ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯಾನ್ ಮೈಕೆಲ್ ಸಿಬಿಐ ವಶಕ್ಕೆ

By Manjunatha
|
Google Oneindia Kannada News

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯಾನ್ ಮೈಕೆಲ್ ಸಿಬಿಐ ವಶಕ್ಕನವದೆಹಲಿ, ಜುಲೈ 18: ದೇಶದ ಅತ್ಯಂತ ದೊಡ್ಡ ಹಗರಣ ಎಂದೇ ಹೆಸರಾಗಿರುವ, ಖ್ಯಾತನಾಮ ರಾಜಕಾರಣಿಗಳ ಹೆಸರು ತಳುಕು ಹಾಕಿಕೊಂಡಿರುವ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ಅತ್ಯಂತ ಪ್ರಮುಖ ಆರೋಪಿಯನ್ನು ಸಿಬಿಐ ವಶಕ್ಕೆ ಪಡೆದಿದೆ.

ಹೆಲಿಕಾಪ್ಟರ್ ಖರೀದಿಗೆ ಮಧ್ಯವರ್ತಿ ಹಾಗೂ ಒಟ್ಟಾರೆ ಹಗರಣದ ಕೇಂದ್ರ ಎನ್ನಲಾಗಿರುವ ಕ್ರಿಸ್ಟಿಯಾನ್ ಮೈಕಲ್‌ನನ್ನು ಸಿಬಿಐ ವಿಶೇಷ ತಂಡವು ದುಬೈನಲ್ಲಿ ವಶಕ್ಕೆ ಪಡೆದಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನದಲ್ಲಿದೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್

ಆತನನ್ನು ಭಾತಕ್ಕೆ ಕರೆತರಲು ಅರಬ್ (ಯುಎಇ) ನ್ಯಾಯಾಲಯಕ್ಕೆ ಸರಿಯದ ದಾಖಲೆಗಳನ್ನು, ತನ ವಿರುದ್ಧದ ಸಾಕ್ಷಿಗಳನ್ನು ಒದಗಿಸಬೇಕಾಗಿದ್ದು, ಮೊದಲ ಹಂತದಲ್ಲಿ ಸಿಬಿಐ ವಿಫಲವಾಗಿದೆ. ಆದರೆ ಪ್ರಯತ್ನ ಕೈಬಿಟ್ಟಿಲ್ಲ ಎಂದು ಸಿಬಿಐ ಹಾಗೂ ಇಡಿ (ಜಾರಿ ನಿರ್ದೇಶನಾಲಯ) ಹೇಳಿದೆ.

ಸುದ್ದಿ ಖಾತ್ರಿ ಮಾಡಿದ ಮೈಕಲ್ ವಕೀಲ

ಸುದ್ದಿ ಖಾತ್ರಿ ಮಾಡಿದ ಮೈಕಲ್ ವಕೀಲ

ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಮಧ್ಯವರ್ತಿ ಕ್ರಿಸ್ಟಿಯಾನ್ ಮೈಕಲ್ ಅವರ ವಕೀಲ, 'ಮಂಗಳವಾರ ಮಧ್ಯಾಹ್ನ ಕ್ರಿಸ್ಟಿಯಾನ್‌ನನ್ನು ಬಂಧಿಸಲಾಗಿದೆ, ಆದರೆ ಆತನನ್ನು ವಶಕ್ಕೆ ಪಡೆಯಲು ಸೂಕ್ತ ದಾಖಲೆಗಳನ್ನು ಕಲ್ಪಿಸಲಾಗಿಲ್ಲ' ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಕರೆತರಲು ಕನಿಷ್ಟ 15 ದಿನ

ಭಾರತಕ್ಕೆ ಕರೆತರಲು ಕನಿಷ್ಟ 15 ದಿನ

ಕ್ರಿಸ್ಟಿಯಾನ್ ಮೈಕಲ್‌ನನ್ನು ಸಿಬಿಐ ವಶಕ್ಕೆ ಪಡೆದು ಭಾರತಕ್ಕೆ ಕರೆತರಲು ಕನಿಷ್ಟ 15 ದಿನಗಳಾದರೂ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈತನ ವಿರುದ್ಧ ಬಹಳ ವರ್ಷಗಳ ಹಿಂದೆಯೇ ಪಟಿಯಾಲಾ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇಟಲಿ ಕೋರ್ಟ್‌ ಸಹ ಈತನನ್ನು ಆಗಸ್ಟಾವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಿದೆ.

2600 ಕೋಟಿಯ ಬೃಹತ್ ಹಗರಣ

2600 ಕೋಟಿಯ ಬೃಹತ್ ಹಗರಣ

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣವು 2600 ಕೋಟಿಯ ಬೃಹತ್ ಹಗರಣವಾಗಿದ್ದು, ವಿವಿಐಪಿಗಳ ಸಂಚಾರಕ್ಕಾಗಿ ಹೆಲಿಕಾಫ್ಟರ್‌ ಖರೀದಿಯಲ್ಲಿ ಈ ಹಗರಣ ನಡೆದಿದೆ. ಈ ಹಗರಣದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೊನಿಯಾ ಗಾಂಧಿ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಆದರೆ ಈ ವರೆಗೆ ಇದು ಇತ್ಯರ್ಥವಾಗಿಲ್ಲ.

38 ಭಾರತೀಯರ ವಿರುದ್ಧ ಚಾರ್ಜ್‌ಶೀಟ್‌

38 ಭಾರತೀಯರ ವಿರುದ್ಧ ಚಾರ್ಜ್‌ಶೀಟ್‌

ಪ್ರಕರಣ ಸಂಬಂಧ 34 ಭಾರತೀಯರು ಸೇರಿದಂತೆ ಹಲವು ವಿದೇಶಿಗಳು ಹಾಗೂ ವಿದೇಶಿ ಕಂಪೆನಿಗಳ ಮೇಲೆ ಸಿಬಿಐ ಹಾಗೂ ಇಡಿ ಚಾರ್ಜ್‌ಶೀಟ್‌ ಅನ್ನು ಪಟಿಯಾಲಾ ಕೋರ್ಟ್‌ಗೆ ದಾಖಲಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥರಾಗಿದ್ದ ತ್ಯಾಗಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಇವರು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

English summary
Agustawestland scam middle man Christian Michel detained by CBI in Dubai on Tuesday. his extradition process is going on. CBI submitting evidence against Michel to UAE court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X