ಏಲಿಯನ್‌ಗಳಿರುವುದು ನಿಜ, ಅದು ಡೊನಾಲ್ಡ್‌ ಟ್ರಂಪ್‌ಗೆ ಗೊತ್ತು!

ವಾಷಿಂಗ್ಟನ್, ಡಿಸೆಂಬರ್ 9: ಭೂಗ್ರಹದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಅನ್ಯಗ್ರಹ ಜೀವಿಗಳ ಅಸ್ತಿತ್ವ ಕೇವಲ ಕಲ್ಪನೆಯಲ್ಲ. ಏಲಿಯನ್ಸ್‌ಗಳಿರುವುದು ನಿಜ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅದು ತಿಳಿದಿದೆ ಎಂದು ಇಸ್ರೇಲ್‌ನ ಬಾಹ್ಯಾಕಾಶ ಕೇಂದ್ರದ ಮಾಜಿ ಮುಖ್ಯಸ್ಥ ಹೈಮ್ ಎಷೆಡ್ ಹೇಳಿದ್ದಾರೆ.

ಏಲಿಯನ್‌ಗಳು ಅಮೆರಿಕ ಮತ್ತು ಇಸ್ರೇಲ್ ಜತೆ ರಹಸ್ಯವಾಗಿ ಸಂಪರ್ಕದಲ್ಲಿವೆ. ಆದರೆ ಮನುಕುಲ ಇನ್ನೂ ಸಿದ್ಧವಿಲ್ಲದ ಕಾರಣ ಅವುಗಳ ಅಸ್ತಿತ್ವವನ್ನು ಗೋಪ್ಯವಾಗಿ ಇರಿಸಲಾಗಿದೆ ಎಂದು ಸುಮಾರು 30 ವರ್ಷಗಳ ಕಾಲ ಇಸ್ರೇಲ್‌ನ ಬಾಹ್ಯಾಕಾಶ ಭದ್ರತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದ 87 ವರ್ಷದ ಎಷೆಡ್ ತಿಳಿಸಿದ್ದಾರೆ.

ಇಸ್ರೇಲ್‌ನ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ಅನ್ಯಗ್ರಹದಲ್ಲಿನ ಜೀವಿಗಳ ಅಸ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಅಮೆರಿಕ ಸರ್ಕಾರ ಮತ್ತು ಏಲಿಯನ್‌ಗಳ ಗ್ಯಾಲಾಕ್ಟಿಕ್ ಫೆಡರೇಷನ್ ನಡುವೆ ಒಪ್ಪಂದ ಕೂಡ ನಡೆದಿದೆ. ಈ ಬ್ರಹ್ಮಾಂಡದ ವಿನ್ಯಾಸ ಬಗ್ಗೆ ಸಂಶೋಧನೆ ಮಾಡಲು ಮತ್ತು ತಿಳಿದುಕೊಳ್ಳಲು ಏಲಿಯನ್‌ಗಳು ಬಯಸಿರುವುದರಿಂದ ಅಮೆರಿಕ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಮಂಗಳ ಗ್ರಹದಲ್ಲಿ ಅಮೆರಿಕದ ರಹಸ್ಯ ನೆಲಮಾಳಿಗೆಯ ನಿರ್ಮಾಣಕ್ಕೆ ಕೂಡ ಅದು ಸಹಕಾರ ನೀಡಿದೆ ಎಂದು ಹೇಳಿದ್ದಾರೆ. ಮುಂದೆ ಓದಿ.

ಟ್ರಂಪ್ ಅವರನ್ನು ಏಲಿಯನ್‌ಗಳೇ ತಡೆದಿವೆ

ಟ್ರಂಪ್ ಅವರನ್ನು ಏಲಿಯನ್‌ಗಳೇ ತಡೆದಿವೆ

''ಟ್ರಂಪ್ ಅವರು ಏಲಿಯನ್‌ಗಳ ಅಸ್ತಿತ್ವದ ಬಗ್ಗೆ ವಿಶ್ವಕ್ಕೆ ಬಹಿರಂಗಪಡಿಸುವುದರಲ್ಲಿದ್ದರು. ಆದರೆ ಗ್ಯಾಲಾಕ್ಟಿಕ್ ಫೆಡರೇಷನ್, 'ಮೊದಲು ಜನರು ಶಾಂತಗೊಳ್ಳಲಿ' ಎಂದು ಹೇಳಿದೆ. ಸಾಮೂಹಿಕ ಉನ್ಮಾದ ಶುರುವಾಗುವಂತೆ ಮಾಡುವುದನ್ನು ಏಲಿಯನ್‌ಗಳು ಬಯಸಿಲ್ಲ. ಮೊದಲು ನಾವು ಯಾವುದೇ ದುಗುಡಕ್ಕೆ ಒಳಗಾಗದಂತೆ ಮತ್ತು ಬಾಹ್ಯಾಕಾಶದ ಕುರಿತು ಅರ್ಥಮಾಡಿಕೊಳ್ಳುವಂತಾಗುವುದನ್ನು ಅವುಗಳು ಬಯಸಿವೆ'' ಎಂದು ಎಷೆಡ್ ಹೇಳಿದ್ದಾರೆ.

