• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಮುಚ್ಚಿಟ್ಟಿದೆಯಾ ಅಮೆರಿಕಾ?

|
Google Oneindia Kannada News

ಕಾಬೂಲ್, ಅಕ್ಟೋಬರ್ 30: ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರದ ಪತನ, ಯುಎಸ್ ಸೇನೆ ವಾಪಸ್ ತೆಗೆದುಕೊಂಡಿರುವುದರ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಮರೆ ಮಾಚಲಾಗುತ್ತಿದೆ ಎಂದು ಪೆಂಟಗಾನ್ ಆರೋಪಿಸಿದೆ.

"ಕಳೆದ ಆಗಸ್ಟ್‌ನಲ್ಲಿ ಏನಾಯಿತು ಎಂಬುದರ ಸಂಪೂರ್ಣ ಚಿತ್ರಣ. ಮುಂದೆ ಏನಾಗಬಹುದು ಎಂಬುದನ್ನು ಸೂಚಿಸುವ ಎಚ್ಚರಿಕೆಯ ಸುಳಿವಿನ ಬಗ್ಗೆ ರಕ್ಷಣಾ ಮತ್ತು ರಾಜ್ಯ ಇಲಾಖೆಗಳು ಸ್ಪಷ್ಟಪಡಿಸಬೇಕು. ಆ ಮೂಲಕ ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿಯನ್ನು ಬಿಡುಗಡೆಗೊಳಿಸಿದ ನಂತರವಷ್ಟೇ ಸತ್ಯಾಂಶ ಬಹಿರಂಗವಾಗಲಿದೆ," ಎಂದು ಅಫ್ಘಾನಿಸ್ತಾನ ಪುನರ್ ನಿರ್ಮಾಣದ ವಿಶೇಷ ಇನ್ಸ್ ಪೆಕ್ಟರ್ ಜನರಲ್ (SIGAR) ಜಾನ್ ಸೊಪ್ಕೊ ತಿಳಿಸಿದ್ದಾರೆ.

ಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರುಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರು

"ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಿದ ಹಿನ್ನೆಲೆ ಭದ್ರತಾ ದೃಷ್ಟಿಯಿಂದಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಅಫ್ಘನ್ನರು ಮತ್ತು ಅಫ್ಘಾನ್ ಪಾಲುದಾರ ಸಂಸ್ಥೆಗಳ ಗುರುತು ರಕ್ಷಿಸುವ ಉದ್ದೇಶವನ್ನು ಇಟ್ಟುಕೊಂಡು ಸಾರ್ವಜನಿಕರ ದಾಖಲೆಗಳಿಂದ ಕೆಲವು ದಾಖಲೆಗಳನ್ನು ತೆಗೆದು ಹಾಕಲಾಗಿದೆ," ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಗುರುತರ ಮಾಹಿತಿ ಸಂರಕ್ಷಿಸುವ ಉದ್ದೇಶ:

