ಕೇಳಿದ್ದು ದೊಡ್ಡ ಮೊತ್ತ, ಸಿಕ್ಕಿದ್ದು ಪುಡಿಗಾಸು! ‘ಎವರ್ ಗಿವೆನ್’ ವನವಾಸ ಅಂತ್ಯ!
ಸೂಯೆಜ್ ಕಾಲುವೆಯಲ್ಲಿ ಬರೋಬ್ಬರಿ 3 ತಿಂಗಳ ಕಾಲ ಪಡಬಾರದ ಕಷ್ಟಗಳನ್ನೆಲ್ಲಾ ಎದುರಿಸಿದ್ದ 'ಎವರ್ ಗಿವೆನ್' ಹಡಗು ಕಡೆಗೂ 'ಬಂಧ ಮುಕ್ತ'ವಾಗಿದೆ. 6 ದಿನ ಸೂಯೆಜ್ ಕಾಲುವೆಯ ಓಡಾಟವನ್ನೇ ಬಂದ್ ಮಾಡಿದ್ದ ತಪ್ಪಿಗೆ 'ಎವರ್ ಗಿವನ್'ಗೆ 7 ಸಾವಿರ ಕೋಟಿ ರೂಪಾಯಿ ದಂಡ ಕಟ್ಟಲು 'ಸೂಯೆಜ್ ಕಾಲುವೆ ಪ್ರಾಧಿಕಾರ' ಸೂಚಿಸಿತ್ತು. 2 ಲಕ್ಷ 24 ಸಾವಿರ ಟನ್ ಭಾರ ಹೊತ್ತಿದ್ದ 'ಎವರ್ ಗಿವನ್' ಹಡಗು, ಸೂಯೆಜ್ ಕಾಲುವೆ ಮೇಲೆ ಸಂಚರಿಸು ಸಂದರ್ಭ ಭೀಕರ ಮರಳು ಮಿಶ್ರಿತ ಬಿರುಗಾಳಿ ಎದ್ದಿತ್ತು.
ಈಜಿಪ್ಟ್ ಮರುಭೂಮಿ ಪ್ರದೇಶ, ಹೀಗಾಗಿ ಮರಳಿನ ಚಂಡಮಾರುತ ಇಲ್ಲಿ ಸಾಮಾನ್ಯ. ಆದರೆ ಈ ಬಾರಿ ಗಾಳಿ ಭೀಕರವಾಗಿತ್ತು. ಇದೇ ಕಾರಣಕ್ಕೆ ನಾವಿಕ ಹಡಗನ್ನು ಸೀದಾ ಕಾಲುವೆ ಬದಿಗೆ ಹೊರಳಿಸಿದ್ದ. ಹಡಗು ಮರಳಿನ ಮೇಲೆ ನಿಂತುಬಿಟ್ಟಿತ್ತು. ಹೀಗಾಗಿ ಸುಮಾರು 1 ವಾರಗಳ ಕಾಲ 400ಕ್ಕೂ ಹೆಚ್ಚು ಹಡಗುಗಳು ಸೂಯೆಜ್ ಕಾಲುವೆಯ ಒಳಗೆ ಮತ್ತು ಹೊರಗೆ ಕಾಯುತ್ತಾ ನಿಂತಿದ್ದವು.
ಇದರಿಂದ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿತ್ತು, ಇದೇ ಕಾರಣಕ್ಕೆ 'ಎವರ್ ಗಿವನ್'ಗೆ 7 ಸಾವಿರ ಕೋಟಿ ದಂಡ ವಿಧಿಸಲಾಗಿತ್ತು. ಆದರೆ ಈಗ ಒಂದು ಒಪ್ಪಂದಕ್ಕೆ ಬಂದಿರುವ ಪ್ರಾಧಿಕಾರ ಮತ್ತು ಹಡಗಿನ ಮಾಲೀಕರು, ದಂಡದ ಮೊತ್ತದಲ್ಲಿ ವಿನಾಯಿತಿ ನೀಡಿ ಹಡಗನ್ನು ಎವರ್ ಗಿವನ್ ಹಡಗನ್ನು ಸೂಯೆಜ್ ಕಾಲುವೆಯಿಂದ ಮುಕ್ತಗೊಳಿಸಿದ್ದಾರೆ.

