ಪಾಕಿಸ್ತಾನ-ಅಫ್ಘಾನಿಸ್ತಾನ ಮಧ್ಯೆ 'ಉಗ್ರ' ಸಮರ

Subscribe to Oneindia Kannada
ಬೆಂಗಳೂರು, ಫೆಬ್ರವರಿ 17: ಗುರುವಾರ ಸಂಭವಿಸಿದ ಭೀಕರ ಬಾಂಬ್ ಸ್ಪೋಟದ ನಂತರ ಪಾಕಿಸ್ತಾನ ಸರಕಾರ ಎಚ್ಚೆತ್ತುಕೊಂಡಿದೆ. ಉಗ್ರರ ಮೇಲೆ ಸಮರವನ್ನೇ ಸಾರಿರುವ ಪಾಕಿಸ್ತಾನ ಕನಿಷ್ಠ 29 ಉಗ್ರರನ್ನು ಕೊಂದಿದ್ದು 76 ಉಗ್ರರನ್ನು ತಕ್ಷಣ ತನಗೊಪ್ಪಿಸುವಂತೆ ಅಫ್ಘಾನಿಸ್ತಾನಕ್ಕೆ ಬೇಡಿಕೆ ಸಲ್ಲಿಸಿದೆ.

ಗುರುವಾರ ಸಂಜೆ ಸಿಂಧ್ ಪ್ರಾಂತ್ಯದ ಸೂಫಿ ಮಸೀದಿಯೊಂದರಲ್ಲಿ ಐಸಿಲ್ (ಐಸಿಸ್) ಉಗ್ರರು ನಡೆಸಿದ ಭೀಕರ ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ 75 ಜನ ಸಾವನ್ನಪ್ಪಿದ್ದರು. 20ಕ್ಕೂ ಹೆಚ್ಚು ಮಕ್ಕಳು ಈ ಸ್ಪೋಟದಲ್ಲಿ ಅಸುನೀಗಿದ್ದು, ಸ್ಪೋಟದ ತೀವ್ರತೆಗೆ ಮಸೀದಿಯ ಗೋಡೆಗಳು ರಕ್ತಸಿಕ್ತವಾಗಿವೆ.[ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ: 100ಕ್ಕೂ ಹೆಚ್ಚು ಸಾವು]

A ‘Terror’ War Between Afghanistan and Pakistan After Sufi Shrine Attack

2014ರ ನಂತರ ಪಾಕಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಭಯಾನಕ ಬಾಂಬ್ ಸ್ಪೋಟ ಇದಾಗಿದೆ. ಅಲ್ಲದೆ ಕಳೆದೊಂದು ವಾರದಲ್ಲಿ ಪಾಕಿಸ್ತಾನದಲ್ಲಿ ಬರೋಬ್ಬರಿ 6 ಬಾಂಬ್ ಸ್ಪೋಟಗಳು ಸಂಭವಿಸಿದ್ದು 99 ಜನ ಸಾವನ್ನಪ್ಪಿದ್ದಾರೆ.[ಅಣ್ಣನನ್ನೇ ವಿಷವುಣಿಸಿ ಕೊಂದ ಉತ್ತರ ಕೊರಿಯಾ ಸರ್ವಾಧಿಕಾರಿ?]

ಘಟನೆಯ ನಂತರ ಕುಪಿತಗೊಂಡಿರುವ ಪಾಕಿಸ್ತಾನ ಸರಕಾರ ದೊಡ್ಡ ಮಟ್ಟಕ್ಕೆ ಉಗ್ರ ನಿಗ್ರಹಕ್ಕೆ ಮುಂದಾಗಿದೆ. ಅಫ್ಘಾನಿಸ್ತಾನದ ಗಡಿಯಲ್ಲಿದ್ದ ಎರಡು ಪ್ರಮುಖ ರಸ್ತೆಗಳನ್ನು ಪಾಕಿಸ್ತಾನ ಬಂದ್ ಮಾಡಿದೆ. ಮಾತ್ರವಲ್ಲದೆ ಸಿಂಧ್ ಪ್ರಾಂತ್ಯದಲ್ಲಿ 18 ಹಾಗೂ ವಾಯುವ್ಯ ಪ್ರಾತ್ಯದಲ್ಲಿ 11 ಉಗ್ರರನ್ನು ಕೊಂದಿದೆ. ಮತ್ತು ಅಪ್ಘಾನಿಸ್ತಾನದಲ್ಲಿ ಅಡಗಿಕೊಂಡಿರುವ 76 ಉಗ್ರರನ್ನು ತನಗೊಪ್ಪಿಸುವಂತೆ ಅಫ್ಘಾನಿಸ್ತಾನ ಸರ್ಕಾರಕ್ಕೆ ಪಾಕಿಸ್ತಾನ ಕೇಳಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistan closed two of its border crossings with Afghanistan and asked Afghan government to hand over 76 terrorists following a suicide attack in Sufi shrine that killed at least 75 people.
Please Wait while comments are loading...