ಪಾಸ್‌ಪೋರ್ಟ್‌ಗಾಗಿ ಎರಡು ದಿನಗಳಿಂದ ಕ್ಯೂನಲ್ಲಿ ನಿಂತಾಗಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೊಲಂಬೊ, ಜುಲೈ 7: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಿಂದ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಲು ಪಾಸ್‌ಪೋರ್ಟ್ ಪಡೆಯಲು ಎರಡು ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಶ್ರೀಲಂಕಾದ ಗರ್ಭಿಣಿ ಮಹಿಳೆಯೊಬ್ಬರು ಗುರುವಾರ ತನ್ನ ಸರದಿಗಾಗಿ ಕಾಯುತ್ತಿರುವಾಗ ಹೆರಿಗೆ ನೋವು ಕಾಣಿಸಿಕೊಂಡು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕೊಲಂಬೊದಲ್ಲಿ ವಲಸೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಶ್ರೀಲಂಕಾ ಸೇನೆಯ ಸಿಬ್ಬಂದಿ ಗುರುವಾರ ಬೆಳಗ್ಗೆ ಆವರಣದಲ್ಲಿ ಹೆರಿಗೆ ನೋವು ಅನುಭವಿಸುತ್ತಿರುವ 26 ವರ್ಷದ ಮಹಿಳೆಯನ್ನು ಗಮನಿಸಿ ಕ್ಯಾಸಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆಗೆ ಮಗುವಿಗೆ ಜನ್ಮ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್ ಹಿಲ್ಸ್‌ ನಿವಾಸಿಯಾದ ಮಹಿಳೆ ತನ್ನ ಪತಿಯೊಂದಿಗೆ ಕಳೆದ ಎರಡು ದಿನಗಳಿಂದ ವಿದೇಶದಲ್ಲಿ ಉದ್ಯೋಗ ಪಡೆಯಲು ಪಾಸ್‌ಪೋರ್ಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಜನ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ, ಆಹಾರ ಕೊರತೆ, ಇಂಧನ ಕೊರತೆಯಿಂದ ಜನ ಹೈರಾಣಾಗಿದ್ದಾರೆ. ಉದ್ಯೋಗ ಅರಸಿ ವಿದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಪಾಸ್‌ಪೋರ್ಟ್‌ಗಳನ್ನು ಪಡೆಯಲು ಪಾಸ್‌ಪೋರ್ಟ್‌ ಕಚೇರಿಯಲ್ಲಿ ಉದ್ದನೆಯ ಸಾಲುಗಳಲ್ಲಿ ಜನ ದಿನಗಟ್ಟಲೆ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದನಕ್ಕಾಗಿ ಸರತಿಯಲ್ಲಿ ನಿಂತಾಗ ಸತ್ತವರ ಸಂಖ್ಯೆ 15

ಇಂದನಕ್ಕಾಗಿ ಸರತಿಯಲ್ಲಿ ನಿಂತಾಗ ಸತ್ತವರ ಸಂಖ್ಯೆ 15

ಮತ್ತೊಂದು ಪ್ರಕರಣದಲ್ಲಿ, ಇಂಧನ ಪಡೆಯಲು ಸರತಿ ಸಾಲಿನಲ್ಲಿ ಕಾಯುತ್ತಿದ್ದ ಇನ್ನೊಬ್ಬ ವ್ಯಕ್ತಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್‌ನಿಂದ ಇಂಧನಕ್ಕಾಗಿ ಸರತಿಯಲ್ಲಿ ನಿಂತಾಗ ಸತ್ತವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ತ್ರಿಚಕ್ರ ವಾಹನದಲ್ಲಿ 60 ವರ್ಷದ ಐಸ್ ಕ್ರೀಮ್ ಮಾರಾಟಗಾರ ಇಲ್ಲಿಯ ದಕ್ಷಿಣ ಪಯಾಗಲದಲ್ಲಿ ಇಂಧನಕ್ಕಾಗಿ ಸತತ ಎರಡು ದಿನಗಳಿಂದ ಸರಯಿಯಲ್ಲಿ ನಿಂತಿದ್ದರು. ಸರತಿ ಸಾಲಿನಲ್ಲಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಲ್ಲಿ ಘೋಷಿಸಲಾಯಿತು.

