41 ಜನರ ಜೀವ ಬಲಿಪಡೆದ ಕ್ಷಿಪಣಿ ದಾಳಿ: ಉಕ್ರೇನ್ ದೇಶದಲ್ಲಿ ಆಕ್ರಂದನ..

ಉಕ್ರೇನ್ & ರಷ್ಯಾ ಯುದ್ಧದ ಭೀಕರತೆಗೆ ಮತ್ತೆ ಮತ್ತೆ ಅಮೂಲ್ಯ & ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅದರಲ್ಲೂ ತನ್ನ ಮೇಲೆ ಪದೇ ಪದೇ ಅಟ್ಯಾಕ್ ಮಾಡುತ್ತಿದೆ ಉಕ್ರೇನ್ ಸೇನೆ ಎಂದು ಆಕ್ರೋಶ ಹೊರ ಹಾಕುತ್ತಿದ್ದ ರಷ್ಯಾ ಮಿಲಿಟರಿ, ಇದೀಗ ದಿಢೀರ್ ಭಾರಿ ದೊಡ್ಡದಾಗಿ ದಾಳಿ ಆರಂಭ ಮಾಡಿದೆ. ಹೀಗಾಗಿ ಉಕ್ರೇನ್ ದೇಶದ ನೆಲ ಛಿದ್ರ ಛಿದ್ರವಾಗಿ ಹೋಗುತ್ತಿದ್ದು, ಇದೀಗ ರಷ್ಯಾ ಮಿಲಿಟರಿ ನಡೆಸಿದ ಅತ್ಯಂತ ಡೆಡ್ಲಿ ಕ್ಷಿಪಣಿ ದಾಳಿಯಲ್ಲಿ 41 ಜನ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಗತ್ತಿನಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ, ಒಂದು ಕಡೆ ಸಾಂಕ್ರಾಮಿಕ ರೋಗಗಳ ಕಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಹಾಗೇ ಇನ್ನೊಂದು ಕಡೆ ಮನುಷ್ಯರು ಯುದ್ಧ ಮಾಡ್ತಿದ್ದಾರೆ. ರಷ್ಯಾ & ಉಕ್ರೇನ್ ನಡುವಿನ ಯುದ್ಧ ಶುರುವಾಗಿ 2 ವರ್ಷ ಮುಗಿದಿದೆ. ಕೆಲವೇ ದಿನಗಳಲ್ಲಿ 3ನೇ ವರ್ಷ ಮುಗಿಸಿ 4ನೇ ವರ್ಷಕ್ಕೆ ಕಾಲಿಡಲಿದೆ. ಹೀಗಿದ್ರೂ ಇಬ್ಬರ ನಡುವೆ ತಿಕ್ಕಾಟ ಶಾಂತವಾಗಿಲ್ಲ ಅದರ ಬದಲಾಗಿ, ದಿನದಿಂದ ದಿನಕ್ಕೆ ರಷ್ಯಾ & ಉಕ್ರೇನ್ ಮಧ್ಯೆ ಹಿಂಸಾಚಾರ ಹೆಚ್ಚಾಗುತ್ತಿದೆ.

Allegedly 41 People Died After Deadly Missile Attack In Ukraine

41 ಅಮಾಯಕರು ದಾಳಿಗೆ ಬಲಿ?

ರಷ್ಯಾ & ಉಕ್ರೇನ್ ನಡುವೆ ಶಾಂತಿ ಮಾತುಕತೆ ಮೂಲಕ ಸಮಸ್ಯೆ ಸರಿ ಮಾಡಲು ಪ್ರಪಂಚ ಪ್ರಯತ್ನ ಮಾಡುತ್ತಿದೆ, ಆದರೆ ಇಬ್ಬರೂ ಹಠ ಮಾಡುತ್ತಿರುವ ಪರಿಣಾಮ ಯುದ್ಧ ನಿಲ್ಲುತ್ತಿಲ್ಲ. ಇಬ್ಬರು ಹಾವು & ಮುಂಗಿಸಿ ರೀತಿ ತಿಕ್ಕಾಟ ನಡೆಸುತ್ತಿದ್ದು ಇದೀಗ ರಷ್ಯಾ ಸೇನೆ ಉಕ್ರೇನ್‌ ನಗರಗಳ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಕ್ಷಿಪಣಿ, ಬಾಂಬ್ & ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ಸ್ಫೋಟಕ ಬಳಕೆ ಮಾಡಿ ದಾಳಿ ಮಾಡಲಾಗುತ್ತಿದೆ. ಹೀಗಾಗಿ ಈಗ ರಷ್ಯಾ ಸೇನೆ ಕ್ರೂರವಾಗಿ ನಡೆಸಿದ ದಾಳಿಗೆ ಒಂದೆ ಬಾರಿಗೆ ಸುಮಾರು 41 ಅಮಾಯಕರು ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಿದ್ರೆ ಈ ಘಟನೆ ನಡೆದಿದ್ದು ಎಲ್ಲಿ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ರಷ್ಯಾ ವಿರುದ್ಧ ರಿವೇಂಜ್ ಪಕ್ಕಾ?

ಅಂದಹಾಗೆ ಉಕ್ರೇನ್‌ನ ಮಧ್ಯ & ಪೂರ್ವ ಪ್ರದೇಶದ ಪೋಲ್ಟವಾ ನಗರದಲ್ಲಿ ಶಾಲೆ & ಕಾಲೇಜು ಕಟ್ಟಡಗಳ ಮೇಲೆಯೇ ರಷ್ಯಾ ಸೇನೆ ಭೀಕರ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಹೀಗೆ ಹತ್ತಿರದ ಆಸ್ಪತ್ರೆ ಮೇಲೂ ರಷ್ಯಾ ಎರಡು ಬ್ಯಾಲೆಸ್ಟಿಕ್‌ ಕ್ಷಿಪಣಿಗಳಿಂದ ಅಟ್ಯಾಕ್ ಮಾಡಿದೆ, ಎಂದು ಗಂಭೀರ ಆರೋಪ ಮಾಡಲಾಗಿದೆ. ಹೀಗಾಗಿ ಸುಮಾರು 41 ಜನರು ಮೃತಪಟ್ಟಿದ್ದು 180 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ರಷ್ಯಾ ವಿರುದ್ಧವೇ ಇದೀಗ ಉಕ್ರೇನ್ ರಿವೇಂಜ್ ತೆಗೆದುಕೊಳ್ಳಲು ಕಾಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+