Gautam Adani Bribery case: ಯಾವುದೇ ಕ್ಷಣದಲ್ಲಿ ಗೌತಮ್ ಅದಾನಿ ಬಂಧನ ಸಾಧ್ಯತೆ: ನಡೆದಿತ್ತು ರೋಚಕ ತನಿಖೆ!
Gautam Adani Bribery case: ಭಾರತದ ಪ್ರಖ್ಯಾತ ಉದ್ಯಮಿ ಹಾಗೂ ಬಿಲೆನಿಯರ್ ಗೌತಮ್ ಅದಾನಿ ಇದೀಗ ಭಾರೀ ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಅವರ ಷೇರುಗಳ ಮೌಲ್ಯ ಕುಸಿಯಲು ಪ್ರಾರಂಭಿವೆ. ಭಾರತೀಯ ಅಧಿಕಾರಿಗಳಿಗೆ ಕೋಟ್ಯಾಂತರ ರೂಪಾಯಿ ಲಂಚ ಕೊಟ್ಟಿರುವ ಆರೋಪ ಅದಾನಿಯ ಮೇಲೆ ಇದೆ. ಅಲ್ಲದೇ ಈ ಸಂಬಂಧ ಅಮೆರಿಕದ ಕೋರ್ಟ್‌ನಲ್ಲಿ ದೋಷಾರೋಪ (ಚಾರ್ಜ್‌ಶೀಟ್) ಸಲ್ಲಿಸಲಾಗಿದೆ. ಇದರಿಂದ ಅದಾನಿಗೆ ಬಹುದೊಡ್ಡ ಸಂಕಷ್ಟವೇ ಎದುರಾಗಿದೆ. ಅಲ್ಲದೇ ಅದಾನಿ ಬಂಧನಕ್ಕೆ ವಾರೆಂಟ್ ಸಹ ಹೊರಡಿಸಲಾಗಿದೆ.
ಎರಡು ಪ್ರಮುಖ ಕೇಸ್‌ಗಳು ಅದಾನಿ ಮೇಲಿದೆ. ಇನ್ನು ಭಾರತದಲ್ಲಿ ಸೌರಶಕ್ತಿಯಿಂದ ಪವರ್ ಉತ್ಪಾದನೆ ಮಾಡುವ ಸ್ಕೀಂಗಳ (ಯೋಜನೆಗಳಿಗೆ) ಗುತ್ತಿಗೆಯನ್ನು ಸರಳವಾಗಿ ಪಡೆಯುವುದಕ್ಕೆ ಅಧಿಕಾರಿಗಳಿಗೆ ಬರೋಬ್ಬರಿ 25 ಕೋಟಿ ಡಾಲರ್ ಕೊಟ್ಟಿದ್ದಾರೆ ಇಲ್ಲವೇ ಕೊಡಲು ಮುಂದಾಗಿದ್ದರು ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಗೌತಮ್ ಅದಾನಿ ಹಾಗೂ ಅವರ ಸಹೋದರನ ಮಗ ಸಾಗರ್ ಅದಾನಿ ಅವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಕೆಯಾಗುತ್ತಿದ್ದಂತೆಯೇ ಇವರ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿದೆ!

ಇನ್ನು ಎರಡು ಗಂಭೀರ (ಸಾಮಾನಾಂತರ) ಕೇಸ್‌ಗಳಿದ್ದು, ಒಂದು ಕ್ರಿಮಿನಲ್ ಪ್ರಕರಣವಾಗಿದೆ. ಮಹತ್ವದ ವಿಷಯವೆಂದರೆ, ಈ ಪ್ರಕರಣದ ತನಿಖೆಯನ್ನು ವಿಶ್ವದ ಬಲಿಷ್ಠ ಹಾಗೂ ಪ್ರಮುಖ ತನಿಖಾ ಸಂಸ್ಥೆಗಳಲ್ಲಿ ಒಂದು ಎನ್ನುವ ಪ್ರಖ್ಯಾತಿಯನ್ನು ಗಳಿಸಿರುವ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (Fbi) ನಡೆಸಿದೆ. ಇದೇ ಕಾರಣಕ್ಕೆ ಈ ವಿಷಯ ಹೆಚ್ಚು ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ವಿಶ್ವದ ಮೋಸ್ಟ್ ನಂಬಿಕಾರ್ಹ ತನಿಖಾ ಸಂಸ್ಥೆ ಎನ್ನುವ ಹೆಗ್ಗಳಿಕೆ ಎಫ್‌ಬಿಐಗೆ ಇದೆ.
ಅಲ್ಲದೇ ಮತ್ತು ನ್ಯೂಯಾರ್ಕ್‌ನ ಅಮೆರಿಕದ ಅಟಾರ್ನಿ ಕಚೇರಿ ಹಾಗೂ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಕ್ರಿಮಿನಲ್ ಡಿವಿಷನ್ (ಅಪರಾಧ ತನಿಖಾ ವಿಭಾಗ)ನಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಅದಾನಿ ವಿರುದ್ಧದ ಈ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

ಇನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಹಾಗೂ ಸೆಕ್ಯುರಿಟೀಸ್ ಎಕ್ಸಚೇಂಜ್ ಕಮಿಷನ್ (ಎಸ್‌ಇಸಿ) ಈ ಬಗ್ಗೆ ದೂರಿದ್ದು. ಸೆಕ್ಯುರಿಟೀಸ್ ಎಕ್ಸಚೇಂಜ್ ಕಮಿಷನ್‌ನಿಂದಲೂ ಸಾರ್ವಜನಿಕ ದೂರು ದಾಖಲಾಗಿದೆ. ಈ ಬೆಳವಣಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು. ವಿವಿಧ ದೇಶಗಳು ಭಾರತದ ಕಡೆ ನೋಡುತ್ತಿವೆ.
ತನಿಖೆಗೆ ಉನ್ನತ ಅಧಿಕಾರಿಗಳ ನೇಮಕ: ಅದಾನಿ ಸಮೂಹವು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ದೇಶಗಳಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟನ್ನು ಹೊಂದಿದೆ. ಈ ಕಾರಣಕ್ಕೆ ಅಮೆರಿಕ ಸರ್ಕಾರವೂ ಸಹ ಈ ಪ್ರಮುಖ ತನಿಖೆಯನ್ನು ನಡೆಸುವುದಕ್ಕೆ ಎಫ್‌ಬಿಐನ ಘಟಾನುಘಟಿ ಅಧಿಕಾರಿಗಳನ್ನೇ ತನಿಖೆಗೆ ನೇಮಿಸಿದೆ ಎಂದು ಹೇಳಲಾಗಿದೆ. ಇದರಿಂದ ಪ್ರಕರಣದ ಹಲವು ವಿಚಾರಗಳು ಈಗ ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಗೌತಮ್ ಅದಾನಿ ಮೇಲೆ ಕೇಳಿ ಬಂದಿರುವ ಆರೋಪವೇನು ?
ಗೌತಮ್ ಅದಾನಿ ಅವರು ಗುತ್ತಿಗೆಯನ್ನು ಪಡೆಯಲು ವಾಮಾರ್ಗ ಅನುಸರಿಸಿದ್ದಾರೆ. ಅಲ್ಲದೇ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸೌರಶಕ್ತಿ ಯೋಜನೆಯ ಗುತ್ತಿಗೆಯಿಂದ ಮುಂಬರು 20 ವರ್ಷಗಳ ಅವಧಿಯಲ್ಲಿ ತೆರಿಗೆ ಪಾವತಿ ಮಾಡಿದರೆ, ಬರೋಬ್ಬರಿ 200 ಕೋಟಿ ಡಾಲರ್‌ನಷ್ಟು ಲಾಭವೇ ಸಿಗಲಿದೆ ಎಂದು ನಂಬಿಸಿ, ಹೂಡಿಕೆದಾರರನ್ನು ವಂಚನೆ ಮಾಡಲಾಗಿದೆ. ಇದು ಅಮೆರಿಕದ ಹೂಡಿಕೆದಾರರು ಹಾಗೂ ಷೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯ ಪ್ರವೇಶಿಸಿದೆ ಎಂದು ವರದಿಯಾಗಿದೆ.
ಆರೋಪ ತಳ್ಳಿ ಹಾಕಿದ ಅದಾನಿ ಗ್ರೂಪ್ಸ್
ಇನ್ನು ಅಮೆರಿಕದ ಗಂಭೀರ ಆರೋಪಗಳನ್ನು ಅದಾನಿ ಸಮೂಹವು ತಳ್ಳಿ ಹಾಕಿದೆ. ಈ ಆರೋಪಗಳೆಲ್ಲವೂ ನಿರಾಧಾರವಾಗಿದೆ. ನಾವು ಕಾನೂನು ಹೋರಾಟವನ್ನು ಮುಂದುವರಿಸಲಿದ್ದೇವೆ. ಈ ಎಲ್ಲಾ ಆರೋಪಗಳಿಗೂ ಕಾನೂನಿನ ಮೂಲಕವೇ ನಾವು ಉತ್ತರ ಕೊಡುತ್ತೇವೆ ಎಂದು ಅದಾನಿ ಸಮೂಹವು ಪ್ರಕಟಣೆಯಲ್ಲಿ ಹೇಳಿದೆ.
ಅದಾನಿ ಮೇಲೆ ಆರೋಪ ಕೇಳಿ ಬಂದ ಬೆನ್ನಲ್ಲೇ ಷೇರುಗಳು ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿಯಲು ಪ್ರಾರಂಭಿಸಿವೆ.












Click it and Unblock the Notifications