Ukraine War: ನಿಲ್ಲದ ಸಮರ.. ರಷ್ಯಾ ದಾಳಿಗೆ 11 ಜನರ ಜೀವವೇ ಹೋಯ್ತು..

ರಷ್ಯಾ & ಉಕ್ರೇನ್ ಒಬ್ಬರನ್ನು ಮತ್ತೊಬ್ಬರು ಸಂಪೂರ್ಣ ನಾಶ ಮಾಡುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ರಷ್ಯಾ & ಉಕ್ರೇನ್ ಜಿದ್ದಿಗೆ ಬಿದ್ದು ಇದೀಗ ಯುದ್ಧ ಮಾಡುತ್ತಿವೆ. ಅದರಲ್ಲೂ ಉಕ್ರೇನ್ ಮೇಲೆ ರಷ್ಯಾ ಸೇನೆ ಪದೇ ಪದೇ ಅಟ್ಯಾಕ್ ಮಾಡಿ ಜೀವ ತೆಗೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪಗಳ ನಡುವೆ ರಷ್ಯಾ ಸೇನೆ ಇದೀಗ ಮತ್ತೆ ಅಂತಹದ್ದೇ ಘೋರ ದಾಳಿ ನಡೆಸಿದೆ.

ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ, ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲಿ ನ್ಯಾಟೋ-ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ನೀಡ್ತಿವೆ. ಇದು ಹಲವು ವರ್ಷಗಳಿಂದ ಕೂಡ ಬಹಿರಂಗವಾಗಿ ನಡೆಯುತ್ತಿರುವುದು, ರಷ್ಯಾ ದೇಶವನ್ನು ಕೆರಳಿಸಿದೆ.

Allegedly 11 People Killed In Ukraine After Russia Deadly Attack

ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಎಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ ಎನ್ನುವ ಆರೋಪಗಳು ಕೂಡ ಕೇಳಿಬಂದಿದೆ. ಈಗಾಗಲೇ ಅಮೆರಿಕ 4 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಈ ಎಲ್ಲಾ ಬೆಳವಣಿಗೆ ರಷ್ಯಾ ದೇಶವನ್ನು ಕೆರಳಿಸಿದ್ದು, ಉಕ್ರೇನ್ ವಿರುದ್ಧ ಕಂಡ ಕಂಡಂತೆ ದಾಳಿ ನಡೆಸುತ್ತಿದೆ. ಇಂದು ಕೂಡ ಅದೇ ರೀತಿ ಅಟ್ಯಾಕ್ ಆಗಿದೆ. ಅಲ್ಲದೆ ಈ ದಾಳಿಯಲ್ಲಿ ಅಮಾಯಕರ ಜೀವ ಹೋಗೇ ಬಿಟ್ಟಿದೆ.

ರಷ್ಯಾ ದಾಳಿ ಮಾಡಿದ್ದು ಎಲ್ಲಿ?

ಅಂದಹಾಗೆ ಇದೀಗ ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರದೇಶದ ಕೊಸ್ತಿಯಾಂತಿನಿವ್ಕ ನಗರದ ಶಾಪಿಂಗ್‌ ಮಾಲ್‌ ಮೇಲೆ ಭೀಕರ ದಾಳಿ ನಡೆದಿದೆ. ಕೊಸ್ತಿಯಾಂತಿನಿವ್ಕ ನಗರದ ಶಾಪಿಂಗ್‌ ಮಾಲ್‌ ಒಂದು ಸಾಕಷ್ಟು ಬ್ಯುಸಿ ಆಗಿರುತ್ತಿದ್ದು, ಇದೇ ಮಾಲ್ ಗುರಿಯಾಗಿಸಿ ಇದೀಗ ರಷ್ಯಾ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಈ ದಾಳಿಯಲ್ಲಿ ಇದೀಗ 11 ಜನ ಜೀವ ಬಿಟ್ಟಿದ್ದಾರೆ. ಈ ಮೂಲಕ ಪರಿಸ್ಥಿತಿ ಮತ್ತಷ್ಟು ಕೈಮೀರುತ್ತಿದೆ. ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ, 11 ಮಂದಿ ಮೃತಪಟ್ಟು 44 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿಯನ್ನ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಉಕ್ರೇನ್‌ನ ಸೈನಿಕರು ತನ್ನ ಗಡಿಯ ಒಳಗೆ ನುಗ್ಗಿ ದಾಳಿ ಮಾಡಿದ್ದಕ್ಕೆ, ಇದೀಗ ರಷ್ಯಾ ಸೇನೆ ರಿವೇಂಜ್ ತೆಗೆದುಕೊಂಡಿದೆ ಎನ್ನಲಾಗಿದೆ.

ಉಕ್ರೇನ್‌ಗೆ ಬರುತ್ತಿದೆ ಆನೆ ಬಲ!

ಮತ್ತೊಂದು ಕಡೆ ಸದ್ದೇ ಇಲ್ಲದೆ ಎಫ್‌-16 ಯುದ್ಧ ವಿಮಾನಗಳು ಇದೀಗ ಉಕ್ರೇನ್ ನೆಲಕ್ಕೂ ಬಂದು ಇಳಿದಿವೆ. ಉಕ್ರೇನ್ ವಾಯು ರಕ್ಷಣೆಗಾಗಿ ಎಫ್‌-16 ಯುದ್ಧ ವಿಮಾನ ಕೊಡಿ ಅಂತಾ ಝೆಲೆನ್‌ಸ್ಕಿ ಪದೇ ಪದೇ ಬೇಡಿಕೆ ಸಲ್ಲಿಸುತ್ತಿದ್ದರು. ಯುದ್ಧ ಆರಂಭವಾದ ದಿನದಿಂದಲೂ, ಇದೇ ಡಿಮ್ಯಾಂಡ್ ಇತ್ತು. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳು ಈ ಬೇಡಿಕೆಗೆ, ಅಸ್ತು ಎನ್ನಲು ತಡ ಮಾಡಿದ್ದವು. ಹೀಗಿದ್ದಾಗ, ಉಕ್ರೇನ್‌ಗೆ ಅಮೆರಿಕ ನಿರ್ಮಿತ ಎಫ್‌-16 ಯುದ್ಧ ವಿಮಾನ ನೀಡಲಾಗಿದೆ. ಇದು ಉಕ್ರೇನ್ ಬಲವನ್ನು ಹೆಚ್ಚಿಸುವ ಪ್ರಯತ್ನವಾಗಿದೆ ಎಂದು, ವಿಶ್ಲೇಷಣೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+