• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನದಲ್ಲಿ ಅಲ್‌ಖೈದಾ ಮರುಹುಟ್ಟು: ಸಿಐಎ ಗುಪ್ತಚರ ಅಧಿಕಾರಿ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 08: ಅಫ್ಘಾನಿಸ್ತಾನದಲ್ಲಿ ಅಲ್‌ಖೈದಾ ಸಂಘಟನೆ ಮರುಹುಟ್ಟುಪಡೆಯಲಿದೆ ಎಂದು ಸಿಐಎ ಗುಪ್ತಚರ ಅಧಿಕಾರಿ ಹೇಳಿದ್ದಾರೆ.

ಉಗ್ರಗಾಮಿಗಳಿಗೆ ಅಫ್ಘಾನಿಸ್ತಾನ ಸ್ವರ್ಗವಾಗಲಿದೆ, ತಾಲಿಬಾನ್ ಉಗ್ರಗಾಮಿಗಳನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಈ ಹೇಳಿಕೆ ನೀಡಿರುವ ಮೈಕೆಲ್ ಮೂರ್ ಎರಡು ಬಾರಿ ಅಮೆರಿಕ ಗುಪ್ತಚರ ಇಲಾಖೆಯಲ್ಲಿ ಎರಡು ಬಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಅವರು ಅಮೆರಿಕದ ಅವಳಿ ಕಟ್ಟಡಗಳ ಮೇಲೆ 2001ರಲ್ಲಿ ಅಲ್ ಖೈದಾ ದಾಳಿ ನಡೆಸಿದ ಸಂದರ್ಭ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಭಯೋತ್ಪಾದನೆ ವಿಷಯಗಳ ಕುರಿತು ಸಲಹೆಗಾರರಾಗಿದ್ದರು.

ಅಚ್ಚರಿಯೆಂದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದಲ್ಲಿ ಒಸಾಮ ಬಿನ್ ಲ್ಯಾಡೆನ್ ಹತ್ಯೆಯಾದಾಗ ಮೈಕೆಲ್ ಮೂರ್ ಅವರೇ ಅಧ್ಯಕ್ಷರಿಗೆ ಸಲಹಾಗಾರರಾಗಿದ್ದರು.

ಇದಕ್ಕೂ ಮುನ್ನ ತಜ್ಞರ ವರದಿಯೊಂದರಲ್ಲಿ, ಮೇ 2020 ಮತ್ತು ಎಪ್ರಿಲ್ 2021ರ ಅಫ್ಘಾನಿಸ್ತಾನದ ಬೆಳವಣಿಗೆಗಳ ಹಿಂದೆ ಅಲ್ ಖೈದಾ ಕೈವಾಡ ಇರುವ ಬಗ್ಗೆ ಮಾಹಿತಿ ನೀಡಿತ್ತು. ಇದರಿಂದಾಗಿ ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು ಇರುವುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸಲ್ಲಿಕೆಯಾಗಿರುವ ತಜ್ಞರ ವರದಿಯಲ್ಲಿ ಹೇಳಲಾಗಿದೆ.

ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ.

ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ. ಇವೆಲ್ಲದರಿಂದಾಗಿ ಅವರೆಡು ಸಂಘಟನೆಗಳ ನಡುವೆ ಬಿಡಿಸಲಾಗದ ನಂಟಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಲಿಬಾನ್ ಈ ಹಿಂದೆ ಅಮೆರಿಕ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಅಲ್ ಖೈದಾ ನಾಯಕರ ಸಲಹೆ ಪಡೆದುಕೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು ಇದು ಅಂತಾರಾಷ್ಟ್ರೀಯ ಸಮುದಾಯದ ನಾಯಕರ ನಿದ್ದೆಗೆಡಿಸಿತ್ತು.

ಅಲ್ ಖೈದಾ ಸಲಹೆಯ ಮೇರೆಗೆ ತಾಲಿಬಾನ್ ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಂಡಿತ್ತು. ಇದೀಗ ಈ ಷರತ್ತುಗಳಿಗೆ ತಾಲಿಬಾನ್ ಎಷ್ಟರಮಟ್ಟಿಗೆ ಬದ್ಧವಾಗಿರುವುದೆಂಬ ಕುತೂಹಲ ಮೊಳೆತಿದೆ.

ಈ ಮೊದಲು ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸೇರಿದಂತೆ ಅಫ್ಘಾನಿಸ್ತಾನದ ಅಧ್ಯಕ್ಷ/ ಪ್ರಧಾನಮಂತ್ರಿ ಸ್ಥಾನಕ್ಕೆ ತಾಲಿಬಾನ್​ನ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ಮೊಹಮ್ಮದ್ ಹಸನ್ ಅಕುಂದ್ ಅವರನ್ನು ಅಫ್ಘಾನ್​ ನೂತನ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ.

ಅಫ್ಘಾನಿಸ್ತಾನದ ನೂತನ ಸರ್ಕಾರದಲ್ಲಿ ತಾಲಿಬಾನ್ ನಾಯಕರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ. ಹಸನ್ ಅಕುಂದ್ ಅಫ್ಘಾನಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಲಿದ್ದು, ಮುಲ್ಲಾ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಮಂತ್ರಿಯಾಗಲಿದ್ದಾರೆ.

ಅಬಾಸ್ ಸ್ಟಾನಿಕ್​ಜೈ ವಿದೇಶಾಂಗ ಖಾತೆಯ ಉಪ ಸಚಿವರಾಗಲಿದ್ದಾರೆ. ಅಮೀರ್ ಖಾನ್ ಮುತಾಖಿ ಅಫ್ಘಾನ್​ನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ. ಸಿರಾಜುದ್ದೀನ್ ಹಕ್ಕಾನಿ ಅವರನ್ನು ಒಳಾಡಳಿತ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಮುಲ್ಲಾ ಯಾಕೂಬ್ ರಕ್ಷಣಾ ಸಚಿವರಾಗಲಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡು ಸುಮಾರು 2 ವಾರಗಳಾಗಿವೆ. ಇದಾದ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಆ. 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿತ್ತು.

ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ನೂತನ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್​ ಸಂಘಟನೆಯ ಪ್ರಮುಖ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗಲಿವೆ.

ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಶೇಖ್ ಹೈಬತುಲ್ಲಾ ಅಖುಂಡಜಾದ, ಮುಲ್ಲಾ ಮುಹಮ್ಮದ್ ಒಮರ್ ಅವರ ಮಗನಾದ ಮೌಲವಿ ಮುಹಮ್ಮದ್ ಯಾಕೂಬ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗುವುದು. ಈ ಮೊದಲು ಮುಲ್ಲಾ ಹಿಬತುಲ್ಲಾ ಅಖುಂಡಜಾದ ಅವರನ್ನೇ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು.

English summary
The CIA man who briefed President George W Bush on September 11, 2001, and later President Barack Obama on the intelligence that led to the killing of Osama bin Laden said Tuesday that he’s convinced the Taliban will invite al-Qaeda to rebuild in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X