಳಲಾಗಿದೆ. ಆದರೆ ಇಬ್ಬರ ಕಿತ್ತಾಟದಲ್ಲಿ ಅಮಾಯಕರ ಜೀವ ಹೋತ್ತಿರುವುದು, ಜಗತ್ತಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೇ ಇಸ್ರೇಲ್ ನಡೆಸುತ್ತಿರುವ ದಾಳಿ ಕುರಿತು ಜಾಗತಿಕ ಮಟ್ಟದಲ್ಲೂ ಇದೀಗ ದೊಡ್ಡ ಚರ್ಚೆ ನಡೆಯುತ್ತಿದೆ.












Click it and Unblock the Notifications