ಪುಸ್ತಕದಲ್ಲಿಯೂ ಪ್ರಸ್ತಾಪ

ಪುಸ್ತಕದಲ್ಲಿಯೂ ಪ್ರಸ್ತಾಪ

'ನಾನು ಇಂದು ಹೇಳುತ್ತಿರುವುದನ್ನು ಐದು ವರ್ಷಗಳ ಹಿಂದೆಯೇ ಹೇಳಿದ್ದರೆ ನನ್ನನ್ನು ಆಸ್ಪತ್ರೆಗೆ ದಾಖಲು ಮಾಡಿಬಿಡುತ್ತಿದ್ದರು' ಎಂದಿದ್ದಾರೆ. 'ದಿ ಯುನಿವರ್ಸ್ ಬಿಯಾಂಗ್ ಡಿ ಹಾರಿಜನ್- ಕನ್ವರ್ಸೇಷನ್ಸ್ ವಿತ್ ಪ್ರೊಫೆಸರ್ ಹೈಮ್ ಎಷೆಡ್' ಎಂಬ ಪುಸ್ತಕದಲ್ಲಿಯೂ ಅವರು ಈ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

ನಿರಾಕರಿಸದ ನಾಸಾ

ನಿರಾಕರಿಸದ ನಾಸಾ

ಎಷೆಡ್ ಅವರ ಹೇಳಿಕೆಯ ಕುರಿತು ಇದುವರೆಗೂ ಅಮೆರಿಕ ಸರ್ಕಾರ ಅಥವಾ ಡೊನಾಲ್ಡ್ ಟ್ರಂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏಲಿಯನ್‌ಗಳ ಅಸ್ತಿತ್ವ ನಿಜವೇ ಅಥವಾ ಕೇವಲ ಕಲ್ಪನೆಯೇ ಎಂಬ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಏಲಿಯನ್‌ಗಳ ಇರುವಿಕೆ ಬಗ್ಗೆ ಯಾವುದೇ ಖಚಿತ ಪುರಾವೆ ಸಿಗದೆ ಇದ್ದರೂ ಭೂಮಿಯಾಚೆ ಬೇರೆ ಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಸಾಧ್ಯತೆಯನ್ನು ನಾಸಾ ಸಂಪೂರ್ಣವಾಗಿ ನಿರಾಕರಿಸಿಲ್ಲ.

ಟ್ರಂಡ್ ಆದ ಏಲಿಯನ್ಸ್!

ಟ್ರಂಡ್ ಆದ ಏಲಿಯನ್ಸ್!

ಎಷೆಡ್ ಅವರ ಹೇಳಿಕೆ ಟ್ವಿಟ್ಟರ್‌ನಲ್ಲಿ ಅನೇಕ ತಮಾಷೆಯ ಮೀಮ್‌ಗಳಿಗೆ ಕಾರಣವಾಗಿದೆ. ಟ್ವಿಟ್ಟರ್‌ನಲ್ಲಿ 'ಏಲಿಯನ್ಸ್' ಹ್ಯಾಷ್ ಟ್ಯಾಗ್ ಟ್ರೆಂಡ್‌ನಲ್ಲಿದೆ. ಏಲಿಯನ್‌ಗಳು ನಿಜಕ್ಕೂ ಇರುವುದಾದರೆ ಅವು ನೋಡಲು ಹೇಗಿವೆ ಎಂಬುದನ್ನು ತಿಳಿಸಿ ಎಂದು ಅನೇಕರು ಬೇಡಿಕೆ ಇರಿಸಿದ್ದಾರೆ. ನಮ್ಮ ದೇಶದಲ್ಲಿ ನಾವೇ ಅನ್ಯಗ್ರಹ ಜೀವಿಗಳಂತೆ ಬದುಕುತ್ತಿದ್ದೇವೆ. ನಾವೇ ನಿಜವಾದ ಏಲಿಯನ್‌ಗಳು ಎಂದು ಕೆಲವು ಮೀಮ್ ಮಾಡಿದ್ದಾರೆ. ಭೂಮಿಗೆ ಬರಲು ಏಲಿಯನ್‌ಗಳು ಬಯಸಿದ್ದವು. ಆದರೆ ಈ ಮನುಷ್ಯರನ್ನು ಕಂಡು ಹೆದರಿಕೊಂಡಿವೆ ಎಂದು ತಮಾಷೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+