Gaza War: 19 ಜನರನ್ನು ಬಲಿ ಪಡೆದ ಇಸ್ರೇಲ್ ದಾಳಿ, ಗಾಜಾ ಪಟ್ಟಿಯಲ್ಲಿ 24 ಲಕ್ಷ ಜನ ವಿಲವಿಲ

ಇಸ್ರೇಲ್ ಸೇನೆಯಿಂದ ಗಾಜಾ ಪಟ್ಟಿ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಈಗಾಗಲೇ ಪೀಸ್ ಪೀಸ್ ಆಗಿರುವ ಗಾಜಾ ಪಟ್ಟಿ ನಗರದಲ್ಲಿ ಮತ್ತಷ್ಟು ಹಿಂಸಾಚಾರ ಭುಗಿಲೆದ್ದಿದೆ. ಪರಿಣಾಮ, ಇಂದು ಮತ್ತೊಮ್ಮೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ನಂತರ 19 ಜನರು ಒಂದೇ ದಿನದಲ್ಲಿ ಗಾಜಾ ಪಟ್ಟಿಯಲ್ಲಿ ಬಲಿಯಾಗಿರುವ ಆರೋಪ ಮಾಡಲಾಗಿದ್ದು, ಹಸಿವು ಹಾಗೂ ಗಾಯಗೊಂಡ ಜನರ ಒದ್ದಾಟ ಮುಗಿಲು ಮುಟ್ಟುತ್ತಿದೆ.

ಹಮಾಸ್ ಮಾಡಿದ್ದ ತಪ್ಪಿಗೆ ಇಸ್ರೇಲ್ ಸೇನೆಯು ಗಾಜಾ ಪಟ್ಟಿ ವಿರುದ್ಧ ಯುದ್ಧ ಘೋಷಣೆ ಮಾಡಿದ್ದು, ಈಗಾಗಲೇ ಈ ಯುದ್ಧ ಒಂದೂವರೆ ವರ್ಷಗಳ ಪಯಣ ಮುಗಿಸಿದೆ. ಆದರೂ ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕೆಲವು ದಿನಗಳ ಕಾಲ ಯುದ್ಧ ನಿಲ್ಲಿಸಿ ಭರವಸೆ ಮೂಡಿಸಿದ್ದರೂ, ಆ ನಂತರ ಮತ್ತೆ ಭೀಕರ ದಾಳಿ ಆರಂಭವಾಗಿ ಗಾಜಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದೆ. ಹೀಗಾಗಿ ಗಾಜಾ ಪ್ರಜೆಗಳು ಜೀವ ಉಳಿಸಿಕೊಳ್ಳಲು ಬೇರೆ ಬೇರೆ ಜಾಗಕ್ಕೆ ಓಡಿ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟಾದರೂ ಅವರಿಗೆಲ್ಲಾ ಓಡಿ ಹೋಗಲು ಕೂಡ ದಾರಿ ಸಿಗದಾಗಿದೆ.

Allegedly 19 Killed In Gaza After Israel Military New Attack

ಗಾಜಾ ಸರ್ವನಾಶ, ಮುಂದೇನು ಪರಿಸ್ಥಿತಿ?

ಈಗಾಗಲೇ ಗಾಜಾ ಪಟ್ಟಿಯಲ್ಲಿ ನಡೆದಿರುವ ದಾಳಿಯನ್ನು ಗಮನಿಸಿದರೆ ಇನ್ನೂ ಹಲವಾರು ವರ್ಷಗಳ ಕಾಲ ಗಾಜಾ ಪಟ್ಟಿ ಸುಧಾರಣೆ ಕಾಣುವುದೇ ಅನುಮಾನವಾಗಿದೆ. ಹೀಗಾಗಿ ಅಲ್ಲಿ ಜನರು ಮನೆ ಕಳೆದುಕೊಂಡು, ಬೀದಿಗೆ ಬಿದ್ದು ನರಳುತ್ತಿದ್ದಾರೆ. 2023ರ ಅಕ್ಟೋಬರ್ 7 ರಂದು ಶುರುವಾಗಿದ್ದ ಯುದ್ಧ ಈಗಾಗಲೇ 1 ವರ್ಷ ಮುಗಿಸಿ 2ನೇ ವರ್ಷಕ್ಕೆ ಕಾಲು ಇಟ್ಟಿದೆ. ಹೀಗೆ ಒಂದು ಕಡೆ ಯುದ್ಧ ಮುಂದುವರಿದರೆ, ಇನ್ನೊಂದು ಕಡೆ ಲಕ್ಷ ಲಕ್ಷ ಮನೆಗಳು & ಕಟ್ಟಡಗಳು ಕುಸಿದು ಬಿದ್ದಿವೆ. ಇದೇ ಸಮಯದಲ್ಲಿ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಹಾಗೇ ಸುಮಾರು 24 ಲಕ್ಷ ಜನರು ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣ ಆಗಿದೆ.

ರಕ್ತ, ಹಿಂಸೆ, ಯುದ್ಧ, ಗಲಾಟೆ...

ಒಟ್ನಲ್ಲಿ ರಕ್ತ, ಹಿಂಸೆ, ಯುದ್ಧ, ಗಲಾಟೆ... ಅಬ್ಬಬ್ಬಾ.. ಏನಪ್ಪಾ ಬರೀ ಇದೇ ಆಗೋಯ್ತಾ? ಅಂತಾ ನಿಮಗೂ ಅನಿಸಿರಬಹುದು. ಯಾಕೆ ಅಂದ್ರೆ ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ಯುದ್ಧಗಳು ಶುರುವಾಗಿವೆ. ಈ ಪೈಕಿ ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಈ ಘನಘೋರ ಯುದ್ಧ ಕ್ಷಣಕ್ಷಣಕ್ಕೂ ಮಾನವೀಯತೆ ಸಾಯಿಸುವ ಹಂತಕ್ಕೆ ಹೋಗುತ್ತಿದೆ. ಉತ್ತರ ಗಾಜಾ ಪಟ್ಟಿ ಪ್ರದೇಶದ ಆಸ್ಪತ್ರೆಗಳು ಕೂಡ ನಾಶವಾಗಿವೆ. ಹೀಗಾಗಿ ಜನ ಬೀದಿಯಲ್ಲಿ ಟೆಂಟ್ ಹಾಕಿಕೊಂಡು ಬದುಕುವ ಸ್ಥಿತಿ ಇದೆ. ಹೀಗಿದ್ದರೂ ದಾಳಿ ಮಾತ್ರ ನಿಲ್ಲದೆ ಮುಂದುವರಿದಿದ್ದು, ಭಯ ಹೆಚ್ಚು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+