ಒಂದು ಘಟನೆ, ಹಲವು ಪಾಠ..!
‘ಎವರ್ ಗಿವನ್' ಹಡಗು ಸೂಯೆಜ್ ಕಾಲುವೆಯಲ್ಲಿ ಸಿಲುಕಿದ ಬಳಿಕ ಜಗತ್ತು ಬಹುದೊಡ್ಡ ಪಾಠ ಕಲಿತಿದೆ. ಇಷ್ಟು ದಿನ ‘ಸೂಯೆಜ್ ಕಾಲುವೆ'ಯನ್ನೇ ನಂಬಿ ಕೂತಿದ್ದ ಜಗತ್ತಿನ ದೊಡ್ಡ, ದೊಡ್ಡ ಸಂಸ್ಥೆಗಳು ಪರ್ಯಾಯ ದಾರಿ ಹುಡುಕಿವೆ. ಈ ನಡುವೆ ಸೂಯೆಜ್ ಕಾಲುವೆಯನ್ನೇ ಮತ್ತಷ್ಟು ಅಗಲ ಮಾಡಲು ಪ್ರಾಧಿಕಾರವೂ ದಿಟ್ಟ ಹೆಜ್ಜೆ ಇಟ್ಟಿದೆ. ಸೂಯೆಜ್ ಕಾಲುವೆಯನ್ನು ಅಗಲ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ತನ್ನ ರಾಷ್ಟ್ರಕ್ಕೆ ಆದಾಯ ತರುತ್ತಿರುವ ಪ್ರಮುಖ ಆದಾಯದ ಮೂಲ ಸೂಯೆಜ್ ಕಾಲುವೆಯ ಘನತೆ ಉಳಿಸಲು ಈಜಿಪ್ಟ್ ಮುಂದಾಗಿದೆ.

40 ಮೀಟರ್ ಅಗಲ..!
2021ರ ಮಾರ್ಚ್‌ನಲ್ಲಿ ನಡೆದಿದ್ದ ಘಟನೆಯಿಂದ ಸೂಯೆಜ್ ಕಾಲುವೆ ಪ್ರಾಧಿಕಾರ ಎಚ್ಚೆತ್ತುಕೊಂಡು ಕಾಲುವೆ ಅಂಚನ್ನು ಅಗಲ ಮಾಡುತ್ತಿದೆ. ‘ಎವರ್ ಗಿವನ್' ಸಿಲುಕಿದ್ದ ಜಾಗದ ಸುತ್ತಮುತ್ತ ಕಾಮಗಾರಿ ಶುರುವಾಗಲಿದೆ. ಸುಮಾರು 30 ಕಿಲೋ ಮೀಟರ್ ಮಾರ್ಗದಲ್ಲಿ 40 ಮೀಟರ್ ಅಂದ್ರೆ 131 ಅಡಿಗಳಷ್ಟು ಕಾಲೆವೆಯನ್ನ ಅಗಲ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ‘ಎವರ್ ಗಿವನ್' ಸಿಲುಕಿದ್ದ ಜಾಗದಲ್ಲಿ ಮರಳಿಗೆ ಸಿಲುಕದಂತೆ ಮಾಡಲು 72 ಅಡಿ ಆಳಕ್ಕೆ ಗುಂಡಿ ತೋಡಲು ನಿರ್ಧರಿಸಲಾಗಿದೆ. ಈ ಮೂಲಕ ಭವಿಷ್ಯದ ದೃಷ್ಟಿಯಿಂದಲೂ ಕಾಲುವೆಯನ್ನ ಭದ್ರ ಮಾಡಲು ಮುಂದಾಗಿದೆ ಸೂಯೆಜ್ ಕಾಲುವೆ ಪ್ರಾಧಿಕಾರ.

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು
ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.

1869ರಲ್ಲಿ ಕಾಲುವೆ ನಿರ್ಮಾಣ..!
ಇಡೀ ಜಗತ್ತು ನೆಪೋಲಿಯನ್‌ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನ ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.
Recommended Video

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!
ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು ‘ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನ ಬಂದ್ ಮಾಡಲಾಗಿತ್ತು. ಈಜಿಪ್ಟ್ ಸರ್ಕಾರಕ್ಕೆ ಈಗಿನ ಪರಿಸ್ಥಿತಿಯಲ್ಲಿ ಈ ಕಾಲುವೆಯೇ ಆಧಾರವಾಗಿದ್ದು, ಲಕ್ಷಾಂತರ ಕೋಟಿ ಆದಾಯವನ್ನು ಇಲ್ಲಿಂದಲೇ ಗಳಿಸುತ್ತಿದೆ ಈಜಿಪ್ಟ್.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications