ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UK PM : ಲಿಜ್ ಟ್ರಸ್ ರಾಜೀನಾಮೆ ಬಳಿಕ ಮತ್ತೆ ರಿಷಿ ಸುನಕ್ ಮೇಲೆ ಹೆಚ್ಚಿದ ನಿರೀಕ್ಷೆ

|
Google Oneindia Kannada News

ಲಂಡನ್‌, ಅಕ್ಟೋಬರ್‌ 20: ಯುಕೆ ಪ್ರಧಾನಿ ಲಿಜ್ ಟ್ರಸ್ ಅವರು ಇಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದು, ಮುಂದಿನ ವಾರದ ಅಂತ್ಯದ ವೇಳೆಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈಗ ರಿಷಿ ಸುನಕ್‌ ಮೇಲೆ ಮತ್ತೆ ಪ್ರಧಾನಿಯಾಗುವ ಭರವಸೆಗಳು ಕಾಣತೊಡಗಿವೆ.

ಮಾರುಕಟ್ಟೆಗಳಲ್ಲಿ ತಲ್ಲಣಗಳನ್ನು ಉಂಟು ಮಾಡಿದ ಲಿಜ್‌ ಟ್ರಸ್‌ ಅವರ ಮಿನಿ ಬಜೆಟ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿತು. ಲಿಜ್ ಟ್ರಸ್ ಅವರ ತೆರಿಗೆ ಕಡಿತ ನೀತಿಯು ಮಾರುಕಟ್ಟೆ ಅವ್ಯವಸ್ಥೆಗೆ ಕಾರಣವಾಯಿತು. ಅದು ದೇಶದ ಪಿಂಚಣಿ ನಿಧಿಗಳಿಗೆ ಹಾನಿ ಮಾಡಿತು. ಲಿಜ್‌ ಟ್ರಸ್‌ ಅವರ ವಿಫಲ ಆರ್ಥಿಕ ಕ್ರಮಗಳಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿತು.

Breaking: ಬ್ರಿಟನ್‌ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆBreaking: ಬ್ರಿಟನ್‌ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ

ಯುಕೆ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಕ್ರಮಗಳಿಂದ ಅವರು ನೇಮಕಗೊಂಡ 45 ದಿನಗಳ ನಂತರ ಅವರ ಕನ್ಸರ್ವೇಟಿವ್ ಪಕ್ಷವನ್ನು ವಿಭಜಿಸಿದ್ದರು. ಲಿಜ್ ಟ್ರಸ್ ಅವರ ನಿರ್ಗಮನವು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವನ್ನು ತೀವ್ರವಾಗಿ ಹಾನಿಗೊಳಿಸಿದೆ. ಹನ್ನೆರಡೂವರೆ ವರ್ಷಗಳ ಅಧಿಕಾರದ ನಂತರ ಚುನಾವಣೆಯಲ್ಲಿ ಲೇಬರ್‌ ಪಕ್ಷಕ್ಕಿಂತ 30 ಅಂಕಗಳಿಗಿಂತ ಕನ್ಸರ್‌ವೇಟಿವ್‌ ಪಕ್ಷ ಹೆಚ್ಚು ಹಿಂದುಳಿದಿದೆ.

2016 ರ ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹವು ಬ್ರಿಟಿಷ್ ರಾಜಕೀಯದಲ್ಲಿ ಅಭೂತಪೂರ್ವ ಅಸ್ತವ್ಯಸ್ತತೆಯ ಅವಧಿಯನ್ನು ತಂದಿತು. ನಂತರ ಅವರ ಉತ್ತರಾಧಿಕಾರಿ ಏಳು ವರ್ಷಗಳಲ್ಲಿ ಪಕ್ಷದ ಐದನೇ ಪ್ರಧಾನ ಮಂತ್ರಿಯಾಗುತ್ತಾರೆ. ಟ್ರಸ್‌ನ ಅಲ್ಪಾವಧಿಯ ಬಿಕ್ಕಟ್ಟು ಬಾಧಿತ ಅಧಿಕಾರಾವಧಿಯ ಹಿನ್ನಲೆಯಲ್ಲಿ ಅವರ ವಿರೋಧ ಪಕ್ಷ ಲೇಬರ್ ನಾಯಕ ಕೀರ್ ಸ್ಟಾರ್ಮರ್ ತಕ್ಷಣದ ಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಿದರು.

