ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಪಡೆಗಳ ಗುಂಡೇಟಿಗೆ ಅಲ್ ಜಜಿರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಸಾವು

|
Google Oneindia Kannada News

ಜೆರುಸಲೆಂ, ಮೇ 11: ಇಸ್ರೇಲಿ ಪಡೆಗಳ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಅಲ್ ಜಜೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರನ್ನು ಗುಂಡಿಕ್ಕಿ ಕೊಂದು ಹಾಕಲಾಗಿದೆ ಎಂದು ಪ್ಯಾಲೇಸ್ತಿನಿಯನ್ ಆರೋಗ್ಯ ಸಚಿವಾಲಯ ಹೇಳಿದೆ.

ಜೆನಿನ್ ನಗರದಲ್ಲಿ ಬುಧವಾರ ಇಸ್ರೇಲಿ ದಾಳಿಗಳ ಬಗ್ಗೆ ವರದಿ ಮಾಡುತ್ತಿರುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಸಚಿವಾಲಯ ತಿಳಿಸಿದೆ.

ದೆಹಲಿ ಇಸ್ರೇಲ್ ಎಂಬಸಿಗೆ ಇರಾನ್ ಬೆಂಬಲಿತ ಉಗ್ರರಿಂದ ದಾಳಿ ಭೀತಿದೆಹಲಿ ಇಸ್ರೇಲ್ ಎಂಬಸಿಗೆ ಇರಾನ್ ಬೆಂಬಲಿತ ಉಗ್ರರಿಂದ ದಾಳಿ ಭೀತಿ

ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಅಲ್ ಜಜೀರಾ ಪತ್ರಕರ್ತ ಅಲಿ ಸಮೌದಿ ಬೆನ್ನಿಗೆ ಗುಂಡು ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಗುಂಡು ಹಾರಿಸಿದ ಸಂದರ್ಭದಲ್ಲಿ ಯಾವುದೇ ಪ್ಯಾಲೇಸ್ಟಿನಿಯನ್ ಹೋರಾಟಗಾರರು ಇರಲಿಲ್ಲ ಎಂದು ಹೇಳಿದರು.

Al Jazeera journalist Shireen Abu Akleh shot dead in West Bank

ಗುಂಡಿನ ದಾಳಿ ಬಗ್ಗೆ ಪತ್ರಕರ್ತನ ಮಾತು:

"ನಾವು ಇಸ್ರೇಲಿ ಸೇನಾ ಕಾರ್ಯಾಚರಣೆಯನ್ನು ಚಿತ್ರೀಕರಿಸಲು ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ಅವರು ನಮ್ಮನ್ನು ಬಿಡಲು ಅಥವಾ ಚಿತ್ರೀಕರಣವನ್ನು ನಿಲ್ಲಿಸಲು ಕೇಳದೆ ಗುಂಡು ಹಾರಿಸಿದರು" ಎಂದು ಸಮೌದಿ ಹೇಳಿದರು. "ಮೊದಲ ಗುಂಡು ನನಗೆ ತಗುಲಿತು ಮತ್ತು ಎರಡನೆಯ ಬುಲೆಟ್ ಶಿರೀನ್‌ಗೆ ತಗುಲಿತು. ಈ ವೇಳೆ ಘಟನಾ ಸ್ಥಳದಲ್ಲಿ ಯಾವುದೇ ಪ್ಯಾಲೇಸ್ಟಿನಿಯನ್ ಮಿಲಿಟರಿ ಪ್ರತಿರೋಧವಿರಲಿಲ್ಲ" ಎಂದರು.

ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದಾಳಿ:

Recommended Video

Pollard ಹೊಡೆತ ತಿಂದ ಅಂಪೈರ್ ಸುಸ್ತ್,ರೋಹಿತ್ ಶರ್ಮಾ‌ ಶಾಕ್!! | Oneindia Kannada

ಶಿರೀನ್ ಅಬು ಅಕ್ಲೆಹ್ ಮೇಲೆ ಗುಂಡು ಹಾರಿಸಿದಾಗ ಅವರ ಪಕ್ಕದಲ್ಲಿದ್ದ ಪ್ಯಾಲೆಸ್ತೀನ್ ಪತ್ರಕರ್ತೆ ಶತಾ ಹನಯ್ಶಾ ಅವರು ಅಲ್ ಜಜೀರಾಗೆ ಪ್ಯಾಲೆಸ್ತೀನ್ ಹೋರಾಟಗಾರರು ಮತ್ತು ಇಸ್ರೇಲಿ ಸೇನೆಯ ನಡುವೆ ಯಾವುದೇ ಘರ್ಷಣೆ ನಡೆದಿಲ್ಲ ಎಂದು ಹೇಳಿದರು. ಅಲ್ಲದೇ ಪತ್ರಕರ್ತರ ಗುಂಪನ್ನು ಗುರಿಯಾಗಿಸಲಾಗಿದೆ ಎಂದು ದೂಷಿಸಿದರು.

English summary
Al Jazeera journalist Shireen Abu Akleh shot dead in West Bank. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X