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್ ಸರ್ಕಾರ ಮುಚ್ಚಟ್ಟಿದೆ ಎಂಬ ಆರೋಪಕ್ಕೆ ಪೆಂಟಗನ್ ಈವರೆಗೂ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಗುರುತನ್ನು ರಕ್ಷಿಸುವ ಉದ್ದೇಶದಿಂದ ಕೆಲವು ಮಾಹಿತಿಯನ್ನು ಅಡಗಿಸಿಡಲಾಗಿದೆ. ಅಫ್ಘಾನಿಸ್ತಾನ ಪುನರ್ ನಿರ್ಮಾಣದ ವಿಶೇಷ ಇನ್ಸ್ ಪೆಕ್ಟರ್ ಜನರಲ್ ಈ ಮಾಹಿತಿಯನ್ನು ಮತ್ತೊಮ್ಮೆ ಸೇರಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಯುಎಸ್ ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಅಫ್ಘನ್ನರ ಕುರಿತು ಕೆಲವು ವರದಿಗಳಿಗೆ ನಿರ್ಬಂಧ:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿದ ನಂತರ, ಯುಎಸ್ ಹಾಗೂ ಅಫ್ಘಾನಿಸ್ತಾನದ ಕೆಲವು ವಲಸಿಗರನ್ನು ಸುರಕ್ಷಿತವಾಗಿ ಇರಿಸುವ ಜವಾಬ್ದಾರಿ ಹೆಗಲೇರಿತು. ಈ ನಿಟ್ಟಿನಲ್ಲಿ ತಾಲಿಬಾನ್ ಒಂದು ಕಡೆ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಯುಎಸ್ ಕರೆ ತಂದಿರುವ ನಿರಾಶ್ರಿತರ ರಕ್ಷಣೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಯಿತು. ಹೀಗಾಗಿ ಅಫ್ಘಾನಿಸ್ತಾನ್ ಮತ್ತು ಸ್ಥಳಾಂತರಕ್ಕೆ ಸಂಬಂಧಿಸಿದ ಕೆಲವು ವರದಿಗಳನ್ನು ಆನ್‌ಲೈನ್ ಮೂಲಕ ಪ್ರಕಟಿಸದಂತೆ ರಾಜ್ಯ ಇಲಾಖೆಯು ಕೇಳಿಕೊಂಡಿತ್ತು ಎಂದು ಸೋಪ್ಕೊ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯ ಇಲಾಖೆಯು "ನಮ್ಮ ವರದಿಗಳಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳಿಗೆ ಯಾವುದೇ ನಿರ್ದಿಷ್ಟ ಬೆದರಿಕೆಗಳು ಎದುರಾಗಲು ಸಾಧ್ಯವಿಲ್ಲ" ಎಂದು ಸೋಪ್ಕೊ ಹೇಳಿದ್ದಾರೆ. ಅವರು ಮನಸ್ಸಿಲ್ಲದ ಮನಸ್ಸಿನಲ್ಲಿ ದಾಖಲೆಗಳ ಮೇಲೆ ನಿರ್ಬಂಧ ವಿಧಿಸಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ SIGAR ವೆಬ್‌ಸೈಟ್‌ನಲ್ಲಿ ಉಳಿದಿರುವ 2,400 ಅಂಶಗಳ ಕುರಿತು ಮರು ಪರಿಶೀಲನೆಗೆ ರಾಜ್ಯ ವಿಭಾಗವು ಕೋರಿದೆ. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹೆಸರನ್ನು ವರದಿಗಳಿಂದ ತೆಗೆದು ಹಾಕುವಂತಹ ಕೆಲವು ವಿನಂತಿಗಳು ವಿಲಕ್ಷಣವಾಗಿವೆ ಎಂದು ಸೋಪ್ಕೊ ಹೇಳಿದ್ದಾರೆ. ಪರಿಶೀಲನೆಯ ನಂತರ ಏಜೆನ್ಸಿಯು ಕೇವಲ ನಾಲ್ಕು ಅಂಶಗಳನ್ನು ತೆಗೆದು ಹಾಕಲು ಅರ್ಹವಾಗಿದ್ದು, ಉಳಿದ ಅಂಶಗಳಿಗೆ ಅವಕಾಶ ನೀಡಲಾಗಿತು.

2015ರಿಂದ ಸಾರ್ವಜನಿಕ ಬಿಡುಗಡೆಗೆ ನಿರ್ಬಂಧ:

ಯುಎಸ್ ಬೆಂಬಲಿತ ಅಫ್ಘಾನ್ ಸರ್ಕಾರ ಮತ್ತು ಮಿಲಿಟರಿಯ ಪತನದ ತನಿಖೆಯನ್ನು ಕಾಂಗ್ರೆಸ್ ಅವರಿಗೆ ವಹಿಸಲಾಗಿದೆ. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಅಲಿ ಘನಿ ಸರ್ಕಾರದ ಕೋರಿಕೆಯ ಮೇರೆಗೆ ಪೆಂಟಗನ್ 2015 ರಿಂದ ಸಾರ್ವಜನಿಕ ಬಿಡುಗಡೆಯನ್ನು ನಿರ್ಬಂಧಿಸಿತು ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರರು ಹೇಳಿದ್ದಾರೆ. "ಬಹುಪಾಲು ಮಾಹಿತಿಯು ಅಫ್ಘಾನ್ ಸೇನಾ ಪಡೆಯ ಸಾಮರ್ಥ್ಯ ಮತ್ತು ಅಪಾಯದ ಬಗ್ಗೆ ಕೂಡಿದೆ. ಅಫ್ಘಾನಿಸ್ತಾನದ ಭದ್ರತಾ ಪಡೆಯು ನಿಜವಾಗಿಯೂ ಹೋರಾಟದ ಶಕ್ತಿಯೇ ಅಥವಾ ಖಾಲಿ ಪೆಟ್ಟಿಗೆಯೇ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ," ಎಂದು ಹೇಳಿದ್ದಾರೆ.

English summary
Afghanistan Data Being Concealed By US Govt says Watchdog. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X