ಮುಂದಿನ ವಾರದೊಳಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಚುನಾವಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ನಿರ್ಗಮಿತ ಪ್ರಧಾನಿ ಲಿಜ್‌ ಟ್ರಸ್‌ ಘೋಷಿಸಿದರು. ಕನ್ಸರ್ವೇಟಿವ್ ನಾಯಕ ಜೆರೆಮಿ ಹಂಟ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಮುಂಚಿತವಾಗಿ ಘೋಷಿಸಿದ್ದಾರೆ. ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಲಿಜ್ ಟ್ರಸ್ ಸೋಲಿಸಿದ ರಿಷಿ ಸುನಕ್ ಅವರು ಚುನಾವಣೆಯಲ್ಲಿ ಕಾಣಿಸಿಕೊಳ್ಳುವ ಸಂಭಾವ್ಯ ಹೆಸರುಗಳಲ್ಲಿ ಒಂದಾಗಿದೆ. ರಿಷಿ ಸುನಕ್ ಗೆದ್ದರೆ ಅವರು ಯುಕೆ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗುತ್ತಾರೆ.

ರಿಷಿ ಸುನಕ್ ವಿರುದ್ಧ ಗೆಲುವು

ರಿಷಿ ಸುನಕ್ ವಿರುದ್ಧ ಗೆಲುವು

ಲಿಜ್ ಸುನಕ್ ಬೋರಿಸ್ ಜಾನ್ಸನ್ ಸರಕಾರದಲ್ಲಿ ಲಿಜ್ ಟ್ರಸ್ ವಿದೇಶಾಂಗ ಸಚಿವೆಯಾಗಿದ್ದರು. ರಿಷಿ ಸುನಕ್ ಹಣಕಾಸು ಸಚಿವರಾಗಿ ನಂತರ ರಾಜೀನಾಮೆ ನೀಡಿದ್ದರು. ಅಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ರಿಷಿ ಸುನಕ್ ವಿರುದ್ಧ ಅವರು ಗೆಲುವು ಸಾಧಿಸಿದರು. ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಲಿಜ್ ಟ್ರುಸ್ 81,326 ಮತಗಳನ್ನು ಪಡೆದರೆ ರಿಷಿ ಸುನಕ್ 60,399 ಮತಗಳನ್ನು ಗಳಿಸಿದ್ದರು.

ಬ್ರಿಟನ್‌ ನೂತನ ಪ್ರಧಾನಿ ಲಿಜ್ ಟ್ರಸ್ ಸಹ ಸಂಸದನ ಜೊತೆ ಸಂಬಂಧ; ಏನಿದು ವಿವಾದಬ್ರಿಟನ್‌ ನೂತನ ಪ್ರಧಾನಿ ಲಿಜ್ ಟ್ರಸ್ ಸಹ ಸಂಸದನ ಜೊತೆ ಸಂಬಂಧ; ಏನಿದು ವಿವಾದ