ಇಂಧನ ಕೊರತೆಯಿಂದ ಕಂಗಾಲಾದ ದ್ವೀಪರಾಷ್ಟ್ರ

ಇಂಧನ ಕೊರತೆಯಿಂದ ಕಂಗಾಲಾದ ದ್ವೀಪರಾಷ್ಟ್ರ

ರಾಜ್ಯ ಇಂಧನ ಘಟಕದ ಸಿಪಿಸಿ ಪಂಪ್‌ಗಳು 10 ದಿನಗಳ ಹಿಂದೆ ದೇಶಕ್ಕೆ ಆಗಮಿಸುವ ಸರಬರಾಜು ಹಡಗುಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಪೆಟ್ರೋಲ್ ಬಂಕ್‌ಗಳು ತಿಳಿಸಿವೆ.

200 ಕ್ಕೂ ಹೆಚ್ಚು ಪಂಪಿಂಗ್ ಸ್ಟೇಷನ್‌ಗಳನ್ನು ನಡೆಸುತ್ತಿರುವ ಎಲ್‌ಐಒಸಿ, ಈಗ ಟ್ರಿಂಕೋಮಲಿಯ ಪೂರ್ವ ಜಿಲ್ಲೆಯಲ್ಲಿರುವ ತಮ್ಮ ಶೇಖರಣಾ ಟ್ಯಾಂಕ್‌ಗಳಿಂದ ತನ್ನ ಸರಬರಾಜುಗಳನ್ನು ಸೀಮಿತವಾಗಿ ಬಳಕೆ ಮಾಡುತ್ತಿದೆ.

ಐಒಸಿಯಿಂದ ಹಡಗು ಬರುವವರೆಗೂ ಜುಲೈ 22ರವರೆಗೆ ಯಾವುದೇ ಇಂಧನ ಸಾಗಿಸುವ ಹಡಗುಗಳು ಲಭ್ಯವಿಲ್ಲ ಎಂದು ಇಂಧನ ಸಚಿವ ಕಾಂಚನಾ ವಿಜೆಶೇಖರ ಸಂಸತ್ತಿಗೆ ತಿಳಿಸಿದ್ದಾರೆ. ಜುಲೈ 15 ರೊಳಗೆ ಇಂಧನ ಪೂರೈಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ತೊಂದರೆ

ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ತೊಂದರೆ

ಶ್ರೀಲಂಕಾವು 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ವಿದೇಶಿ ವಿನಿಮಯ ಮೀಸಲುಗಳಲ್ಲಿನ ತೀವ್ರ ಕೊರತೆ ನೀಗಿಸಲು ಕನಿಷ್ಠ 4 ಶತಕೋಟಿ ಯುಎಸ್ ಡಾಲರ್ ಪಡೆಯಬೇಕಾಗಿದೆ.

ಇಂಧನ ಕೊರತೆಯಿಂದ ಜನ ಕಂಗಾಲು

ಇಂಧನ ಕೊರತೆಯಿಂದ ಜನ ಕಂಗಾಲು

ಇಂಧನವನ್ನು ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯ ಮೀಸಲು ಖಾಲಿಯಾದ ನಂತರ ಶ್ರೀಲಂಕಾದ ಆರ್ಥಿಕತೆ ಸ್ಥಗಿತವಾಗಿದೆ. ಆಮದು ಮಾಡಿಕೊಳ್ಳಲು ಸರ್ಕಾರಕ್ಕೆ ಡಾಲರ್‌ಗಳನ್ನು ಹೊಂದಿಸಲು ಸಾಧ್ಯವಾಗದ ಕಾರಣ ಶ್ರೀಲಂಕಾ ಜನತೆ ಇಂಧನ ಮತ್ತು ಅಡುಗೆ ಅನಿಲಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ದ್ವೀಪ ರಾಷ್ಟ್ರದಲ್ಲಿ ಆಹಾರ, ಇಂಧನಗಳ ಕೊರತೆಯಿಂದ ಜನ ನಲುಗಿದ್ದಾರೆ. ಇಂಧನ ಬಳಕೆ ತಪ್ಪಿಸಲು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+