ಜನತೆಗೆ ತೆರಿಗೆಗಳ ಬರೆ ಹಾಕಿದ್ದ ರಿಷಿ ಸುನಕ್‌

ಜನತೆಗೆ ತೆರಿಗೆಗಳ ಬರೆ ಹಾಕಿದ್ದ ರಿಷಿ ಸುನಕ್‌

ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ ಗೆಲುವು ಸಾಧಿಸುವುದು ನಿರೀಕ್ಷಿತವೇ ಆಗಿತ್ತು. ಏಕೆಂದರೆ ಹಣಕಾಸು ಸಚಿವರಾಗಿ ರಿಷಿ ಸುನಕ್ ದೇಶದ ಜನತೆಗೆ ತೆರಿಗೆಗಳ ಬರೆ ಹಾಕಿದ್ದು ಬಹುಶಃ ಅವರ ಸೋಲಿಗೆ ಕಾರಣ ಎಂದು ಭಾವಿಸಲಾಗಿತ್ತು. ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆ ಬಳಿಕ ನಡೆದ ಸಮೀಕ್ಷೆಗಳೆಲ್ಲವೂ ಲಿಜ್ ಟ್ರುಸ್ ಗೆಲುವಿನ ಭವಿಷ್ಯ ನುಡಿದಿದ್ದವು. ಸಮೀಕ್ಷೆಗಳ ಪ್ರಕಾರ ರಿಷಿ ಸುನಕ್ ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಕೆಲ ಸುತ್ತುಗಳಲ್ಲಿ ಮುನ್ನಡೆ ಹೊಂದಿದ್ದರೂ ನಂತರದ ಸುತ್ತುಗಳಲ್ಲಿ ಭಾರೀ ಹಿನ್ನಡೆ ಹೊಂದಿದ್ದರು.

ಅಂತಿಮ ಕಣದಲ್ಲಿ ರಿಷಿ ಸುನಕ್‌ ಹಾಗೂ ಲಿಜ್‌ ಟ್ರಸ್‌

ಅಂತಿಮ ಕಣದಲ್ಲಿ ರಿಷಿ ಸುನಕ್‌ ಹಾಗೂ ಲಿಜ್‌ ಟ್ರಸ್‌

ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಏಳೆಂಟು ಜನರು ಸ್ಪರ್ಧೆ ಮಾಡಿದ್ದವರು. ಅವರ ಪೈಕಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರಿಬ್ಬರು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದರು. ಮೊದಲ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಜನಪ್ರತಿನಿಧಿಗಳು ಮತ ಚಲಾಯಿಸಿದ್ದರು. ಏಳೆಂಟು ಜನರು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಒಂದೊಂದೇ ಸುತ್ತಿನ ಮತದಾನದಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳು ಹೊರಬೀಳುತ್ತಾ ಹೋಗಿದ್ದರು. ಅಂತಿಮವಾಗಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಮಾತ್ರವೇ ಉಳಿದುಕೊಂಡಿದ್ದರು.

ಪ್ರಧಾನಿ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿ

ಪ್ರಧಾನಿ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿ

ಚುನಾವಣೆಯ ಮೊದಲ ಹಂತದ ಎಲ್ಲಾ ಸುತ್ತುಗಳಲ್ಲೂ ರಿಷಿ ಸುನಕ್ ಅವರು ಮೊದಲ ಸ್ಥಾನ ಪಡೆದದ್ದು ವಿಶೇಷವಾಗಿತ್ತು. ಹೀಗಾಗಿ, ರಿಷಿ ಸುನಕ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ, ಎರಡನೇ ಹಂತದ ಚುನಾವಣೆಯ ರೂಪವೇ ಬೇರೆ ಆಗಿತ್ತು. ಎರಡನೇ ಹಂತದಲ್ಲಿ ಕನ್ಸರ್ವೇಟಿವ್ ಪಕ್ಷದ ಎಲ್ಲಾ ಸಾಮಾನ್ಯ ಸದಸ್ಯರೂ ಮತದಾನದ ಹಕ್ಕು ಹೊಂದಿದ್ದರು. ಈ ಪಕ್ಷದ ಒಟ್ಟು 1.6 ಲಕ್ಷ ಸದಸ್ಯರಿದ್ದಾರೆ. ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಅವರು ಕನ್ಸರ್ವೇಟಿವ್ ಸದಸ್ಯರನ್ನು ಒಲಿಸಿಕೊಳ್ಳಲು ವಿವಿಧ ಕಡೆ ಚರ್ಚಾ ಕಾರ್ಯಕ್ರಮಗಳನ್ನು ನಡೆಸಿದ್ದರು, ತಮ್ಮ ವಿಚಾರಧಾರೆಗಳನ್ನು ಪ್ರಸ್ತುಪಡಿಸಿದ್ದರು.

English summary
UK Prime Minister Liz Truss announced today that she is resigning as Prime Minister and that her successor will be chosen by the end of next week. Now Rishi Sunak hopes to become the Prime Minister again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X